ಪತ್ನಿಯನ್ನು ಕೊಂದು ಫೇಸ್‌ಬುಕ್‌ ಲೈವ್‌ ಮಾಡಿದ್ದ ಕ್ರೂರ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಸಾವು

ಬೆಂಗಳೂರಿನ ಚಾಮರಾಜಪೇಟೆಯ ಅತ್ತೆ ಮನೆಗೆ ನುಗ್ಗಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಫೇಸ್​ಬುಕ್ ಲೈವ್ ಮಾಡಿ ಕೊಲೆ ಬಗ್ಗೆ ವಿವರಿಸಿ ಅಟ್ಟಹಾಸ ಮೆರೆದಿದ್ದ ಪತಿ ಮೃತಪಟ್ಟಿದ್ದಾನೆ. ಪತ್ನಿ ಕೊಲೆ ಬಳಿಕ ಕೋಲಾರಕ್ಕೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಹಿಡಿಯಲು ಹೋಗಿದ್ದು ಈ ವೇಳೆ ಆಸ್ಕೇಪ್ ಆಗುವ ಆತುರದಲ್ಲಿ ಟೆರೆಸ್ ಮೇಲಿಂದ ಬಿದ್ದು ಆರೋಪಿ ಮೃತಪಟ್ಟಿದ್ದಾನೆ.

ಪತ್ನಿಯನ್ನು ಕೊಂದು ಫೇಸ್‌ಬುಕ್‌ ಲೈವ್‌ ಮಾಡಿದ್ದ ಕ್ರೂರ ಪತಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಸಾವು
ಆರೋಪಿ ತಬರೇಜ್ ಪಾಷಾ, ಪತಿ ಸೈಯಿದಾ ಫಾಜೀಲ್‌ ಫಾತೀಮಾ
Follow us
TV9 Web
| Updated By: ಆಯೇಷಾ ಬಾನು

Updated on: Aug 07, 2024 | 7:40 AM

ಬೆಂಗಳೂರು, ಆಗಸ್ಟ್​.07: ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ (Murder) ಮಾಡಿ ಬಳಿಕ ಫೇಸ್‌ಬುಕ್‌ ಲೈವ್‌ ಮೂಲಕ ಹತ್ಯೆ ಬಗ್ಗೆ ಪತಿ ವಿವರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದ ಐದು ದಿನದ ಬಳಿಕ ಕೇಸ್​ನಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಕೋಲಾರದಲ್ಲಿ (Kolar) ಕೊಲೆ ಆರೋಪಿ ತಬರೇಜ್ ಪಾಷಾ ಮೃತಪಟ್ಟಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವಾಗ 12ಅಡಿ ಎತ್ತರದಿಂದ ಜಿಗಿದು ಮೃತಪಟ್ಟಿದ್ದಾನೆ.

ಕೌಟುಂಬಿಕ ವಿಚಾರಕ್ಕೆ ಸೈಯಿದಾ ಫಾಜೀಲ್‌ ಫಾತೀಮಾ(34) ತನ್ನ ಪತಿ ತಬರೇಜ್ ಪಾಷಾ ಜೊತೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಇದೇ ತಿಂಗಳ 2ರಂದು ಆರೋಪಿ ತಬರೇಜ್ ತನ್ನ ಅತ್ತೆಯ ಮನೆಗೆ ನುಗ್ಗಿ ಅತ್ತೆಯ ಎದುರೇ ಪತ್ನಿಯನ್ನು ಹತ್ತಾರು ಭಾರೀ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮನೆಗೆ ಬರುವ ಮುನ್ನ ಹಾಗೂ ಹತ್ಯೆ ವೇಳೆ ಫೇಸ್‌ಬುಕ್‌ ಲೈವ್ ಮಾಡಿ ಕೊಲೆ ಬಗ್ಗೆ ಲೈವ್​ನಲ್ಲೇ ವಿವರಿಸಿದ್ದ. ಇನ್ನು ಕೊಲೆ ಬಳಿಕ ಕೋಲಾರಕ್ಕೆ ಎಸ್ಕೇಪ್ ಆಗಿದ್ದ. ಈ ಘಟನೆ ಸಂಬಂಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಕಾರವಾರ ಬಳಿ ಮಧ್ಯ ರಾತ್ರಿ ಏಕಾಏಕಿ ಕುಸಿದ ಸೇತುವೆ, ನದಿಗೆ ಬಿದ್ದ ಲಾರಿ ಚಾಲಕನ ಜೀವ ಉಳಿಸಿದ ಖಾಕಿ

ಆರೋಪಿ ತಬರೇಜ್ ಪಾಷಾ ಮೊಬೈಲ್ ಸ್ವಿಚ್ ಆಫ್ ಮಾಡಿ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ. ಈ ವಿಚಾರ ತಿಳಿದ ಚಾಮರಾಜಪೇಟೆ ಪೊಲೀಸರ ತಂಡ ಕೋಲಾರಕ್ಕೆ ತೆರಳಿದ್ದು ಆರೋಪಿ ಬಂಧಿಸಲು ಸಜ್ಜಾಗಿತ್ತು. ಆರೋಪಿಯನ್ನು ಬಂಧಿಸಲು ಮನೆಗೆ ಎಂಟ್ರಿ ಕೊಟ್ಟಿದ್ದು ತಪ್ಪಿಸಿಕೊಳ್ಳೊ ಬರದಲ್ಲಿ ಮನೆಯ ಟೆರೆಸ್ ನಿಂದ ಜಿಗಿದ ಆರೋಪಿ ಮೃತಪಟ್ಟಿದ್ದಾನೆ.

ಟೆರೆಸ್ ನಿಂದ ಜಿಗಿದು ಮನೆಯ ಹಿಂಬದಿಯಿಂದ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ತಬರೇಜ್, 12 ಅಡಿ ಎತ್ತರದಿಂದ ಬಿದ್ದ ಪರಿಣಾಮ ಅಸ್ವಸ್ತನಾಗಿದ್ದ. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಎರಡು ವರ್ಷದ ಹಿಂದೆ ತಬರೇಜ್ ಬಿಟ್ಟು ಪತ್ನಿ ಸೈಯಿದಾ ಫಾಜೀಲ್‌ ಫಾತೀಮಾ ತನ್ನ ತಾಯಿ ಮನೆ ಸೇರಿದ್ದಳು. ಪತ್ನಿಗೆ ಪದೇ ಪದೇ ಮನೆಗೆ ಬರುವಂತೆ ಕಿರುಕುಳ ಕೊಡ್ತಿದ್ದನಂತೆ. ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಇನ್ನು ಆರೋಪಿ ತಬರೇಜ್ ಈ ಹಿಂದೆ ಕಾಟನ್ ಪೇಟೆಯ ಸರಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ