ತಾಳಿ ಕಟ್ಟಿದ ಪತಿಯೇ ಸುಪಾರಿ ಕೊಟ್ಟಿದ್ದಾ? ಪತ್ನಿಯ ಬರ್ಬರ ಕೊಲೆಯತ್ನ CCTVಯಲ್ಲಿ ಸೆರೆ

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗಳ ಮೇಲೆ ಕೊಲೆಯತ್ನ ನಡೆದಿರುವ ಘಟನೆ ಕಾಮಾಕ್ಯ ಬಳಿಯ ಇಂದಿರಾ ಕ್ಯಾಂಟೀನ್ ಎದುರು ಸೆಪ್ಟಂಬರ್ 4ರಂದು ನಡೆದಿದೆ. ದೀಪಾ ಶ್ರೀಕುಮಾರ್ ಮತ್ತು ಆಕೆಯ ಮೊದಲ ಮಗಳು ಹಿಷಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ತಾಯಿ ಹಾಗೂ ಮಗಳು ಬೈಕ್​ನಲ್ಲಿ ಹೋಗುತ್ತಿದ್ದಾಗ ಮತೊಂದು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಬಳಿಕ ಸಾರ್ವಜನಿಕರು ಅತ್ತ ಧಾವಿಸುವುದನ್ನು ಕಂಡ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಾಯಿ […]

ತಾಳಿ ಕಟ್ಟಿದ ಪತಿಯೇ ಸುಪಾರಿ ಕೊಟ್ಟಿದ್ದಾ? ಪತ್ನಿಯ ಬರ್ಬರ ಕೊಲೆಯತ್ನ CCTVಯಲ್ಲಿ ಸೆರೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 07, 2020 | 5:40 PM

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗಳ ಮೇಲೆ ಕೊಲೆಯತ್ನ ನಡೆದಿರುವ ಘಟನೆ ಕಾಮಾಕ್ಯ ಬಳಿಯ ಇಂದಿರಾ ಕ್ಯಾಂಟೀನ್ ಎದುರು ಸೆಪ್ಟಂಬರ್ 4ರಂದು ನಡೆದಿದೆ. ದೀಪಾ ಶ್ರೀಕುಮಾರ್ ಮತ್ತು ಆಕೆಯ ಮೊದಲ ಮಗಳು ಹಿಷಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ತಾಯಿ ಹಾಗೂ ಮಗಳು ಬೈಕ್​ನಲ್ಲಿ ಹೋಗುತ್ತಿದ್ದಾಗ ಮತೊಂದು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಬಳಿಕ ಸಾರ್ವಜನಿಕರು ಅತ್ತ ಧಾವಿಸುವುದನ್ನು ಕಂಡ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಾಯಿ ಮಗಳನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಅಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನ ನಡೆಸಿರುವ ದೃಶ್ಯಾವಳಿ CCTVಯಲ್ಲಿ ಸೆರೆಯಾಗಿದೆ.

ಪತಿಯಿಂದಲೇ ಹತ್ಯೆಗೆ ಸುಪಾರಿ? ಅಂದ ಹಾಗೆ, ದೀಪಾ ಶ್ರೀಕುಮಾರ್ ಖಾಸಗಿ ಸ್ಕೂಲ್ ಸಂಸ್ಥಾಪಕ ಶ್ರೀಕುಮಾರ್ ಎಂಬುವವರ ಎರಡನೇ ಪತ್ನಿ. ಪತಿ ಪತ್ನಿಯ ನಡುವಿನ ಆಸ್ತಿ ವ್ಯಾಜ್ಯ ಸದ್ಯ ಕೋರ್ಟಿನಲ್ಲಿದೆ. ಹಾಗಾಗಿ, ಶ್ರೀಕುಮಾರ್, ಆತನ ಮಗ ಮತ್ತು ಮಗಳು ಹಾಗೂ ಅಳಿಯನಿಂದ ತಮ್ಮನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದಾನೆ ಎಂದು ದೀಪಾ ಆರೋಪಿಸಿದ್ದಾಳೆ.

ಹಾಗಾಗಿ, ದೀಪಾ ತನ್ನ ಪತಿ ಶ್ರೀಕುಮಾರ್, ಆತನ ಮಗ ಜಯಂತ್, ಮಗಳು ಮೊನಿಷಾ ಮತ್ತು ಅಳಿಯ ನವೀನ್ ವಿರುದ್ಧ CK ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.