ಲಾಕ್ಡೌನ್ ಇದ್ದರೂ.. ಓಪನ್ ಥಿಯೇಟರ್ನಲ್ಲಿ Drugs ಮಾರಾಟ: ಇದು A3 ಕೈಚಳಕ!
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿದ್ದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುತ್ತಿದೆ. ಇದೀಗ, ಪ್ರಕರಣದಲ್ಲಿ A3 ಆರೋಪಿಯಾಗಿರುವ ವೀರೇನ್ ಖನ್ನಾ ಡ್ರಗ್ಸ್ ಸೇವಿಸಿ ಮಜಾ ಮಾಡಲು ಓಪನ್ ಏರ್ ಥಿಯೇಟರ್ ಪಾರ್ಟಿ ಸಹ ಆಯೋಜಿಸ್ತಿದ್ದ ಎಂದು ತಿಳಿದುಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಥಿಯೇಟರ್ಗಳು ಬಂದ್ ಆಗಿದ್ದರೂ ಈತ ಓಪನ್ ಥಿಯೇಟರ್ ಪಾರ್ಟಿ ಆಯೋಜನೆ ಮಾಡಿದ್ದನಂತೆ. ಕಾರಿನಲ್ಲೇ ಕೂತು ಓಪನ್ ಥಿಯೇಟರ್ನಲ್ಲಿ ಸಿನಿಮಾ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿದ್ದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುತ್ತಿದೆ.
ಇದೀಗ, ಪ್ರಕರಣದಲ್ಲಿ A3 ಆರೋಪಿಯಾಗಿರುವ ವೀರೇನ್ ಖನ್ನಾ ಡ್ರಗ್ಸ್ ಸೇವಿಸಿ ಮಜಾ ಮಾಡಲು ಓಪನ್ ಏರ್ ಥಿಯೇಟರ್ ಪಾರ್ಟಿ ಸಹ ಆಯೋಜಿಸ್ತಿದ್ದ ಎಂದು ತಿಳಿದುಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಥಿಯೇಟರ್ಗಳು ಬಂದ್ ಆಗಿದ್ದರೂ ಈತ ಓಪನ್ ಥಿಯೇಟರ್ ಪಾರ್ಟಿ ಆಯೋಜನೆ ಮಾಡಿದ್ದನಂತೆ.
ಕಾರಿನಲ್ಲೇ ಕೂತು ಓಪನ್ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿದ್ದ ವೀರೇನ್ ಖನ್ನಾ ಈ ವೇಳೆಯಲ್ಲಿ ಡ್ರಗ್ಸ್ ಸಪ್ಲೈ ಮಾಡಿರುವ ಗುಮಾನಿ ವ್ಯಕ್ತವಾಗಿದೆ. ಕಾರಲ್ಲೇ ಕೂತು ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳ ವೀಕ್ಷಣೆ ಮಾಡುವ ಕಾರ್ಯಕ್ರಮ ಆಯೋಜಿಸುತ್ತಿದ್ದ ವೀರೇನ್ 369drivein.com ಅನ್ನೋ ವೆಬ್ಸೈಟ್ನಲ್ಲಿ ಜನರಿಗೆ ಗಾಳ ಹಾಕ್ತಿದ್ದ ಎಂಬ ಮಾಹಿತಿ ದೊರೆತಿದೆ.
ಜುಲೈ 9 ಮತ್ತು 11ರಂದು ಸರ್ಜಾಪುರದಲ್ಲಿ ಆಯೋಜನೆ ಮಾಡಿದ್ದ ಈ ಓಪನ್ ಏರ್ ಥಿಯೇಟರ್ ಪ್ರೋಗ್ರಾಮ್ನಲ್ಲಿ ಟೇಕ್ ಯುವರ್ ಓನ್ ಕಾರ್, ಓನ್ ಡ್ರಿಂಕ್ ಕಾನ್ಸೆಪ್ಟ್ ಅಡಿಯಲ್ಲಿ ಕಾರ್ಯಕ್ರಮ ನಡೆಸಿದ್ದನಂತೆ. ಜೊತೆಗೆ, ಫ್ಯಾಮಿಲಿ ಪಾರ್ಟಿ ಹೆಸರಲ್ಲಿ Drugs ಪಾರ್ಟಿ ಸಹ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವೀರೇನ್ ಖನ್ನಾ ವಿರುದ್ಧ ವಾಣಿಜ್ಯ ಮಂಡಳಿ ದೂರು ಹೀಗೆ, ಲಾಕ್ಡೌನ್ ವೇಳೆ ಓಪನ್ ಏರ್ ಥಿಯೇಟರ್ನಲ್ಲಿ ರಾಜಾರೋಷವಾಗಿ ಚಿತ್ರ ಪ್ರದರ್ಶನ ನಡೆಸಿದ್ದ ಹಿನ್ನೆಲೆಯಲ್ಲಿ ವೀರೇನ್ ಖನ್ನಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ದೂರು ದಾಖಲಿಸಿತ್ತು. ಬೆಂಗಳೂರು ಗ್ರಾಮೀಣ ವಿಭಾಗದ ಡಿಸಿ ಹಾಗೂ ಗೃಹ ಇಲಾಖೆಗೆ ಮಂಡಳಿ ಸದಸ್ಯರು ಮತ್ತು ಪ್ರದರ್ಶಕರ ವಲಯದಿಂದ ದೂರು ನೀಡಲಾಗಿತ್ತು.
ಸ್ಟಪಿನ್ ಸ್ಪೋರ್ಟ್ಸ್ ಇವೆಂಟ್ ಕಂಪನಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು ಥೀಯೇಟರ್ ನಡೆಸಲು ಅವಕಾಶ ಇರದಿದ್ರು ಕೂಡ ಈ ಆಯೋಜನೆ ಹೇಗೆ ನಡೆಯಿತು ಅನ್ನೋ ಪ್ರಶ್ನೆ ಇದೀಗ ಶುರುವಾಗಿದೆ. ಹೀಗಾಗಿ, ಪ್ರಭಾವಿಗಳ ಬೆಂಬಲದಿಂದಲೂ ವೀರೇನ್ ಖನ್ನಾ ಈ ರೀತಿ ಇವೆಂಟ್ ಆಯೋಜನೆ ಮಾಡ್ತಿದ್ರು ಅನ್ನೋ ಮಾಹಿತಿ ಬಹಿರಂಗವಾಗಿದೆ.
Published On - 2:53 pm, Mon, 7 September 20