ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: 12 ವರ್ಷಗಳ ಬಳಿಕ ಪ್ರಮುಖ ಆರೋಪಿಯ ಬಂಧನ

|

Updated on: Jan 11, 2024 | 8:20 AM

ಕೇರಳದ ಪ್ರಾಧ್ಯಾಪಕರಾದ ಟಿಜೆ ಜೋಸೆಫ್​ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ತನಿಖೆ ಪೂರ್ಣಗೊಂಡಿದೆ. ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸವಾದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಎನ್‌ಐಎ ಹೇಳಿಕೊಂಡಿದೆ.

ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: 12 ವರ್ಷಗಳ ಬಳಿಕ ಪ್ರಮುಖ ಆರೋಪಿಯ ಬಂಧನ
ಎನ್​ಐಎ
Follow us on

ಕೇರಳದ ಪ್ರಾಧ್ಯಾಪಕರಾದ ಟಿಜೆ ಜೋಸೆಫ್​ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ತನಿಖೆ ಪೂರ್ಣಗೊಂಡಿದೆ. ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸವಾದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಎನ್‌ಐಎ ಹೇಳಿಕೊಂಡಿದೆ.

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು 10 ಲಕ್ಷ ರೂಪಾಯಿ ಬಹುಮಾನವನ್ನೂ ಇಡಲಾಗಿತ್ತು. ನ್‌ಐಎ ಆರೋಪಿಯನ್ನು ಕೇರಳದ ಕಣ್ಣೂರಿನ ಮಟ್ಟನೂರು ಪ್ರದೇಶದಲ್ಲಿ ಬಂಧಿಸಿದೆ. ಸವಾದ್ ವಿರುದ್ಧದ ಆರೋಪಗಳ ಪ್ರಕಾರ, 2010 ರಲ್ಲಿ ಪ್ರೊಫೆಸರ್ ಟಿಜೆ ಜೋಸೆಫ್ ಅವರ ಕೈ ಕತ್ತರಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು.

ಎನ್‌ಐಎ ಸವಾದ್ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದೆ. ಈ ಪ್ರಕರಣದ ಚಾರ್ಜ್ ಶೀಟ್ ಅನ್ನು ಜನವರಿ 10, 2011 ರಂದು ಸವಾದ್ ಮತ್ತು ಇತರ ಆರೋಪಿಗಳ ವಿರುದ್ಧ ಪ್ರಮುಖ ಆರೋಪಿಯಾಗಿ ಸಲ್ಲಿಸಲಾಯಿತು.

ಮತ್ತಷ್ಟು ಓದಿ: ದೆಹಲಿ: ಚಾಕುವಿನಿಂದ ಇರಿದು ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ, ಜೀವ ಹೋಗುವವರೆಗೂ ದೇಹವನ್ನು ಮೃಗಗಳಂತೆ ಎಳೆದಾಡಿದ್ರು

ಪ್ರೊಫೆಸರ್ ಟಿಜೆ ಜೋಸೆಫ್ ಮೇಲಿನ ದಾಳಿಯನ್ನು ಭಾರತದಲ್ಲಿ ಈ ರೀತಿಯ ಮೊದಲ ಪ್ರಕರಣವೆಂದು ಪರಿಗಣಿಸಲಾಗಿದೆ. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತವನ್ನು ಪ್ರತಿಬಿಂಬಿಸುವ ಘಟನೆ ಎಂದು ಪರಿಗಣಿಸಲಾಗಿದೆ.

ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ ಒಟ್ಟು 19 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 8 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ