Kolar Crime: ಕೋಲಾರದಲ್ಲಿ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವನು ಶವವಾಗಿ ಪತ್ತೆ

ನರಸಾಪುರ ಗ್ರಾಮದಲ್ಲಿ ಡ್ರೈವರ್​ ಕೆಲಸ ಮಾಡಿಕೊಂಡಿದ್ದ ಕೃಷ್ಣಮೂರ್ತಿ ಎಂಬಾತ 2013ರಲ್ಲಿ ನಿಗೂಢವಾಗಿ ಕಾಣೆಯಾಗಿದ್ದ. 8 ವರ್ಷಗಳ ಬಳಿಕ ಆತ ಶವವಾಗಿ ಪತ್ತೆಯಾಗಿದ್ದಾನೆ.

Kolar Crime: ಕೋಲಾರದಲ್ಲಿ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವನು ಶವವಾಗಿ ಪತ್ತೆ
ಕೊಲೆಗಾರ ರಾಜೇಶ್- ಕೊಲೆಯಾದ ಕೃಷ್ಣಮೂರ್ತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 30, 2021 | 8:29 PM

ಕೋಲಾರ: 8 ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ನರಸಾಪುರ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾಗಿರುವ ವಿಚಾರ ಬಯಲಾಗಿದೆ. ವೇಮಗಲ್​ ಪೊಲೀಸರು 8 ವರ್ಷಗಳ ಹಿಂದೆ ಅಂದರೆ 08-12-2013ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ಸಿಯಾಗಿದ್ದಾರೆ.

ಅವನ ತಾಯಿ ಹಾಗೂ ಹೆಂಡತಿ ಇಬ್ಬರ ಕಿವಿಯಲ್ಲೂ ಈಗಲೂ ಅವನು ಹೇಳಿ ಹೋಗಿದ್ದ ಕೊನೆಯ ಮಾತು ಕಿವಿಯಲ್ಲಿ ಗುಯ್​ ಗುಟ್ಟುತ್ತಲೇ ಇತ್ತು. ಚಿಕನ್​ ತಂದು ಕೊಟ್ಟು ಅಡುಗೆ ಮಾಡು, ಹೊರಗೆ ಹೋಗಿ ಬರ್ತೀನಿ ಎಂದು ಹೇಳಿ ಹೋಗಿದ್ದವನು ಎಂಟು ವರ್ಷಗಳೇ ಕಳೆದರೂ ವಾಪಾಸ್ ಮನೆಗೆ ಬಂದಿರಲಿಲ್ಲ. ಇಂದಲ್ಲ ನಾಳೆ ಬಂದೇ ಬರ್ತಾನೆ ಎಂದುಕೊಂಡಿದ್ದವರಿಗೆ ಆತ ಕೊಲೆಯಾಗಿ ಹೋಗಿದ್ದಾನೆ ಅನ್ನೋ ಆಘಾತಕಾರಿ ಅಂಶ ಬಯಲಾಗಿದೆ.

ಏನಿದು ಪ್ರಕರಣ?: ನರಸಾಪುರ ಗ್ರಾಮದಲ್ಲಿ ಡ್ರೈವರ್​ ಕೆಲಸ ಮಾಡಿಕೊಂಡಿದ್ದ ಕೃಷ್ಣಮೂರ್ತಿ ಎಂಬಾತ 2013ರಲ್ಲಿ ನಿಗೂಢವಾಗಿ ಕಾಣೆಯಾಗಿದ್ದ. ಆದರೆ, ಕೃಷ್ಣಮೂರ್ತಿ ತಾಯಿ ರತ್ನಮ್ಮ ಹಾಗೂ ಪತ್ನಿ ರೂಪಾ ಪೊಲೀಸ್​ ಠಾಣೆ ಮೆಟ್ಟಿಲೇರಿ ನಾಪತ್ತೆ ಪ್ರಕರಣ ದಾಖಲಿಸಿ ನಾಪತ್ತೆ ಯಾಗಿದ್ದ ತನ್ನ ಮಗನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ ಒರಿಸ್ಸಾ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆ ಸುತ್ತಾಡಿ ಕೃಷ್ಣಮೂರ್ತಿಗಾಗಿ ಹುಡುಕಾಡಿದ್ದರಾದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ವೇಮಗಲ್​ ಪೊಲೀಸ್​ ಠಾಣೆಗೆ ಸ್ಥಿರ ದೂರವಾಣಿಗೆ ಕರೆ ಮಾಡಿ ಎಂಟು ವರ್ಷಗಳ ನಂತರ ನಾಪತ್ತೆಯಾಗಿದ್ದ ಕೃಷ್ಣಮೂರ್ತಿ ಕೊಲೆಯಾಗಿದ್ದಾನೆ ಅನ್ನೋ ಸ್ಪೋಟಕ ಮಾಹಿತಿ ಹೇಳಿದ ನಂತರ ಅದನ್ನು ನಿರ್ಲ್ಯಕ್ಷ ಮಾಡದೆ ಪ್ರಕರಣದ ಬೆನ್ನುಬಿದ್ದ ವೇಮಗಲ್​ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ.

ನಾಪತ್ತೆಯಾದವ ಕೊಲೆಯಾಗಿದ್ದೇಕೆ?: ಈ ಪ್ರಕರಣದ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ ಕೃಷ್ಣಮೂರ್ತಿ ನರಸಾಪುರ ಗ್ರಾಮದಲ್ಲಿ ಡ್ರೈವರ್​ ಕೆಲಸ ಮಾಡಿಕೊಂಡು ಇದ್ದವನು. ಈ ವೇಳೆ ಅದೇ ಗ್ರಾಮದ ರಾಜೇಶ್​ ಎಂಬುವರ ಪತ್ನಿ ನಿರೂಷ ಎಂಬಾಕೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಈ ವಿಷಯ ತನ್ನ ಪತಿ ರಾಜೇಶ್​ ನಿರೂಷಳಿಗೆ ವಿಚ್ಚೇದನ ನೀಡಿದ್ದ. ಆಗ ನಿರೂಷ ಕೃಷ್ಣಮೂರ್ತಿ ಜೊತೆಗೆ ಹೋಗಿದ್ದಳು. ಇದೇ ವೇಳೆ ನಿರೂಷ ತನ್ನ ಪತಿ ವಿರದ್ದು ಜೀವನಾಂಶ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಕೃಷ್ಣಮೂರ್ತಿ ತನಗೂ ಗಂಡನಿಂದ ಬರುವ ಜೀವನಾಂಶದಲ್ಲಿ ಹಣ ನೀಡಬೇಕು ಇಲ್ಲವಾದರೆ ನಿನ್ನ ಮಕ್ಕಳನ್ನು ಕೊಲ್ಲುವುದಾಗಿ ಹೆದರಿಸಿದ್ದ, ಇದರಿಂದ ಹೆದರಿದ ನಿರೂಷ ವಿಷಯವನ್ನು ಹಳೆ ಗಂಡ ರಾಜೇಶನ ಬಳಿ ಹೇಳಿಕೊಂಡಿದ್ದಳು, ಆಗ ಏನಾದರೂ ಮಾಡಿ ಕೃಷ್ಣಮೂರ್ತಿಗೆ ಬುದ್ದಿ ಕಲಿಸಲು ತೀರ್ಮಾನಿಸಿದ್ದ ನಿರೂಷ ಹಾಗೂ ರಾಜೇಶ್​ ಕೃಷ್ಣಮೂರ್ತಿಯನ್ನು ಆ ದಿನ ಶ್ರೀನಿವಾಸಪುರ ತಾಲ್ಲೂಕಿನ ಪಾತೂರು ಗ್ರಾಮಕ್ಕೆ ಕರೆಸಿಕೊಂಡು ರಾಜಿ ಪಂಚಾಯ್ತಿ ಮಾಡಲು ಯತ್ನಿಸಿದರು. ಆದರೆ ಅದಕ್ಕೆ ಕೃಷ್ಣಮೂರ್ತಿ ಒಪ್ಪದೆ ಹೋದಾಗ ಕೃಷ್ಣಮೂರ್ತಿಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಟೆಂಪೋ ಟ್ರಾವಲರ್ ಒಂದರಲ್ಲಿ ಎತ್ತಾಕಿಕೊಂಡು, ರಾಜೇಶ್​, ಆತನ ಬಾವ ಮುನಿಕೃಷ್ಣ, ನಿರೂಷ ಅಣ್ಣ ನಾಗೇಶ್​, ಹಾಗೂ ನಿರೂಷ ಸಂಬಂಧಿ ದಾಸಪ್ಪ ಎಲ್ಲರೂ ಸೇರಿ ಕೃಷ್ಣಮೂರ್ತಿಯನ್ನು ಟೆಂಪೋಟ್ರಾವಲರ್​ನಲ್ಲಿ ಚೆನ್ನಾಗಿ ಹೊಡೆದು ಕೊಲೆ ಮಾಡಿ ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಡೀಸಲ್​​ ಹಾಗೂ ಟೈಯರ್ ಹಾಕಿ​ ಸುಟ್ಟು ಬಂದಿರುತ್ತಾರೆ. ಆದರೆ ಕೃಷ್ಣಮೂರ್ತಿ ಶವ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಾಗಿತ್ತು. ಸದ್ಯ ವೇಮಗಲ್​ ಪೊಲೀಸರು ತನಿಖೆ ಕೈಗೊಂಡ ನಂತರ ಇಡೀ ಪ್ರಕರಣ ಬಯಲಾಗಿದೆ. ಸದ್ಯ ವಿಷಯ ತಿಳಿದು ಕೊಲೆಯಾದ ಕೃಷ್ಣಮೂರ್ತಿ ಹೆಂಡತಿ ರೂಪಾ ಹಾಗೂ ತಾಯಿ ರತ್ನಮ್ಮ ಕಣ್ಣೀರಾಕುತ್ತಾ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ. ಅಕ್ರಮ ಎಂದಿದ್ದರೂ ಅಕ್ರಮವೇ ಅದರ ಹಿಂದೆ ಬಿದ್ದವರಿಗೆ ಎಂಥ ಸ್ಥಿತಿ ಬರುತ್ತದೆ ಎಂಬುದಕ್ಕೆ ಇಂಥ ಹಲವು ಉದಾಹರಣೆ ಇದೆ. ಆದರೂ ಅಕ್ರಮ ಅನ್ನೋದು ಒಂದು ಕೈ ಚಪ್ಪಾಳೆ ಅಲ್ಲ, ಇಲ್ಲಿ ಮೋಸ ಹೋದವರು ಮತ್ತು ಮೋಸ ಮಾಡಿದವರು ಇಬ್ಬರಿಗೂ ಶಿಕ್ಷೆಯಾಗಲೇಬೇಕು ಅನ್ನೋದು ಕೃಷ್ಣಮೂರ್ತಿ ಕುಟುಂಬಸ್ಥರ ಆಗ್ರಹ.

(ವರದಿ: ರಾಜೇಂದ್ರ ಸಿಂಹ)

ಇದನ್ನೂ ಓದಿ: Crime News: ಕೇವಲ 400 ರೂ.ಗಾಗಿ ಪ್ರೇಯಸಿಯ ಮೂಗನ್ನೇ ಕತ್ತರಿಸಿದ ಮಹರಾಯ!

Bengaluru Crime: ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ; ಮಾಟ-ಮಂತ್ರದ ಪ್ರಭಾವಕ್ಕೆ ಸಿಲುಕಿ 2 ತಿಂಗಳಿಂದ ಯುವತಿ ನಾಪತ್ತೆ!

Published On - 8:28 pm, Thu, 30 December 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ