ಬೆಂಗಳೂರು: ತಾಯಿಯ ಎದುರೇ ತಮ್ಮನನ್ನು ಕೊಂದ ಅಣ್ಣ

| Updated By: ವಿವೇಕ ಬಿರಾದಾರ

Updated on: Aug 09, 2024 | 9:43 AM

ಬೆಂಗಳೂರಿನ ಬೇಗೂರಿನ ಲಕ್ಷ್ಮೀಪುರದ ನಿವಾಸಿಗಳಾದ ಅಣ್ಣ-ತಮ್ಮಂದಿರು ಕೆಲಸದ ವಿಚಾರವಾಗಿ ಜಗಳವಾಡಿಕೊಂಡಿದ್ದಾರೆ. ಬಳಿಕ ಅಣ್ಣ ತಮ್ಮನ್ನು ತಾಯಿಯ ಎದುರೇ ಕೊಲೆ ಮಾಡಿದ್ದಾನೆ. ಆರೋಪಿ ಅಣ್ಣನನ್ನು ಬೇಗೂರು‌ ಠಾಣೆ ಪೋಲಿಸರು ಬಂಧಿಸಿದ್ದಾರೆ.

ಬೆಂಗಳೂರು: ತಾಯಿಯ ಎದುರೇ ತಮ್ಮನನ್ನು ಕೊಂದ ಅಣ್ಣ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​ 09: ತಾಯಿಯ ಎದುರೇ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಬೇಗೂರಿನ ಲಕ್ಷ್ಮೀ‌ಪುರದಲ್ಲಿ ನಡೆದಿದೆ. ಪ್ರತಾಪ್ (18 ವರ್ಷ) ಮೃತದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ. ಬೇಗೂರು‌ ಠಾಣೆ ಪೋಲಿಸರು (Police) ಆರೋಪಿ ರಜನಿಯನ್ನು ಬಂಧಿಸಿದ್ದಾರೆ.

ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದನು. ಕೆಲಸಕ್ಕೆ ಹೋಗದ ವಿಚಾರಕ್ಕೆ ರಜನಿ ಮತ್ತು ಪ್ರತಾಪ್​ ನಡುವೆ ಗುರುವಾರ ಮಧ್ಯಾಹ್ನ ಜಗಳವಾಗಿದೆ. ಜಗಳದ ನಡುವೆ ಪ್ರತಾಪ್ ರಜನಿಗೆ ದಂಡಪಿಂಡ ಎಂದು ಬೈದಿದ್ದಾನೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಬಳಿಕ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ತಾಯಿ ಬಿಡಿಸಲು ಬಂದರೂ ಅಣ್ಣ-ತಮ್ಮಂದಿರ ಜಗಳ ನಿಂತಿಲ್ಲ.

ಇದನ್ನೂ ಓದಿ: ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಹುತಾತ್ಮ: ಗುಂಡು ತಗುಲಿ ಸಾವು ಶಂಕೆ

ಬಳಿಕ ರಜನಿ ಅಡುಗೆ ಮನೆಗೆ ತೆರಳಿ ಚಾಕು ತಂದು, ತಮ್ಮ ಪ್ರತಾಪ್​​ನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರತಾಪ್ ಕುಸಿದು ಬಿದ್ದಿದ್ದಾನೆ. ಘಟನೆ ಬಳಿಕ ರಜಿನಿ ನಾಪತ್ತೆಯಾಗಿದ್ದನು. ಕೂಡಲೆ ಪ್ರತಾಪ್​​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಪ್ರತಾಪ್​​ ಮೃತಪಟ್ಟಿದ್ದಾನೆ. ಬೇಗೂರು‌ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿ ರಜನಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Fri, 9 August 24