AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಕ ಜೀವದೊಂದಿಗೆ ಇದೆಂಥ ಕೃತ್ಯ: ಬೆಂಗಳೂರಲ್ಲಿ ಹಸುಗಳ ಜೊತೆ ವಿಕೃತಿ ಮೆರೆದಿದ್ದವನ ಬಂಧನ!

ಕರಿ ಕೋತಿಯೊಂದು ದಾಳಿ ಮಾಡಿ ಮೂವರಿಗೆ ಕಚ್ಚಿರುವಂತಹ ಘಟನೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣ ವಾರ್ಡ್ ನಂ 5ರಲ್ಲಿ ನಡೆದಿದೆ.

ಮೂಕ ಜೀವದೊಂದಿಗೆ ಇದೆಂಥ ಕೃತ್ಯ: ಬೆಂಗಳೂರಲ್ಲಿ ಹಸುಗಳ ಜೊತೆ ವಿಕೃತಿ ಮೆರೆದಿದ್ದವನ ಬಂಧನ!
ಮಂಜುನಾಥ್ ಬಂಧಿತ ಆರೋಪಿ
TV9 Web
| Edited By: |

Updated on: Aug 07, 2022 | 1:12 PM

Share

ಬೆಂಗಳೂರು: ನಗರದಲ್ಲಿ ಹಸುಗಳ ಜೊತೆ ವಿಕೃತಿ ಮೆರೆದಿದ್ದ ಸೈಕೋಪಾಥ್ (Psychopath) ​ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮದ್ದೂರು ಮೂಲದ ಮಂಜುನಾಥ್(34) ಬಂಧಿತ ಆರೋಪಿ. ಶಶಿಕುಮಾರ್ ಎಂಬುವವರು ನೀಡಿದ್ದ ದೂರಿನನ್ವಯ ಆರೋಪಿ ಬಂಧನ ಮಾಡಲಾಗಿದೆ. ನಾಯಂಡಹಳ್ಳಿ ಬಳಿ ಶಶಿಕುಮಾರ್ ಹಸುಗಳನ್ನ ಸಾಕಿದ್ದರು. ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಹಸುಗಳನ್ನ ಮೇಯಲು ಕಟ್ಟುತ್ತಿದ್ದರು. ಬಳಿಕ ಮನೆಗೆ ತೆರಳುತ್ತಿದ್ದ ಹಸು ಮಾಲೀಕ ಶಶಿಕುಮಾರ್, ಹಸು ಮಾಲೀಕ ಇಲ್ಲದ ವೇಳೆ ಹಸುಗಳ ಮೇಲೆ ಆರೋಪಿ ವಿಕೃತಿ ಮೆರೆದಿದ್ದ. ಆರೋಪಿ ಮಂಜುನಾಥ್ ಹಸುವನ್ನ ಪೊದೆಯಲ್ಲಿ ಎಳೆದೊಯುತ್ತಿದ್ದ. ಹಸುವಿನ ಬಾಲವನ್ನ ಕಟ್ ಮಾಡಿ ಹಿಂಸೆ ನೀಡುತ್ತಿದ್ದ. ಅಲ್ಲದೇ ಆರೋಪಿ ಬೆತ್ತಲಾಗಿ ಹಸು ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದ ಎನ್ನಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಎಸಿಬಿ ಬಲೆಗೆ ಬಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ 2ರ ಬಿಲ್​​ ಕಲೆಕ್ಟರ್

ಮೂವರ ಮೇಲೆ ಕರಿ ಕೋತಿ ದಾಳಿ: 

ಬಾಗಲಕೋಟೆ: ಕರಿ ಕೋತಿಯೊಂದು ದಾಳಿ ಮಾಡಿ ಮೂವರಿಗೆ ಕಚ್ಚಿರುವಂತಹ ಘಟನೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣ ವಾರ್ಡ್ ನಂ 5ರಲ್ಲಿ ನಡೆದಿದೆ. ಶಾಲವ್ವಾ ಚೌಗಲಾ, ಶಿವಾನಂದ‌ ಕಿಚಡಿ, ಮುಬಾರಕ್ ಎಂಬುವರಿಗೆ ತೊಡೆ ಹಾಗೂ ಕಾಲಿಗೆ ಮಂಗ ಕಚ್ಚಿದ್ದು, ಗಾಯಾಳುಗಳಿಗೆ ತೇರದಾಳ ಸರಕಾರಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗಿದೆ. ಮನೆಯಿಂದ ಹೊರಬರಲು ಜನರಲ್ಲಿ ಭಯ ಆವರಿಸಿದ್ದು, ಪಕ್ಕದಲ್ಲೇ ಸರಕಾರಿ ಶಾಲೆಯಿದ್ದು ಮಕ್ಕಳಲ್ಲಿ ಮಂಗನ ಭಯ ಆವರಿಸಿದೆ. ಅರಣ್ಯಾಧಿಕಾರಿಕಾರಿಗಳು ಬಂದು ಮಂಗನನ್ನು ಹಿಡಿಯಬೇಕೆಂದು ಸ್ಥಳೀಯರಿ ಆಗ್ರಹಿಸುತ್ತಿದ್ದಾರೆ.

ಖಾಸಗಿ ಬಸ್ ಡಿಕ್ಕಿಯಾಗಿ ಟ್ರ್ಯಾಕ್ಟರ್​ ಚಾಲಕ ದುರ್ಮರಣ

ಕೋಲಾರ: ಖಾಸಗಿ ಬಸ್ ಡಿಕ್ಕಿಯಾಗಿ ಟ್ರ್ಯಾಕ್ಟರ್​ ಚಾಲಕ ದುರ್ಮರಣ ಹೊಂದಿರುವಂತಹ ಘಟನೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಸಮೀಪ ನಡೆದಿದೆ. ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ಟ್ರ್ಯಾಕ್ಟರ್​ ಚಾಲಕ ಜಮೀರ್ ಸಾವನ್ನಪ್ಪಿದ್ದಾನೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಮಾಡಲು ಬಂದಿದ್ದವನನ್ನ ಹಲ್ಲೆ

ಬೆಂಗಳೂರು: ಕಳ್ಳತನ ಮಾಡಲು ಬಂದಿದ್ದವನನ್ನ ಹಲ್ಲೆ ಮಾಡಿ ಹತ್ಯೆಗೈದಿದ್ದ ಆರೊಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಗಲೂರು ಬಳಿಯ ದ್ವಾರಕ ನಗರದಲ್ಲಿ ನಿನ್ನೆ ಕಬ್ಬಿಣ ಕದಿಯುವಾಗ ಅಮರನಾಥ್ ಎಂಬುವವನನ್ನ ಹಿಡಿದು ಹಲ್ಲೆ ಮಾಡಿ ಹತ್ಯೆಗೈದಿದ್ದ. ಅಮರನಾಥ್ ಕಬ್ಬಿಣ ಕದಿಯುವಾಗ ಹಿಡಿದಿದ್ದ ಕುರುಣಾಕರನ್ ಆ್ಯಂಡ್ ಟೀಮ್, ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್​​​ನಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾಗ ಹತ್ಯೆಗೈದು ಬಳಿಕ ಅವರೇ ಆಸ್ಪತ್ರೆಗೆ ದಾಖಲು ಮಾಡಿದ್ರು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್