ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಭಾರತೀಯ ಮ್ಯೂಸಿಯಂ ಆವರಣದಲ್ಲಿ ವ್ಯಕ್ತಿಯೋರ್ವ ಎಕೆ-47ನಿಂದ ಸಿಐಎಸ್ಫ್ (CISF) ಅಧಿಕಾರಿಯ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದಾನೆ. ಕೊಲೆಗೈದು ಎಕೆ-47 ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
18 ತಿಂಗಳ ಮಗುವನ್ನು ಕೊಂದು, ನದಿಗೆ ಹಾರಿದ ಮಹಿಳೆ
ಗೋವಾ: ಶನಿವಾರ ಮುಂಜಾನೆ ಗೋವಾದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ತನ್ನ 18 ತಿಂಗಳ ಮಗಳನ್ನು ಕೊಂದು, ನಂತರ ತಾನು ಜೀವ ಕಳೆದುಕೊಳ್ಳಲು, ನದಿಗೆ ಹಾರಿದ್ದಾಳೆ, ಆದರೆ ಕೆಲವು ಕಟ್ಟಡ ಕಾರ್ಮಿಕರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 34 ವರ್ಷದ ಮಹಿಳೆ ಜರ್ಮನಿಯಲ್ಲಿ ಹಲವಾರು ವರ್ಷಗಳಿಂದ ನೆಲೆ ನಿಂತಿದ್ದರು. ನಂತರ ದಕ್ಷಿಣ ಗೋವಾದ ಚಿಕಾಲಿಮ್‌ನಲ್ಲಿರುವ ತನ್ನ ಪೋಷಕರ ಮನೆಗೆ ಕಳೆದ ವಾರ ಬಂದಿದ್ದಳು, ಆಕೆಯ ಪತಿ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ನಿಮಿಷಾ ವಲ್ಸನ್ ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ 18 ತಿಂಗಳ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಅವಳು ತನ್ನ ಮನೆಯವರ ಬಳಿ ಕಾರಿನ ಕೀಯನ್ನು ಕೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಸುಮಾರು ಐದು ಕಿಲೋಮೀಟರ್ ದೂರ ಕಾರನ್ನು ಓಡಿಸಿಕೊಂಡು ಸೇತುವೆಯೊಂದಕ್ಕೆ ನಿಲ್ಲಿಸಿ, ನಂತರ ಸೇತುವೆಯಿಂದ ಜುವಾರಿ ನದಿಗೆ ಹಾರಿದ್ದಾಳೆ. ಆದರೆ, ಸೇತುವೆ ದುರಸ್ಥಿ ಮಾಡುತ್ತಿದ್ದ ಕೆಲವು ಕಾರ್ಮಿಕರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯನ್ನು ಬಂಬೋಲಿಮ್‌ನಲ್ಲಿರುವ ಸರ್ಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲು ಮಾಡಲಾಗಿದೆ. ಈಗ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅವರು ಹೇಳಿದರು. ಆರೋಪಿ ಮಹಿಳೆ ಜರ್ಮನಿಯಲ್ಲಿ ಹಲವಾರು ವರ್ಷಗಳ ನಂತರ ಗೋವಾಕ್ಕೆ ಮರಳಿದ್ದಳು, ಅಲ್ಲಿ ಅವಳ ಪತಿ ಕೆಲಸ ಮಾಡುತ್ತಿದ್ದಾನೆ ಎಂದು ಶ್ರೀನಾಯಕ್ ಹೇಳಿದರು. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 8:39 pm, Sat, 6 August 22