AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಯುವತಿಯರೇ ಎಚ್ಚರ! ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್

ಕಾಲೇಜು ಯುವತಿಯರೇ ಎಚ್ಚರ..ಎಚ್ಚರ! ಒಳ್ಳೆಯವರಂತೆ ನಟಿಸಿ ನಿಮ್ಮ ಜೊತೆ ಸ್ನೇಹ ಬೆಳೆಸಿ ನಿಮ್ಮ ಸೀಕ್ರೆಟ್​ಗಳನ್ನು ತಿಳಿದುಕೊಳ್ಳುವವರಿಂದ ದೂರ ಇರಿ. ಯಾರಿಗೂ ಸೀಕ್ರೆಟ್​ ಹಂಚಿಕೊಳ್ಳಬೇಡಿ. 19 ವರ್ಷದ ಯುವಕ ಪಿಯುಸಿ ವಿದ್ಯಾರ್ಥಿನಿ ಜೊತೆ ಸ್ನೇಹ ಬೆಳೆಸಿ ಆಪ್ತನಾಗಿ ಆಕೆ ತನ್ನ ಸ್ನೇಹಿತನ ಜೊತೆ ತೆಗೆಸಿಕೊಂಡಿದ್ದ ಫೋಟೋ ಹಿಡಿದು ಬ್ಲಾಕ್ ಮೇಲ್ ಮಾಡಿ ಹಣ, ಚಿನ್ನಾಭರಣ ದೋಚಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಾಲೇಜು ಯುವತಿಯರೇ ಎಚ್ಚರ! ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್
ತೇಜಸ್
ರಾಚಪ್ಪಾಜಿ ನಾಯ್ಕ್
| Edited By: ಆಯೇಷಾ ಬಾನು|

Updated on:Aug 07, 2024 | 8:12 AM

Share

ಬೆಂಗಳೂರು, ಆಗಸ್ಟ್.07: ಕಾಲ ಕೆಟ್ಟೋಗಿದೆ. ನಾವು ನಂಬಿದ ನಮ್ಮವರಿಂದಲೇ ನಮಗೆ ಮೋಸ ಆಗೋದು, ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಹಾಕೋದು ಎಂದು ಮೋಸ ಹೋದ ಮೇಧಾವಿಗಳು ಬುದ್ದಿ ಹೇಳೋದನ್ನ ನಾವು ಕೇಳಿರ್ತೀವಿ. ಆದರೆ ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಕಾಲೇಜು ಯುವತಿಯ ಜೊತೆ ಸ್ನೇಹ ಬೆಳೆಸಿ ಆಪ್ತನಾಗಿ ಅವಳ ಸೀಕ್ರೆಟ್​ಗಳನ್ನು ತಿಳಿದುಕೊಂಡು ಬಳಿಕ ಅವರಿಗೆಯೇ ಬ್ಲಾಕ್ ಮೇಲ್ ಮಾಡಿ ಚಿನ್ನ, ಹಣ ವಸೂಲಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತೇಜಸ್ (19)ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು ಬಂಧಿತನಿಂದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಆರೋಪಿ ತೇಜಸ್ ಮೊದ ಮೊದಲು ಒಳ್ಳೆಯವನಂತೆ ನಟಿಸಿ‌ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗ್ತಿದ್ದ. ಹೋಗ್ತಾ ಹೋಗ್ತಾ ಯುವತಿಯ ಸೀಕ್ರೆಟ್ ಎಲ್ಲವನ್ನೂ ತಿಳಿದುಕೊಂಡಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ತೆಗೆದು ಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದ. ಸ್ನೇಹಿತನ ಜೊತೆಗಿನ‌ ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಪತ್ನಿಯನ್ನು ಕೊಂದು ಫೇಸ್‌ಬುಕ್‌ ಲೈವ್‌ ಮಾಡಿದ್ದ ಕ್ರೂರ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಸಾವು

ಪ್ರೀತಿ ಮಾಡ್ತಿದ್ದೀಯಾ? ನೀನು ಕಾಲೇಜಿಗೆ ಹೋಗದಂತೆ ಮಾಡ್ತಿನಿ ಎಂದು ಬ್ಲಾಕ್ ಮೇಲ್ ಮಾಡಿ ಹೇಳಬಾರದೆಂದರೆ ಹಣ, ಚಿನ್ನ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಅಲ್ಲದೆ ಕಾಲೇಜು ಹಾಗೂ ಮನೆ ಬಳಿ ಬಂದು ಯುವತಿಯನ್ನು ಹೆದರಿಸಿದ್ದಾನೆ. ಇದರಿಂದ ಹೆದರಿದ್ದ ಯುವತಿ ಮನೆಯಲ್ಲಿದ್ದ ಚಿನ್ನ ತಂದು ತೇಜಸ್​ಗೆ ನೀಡಿದ್ದಳು. ಹಂತ ಹಂತವಾಗಿ ಆರೋಪಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾನೆ.

ಇನ್ನು ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರೋದು ಯುವತಿ ತಾಯಿ ಗಮನಕ್ಕೆ ಬಂದಿದ್ದು ಮಗಳನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಯುವತಿ ತಾಯಿ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 am, Wed, 7 August 24

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ