AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಹುತಾತ್ಮ: ಗುಂಡು ತಗುಲಿ ಸಾವು ಶಂಕೆ

ಬಾಗಲಕೋಟೆ ಮೂಲದ ಉಮೇಶ್ ದಬಗಲ್(33) ಯೋಧ ಪಶ್ಚಿಮಬಂಗಾಳದಲ್ಲಿ ಹುತಾತ್ಮವಾಗಿರುವಂತಹ ಘಟನೆ ನಿನ್ನೆ ನಡೆದಿದೆ. ಗುಂಡು ತಗುಲಿ ಹುತಾತ್ಮರಾಗಿರುವ ಶಂಕೆ ವ್ಯಕ್ತವಾಗಿದೆ. ಹುತಾತ್ಮ ಯೋಧ ಉಮೇಶ್ ದಬಗಲ್ ಕಳೆದ 13 ವರ್ಷದಿಂದ ಬಿಎಸ್‌ಎಫ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. ನಾಳೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ. 

ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಹುತಾತ್ಮ: ಗುಂಡು ತಗುಲಿ ಸಾವು ಶಂಕೆ
ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಹುತಾತ್ಮ: ಗುಂಡು ತಗುಲಿ ಸಾವು ಶಂಕೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Aug 08, 2024 | 4:43 PM

Share

ಬಾಗಲಕೋಟೆ, ಆಗಸ್ಟ್​ 8: ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ (Bagalkote) ಮೂಲದ ಯೋಧ (Yodha) ಹುತಾತ್ಮವಾಗಿರುವಂತಹ ಘಟನೆ ನಿನ್ನೆ ನಡೆದಿದೆ. ಉಮೇಶ್ ದಬಗಲ್(33) ಹುತಾತ್ಮವಾದ ಬಿಎಸ್‌ಎಫ್‌ ಯೋಧ. ಗುಂಡು ತಗುಲಿ ಉಮೇಶ್ ದಬಗಲ್ ಹುತಾತ್ಮರಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ನಿವಾಸಿ. 13 ವರ್ಷದಿಂದ ಬಿಎಸ್‌ಎಫ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. ನಾಳೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ.

ಹಂಪ್ಸ್ ತಪ್ಪಿಸಲು ಹೋಗಿ ನಿಂತಿದ್ದ ಬೈಕ್​ಗಳ ಮೇಲೆ ನುಗ್ಗಿದ ಬಸ್: ನಾಲ್ವರಿಗೆ ಗಾಯ

ದಾವಣಗೆರೆ: ಹಂಪ್ಸ್ ತಪ್ಪಿಸಲು ಹೋಗಿ ನಿಂತಿದ್ದ ಬೈಕ್​​ಗಳ ಮೇಲೆ ಬಸ್​ ನುಗ್ಗಿಸಿದ್ದು, ಕೂದಲೆಳೆ ಅಂತರದಲ್ಲಿ ಐದು ಜನ ಬೈಕ್ ಸವಾರರು ಪಾರಾಗಿರುವಂತಹ ಘಟನೆ ದಾವಣಗೆರೆ ಸಮೀಪದ ಬಾತಿ ಕೆರೆ ಬಳಿ ನಡೆದಿದೆ. ನಾಲ್ವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಇಬ್ಬರು ಪೊಲೀಸ್ ಇನ್ಸ್​ಪೆಕ್ಟರ್ ಅನುಮಾನಸ್ಪದ​​​ ಸಾವಿನ ಬೆನ್ನಲ್ಲೇ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಆತ್ಮಹತ್ಯೆ

ಮಳೆ ಹಿನ್ನಲೆ ಮರದ ಕೆಳಗೆ ಬೈಕ್ ಸವಾರರು ನಿಂತಿದ್ದರು. ಈ ವೇಳೆ ಹಂಪ್ಸ್ ತಪ್ಪಿಸಲು ಹೋಗಿ ಪಕ್ಕದಲ್ಲಿ ನಿಂತಿದ್ದ ಬೈಕ್ ಸವಾರರ ಮೇಲೆ ಬಸ್ ನುಗ್ಗಿದೆ. ದಾವಣಗೆರೆಯಿಂದ ಹರಿಹರ ಮಾರ್ಗವಾಗಿ ಹುಬ್ಬಳಿ ಕಡೆ ಹೊರಟ್ಟಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂರು ಬೈಕ್​ಗಳು ನಜ್ಜುಗುಜ್ಜಾಗಿವೆ.

ನಾಪತ್ತೆಯಾಗಿ ಮಹಿಳೆ ಶವವಾಗಿ ಪತ್ತೆ 

ಧಾರವಾಡ: ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ ಆಗಿರುವಂತಹ ಘಟನೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪೂರ ನಿವಾಸಿ ಮಂಜುಳಾ ಚಂದ್ರಗೌಡ ಹುತ್ತನಗೌಡರ ಶವವಾಗಿ ಪತ್ತೆಯಾಗಿರುವ ಮಹಿಳೆ.

ಇದನ್ನೂ ಓದಿ: ಕಾಲೇಜು ಯುವತಿಯರೇ ಎಚ್ಚರ! ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್

ಜುಲೈ 29ರಂದು ಮನೆಯಿಂದ ಮಹಿಳೆ ಕಾಣೆಯಾಗಿದ್ದರು. ಇದೀಗ ಹಳ್ಳದಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರವಿ ಹೆಚ್ ಮೂಕಿ, ಕಲಘಟಗಿ
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್