
ತಿರುವನಂತಪುರಂ: ಭೂ ಪ್ರದೇಶದ ಗೋಡೆ ವಿವಾದದ ಹಿನ್ನೆಲೆಯಲ್ಲಿ ತಿರುವನಂತಪುರದಲ್ಲಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅವರ ಪಕ್ಕದ ಮನೆಯ ಮಹಿಳೆ, ಆಕೆಯ ಮಗ ಮತ್ತು ಸೊಸೆ ಜೊತೆಗೆಯಾಗಿ ಬಂದು ಆಸಿಡ್ ಎರಚಿದ್ದಾರೆ, ಆರೋಪಿಯು ಈಗಾಗಲೇ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿಯ ವೇಳೆಗೆ ಸಂತ್ರಸ್ತರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಕೊಲೆ ಯತ್ನ ಮಾಡಿದ್ದರೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಟ್ಟಕಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಸಂತ್ರಸ್ತರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.
ಸೆಕ್ಷನ್ 307 (ಕೊಲೆ ಯತ್ನ), ಸೆಕ್ಷನ್ 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಂಭೀರವಾದ ಗಾಯವನ್ನು ಉಂಟು ಮಾಡುವುದು) ಜೊತೆಗೆ IPC ಮತ್ತು SC/ST ಕಾಯಿದೆಯ ಇತರ ಸಂಬಂಧಿತ ನಿಬಂಧನೆಗಳನ್ನು ಸಹ ಆರೋಪಿಸಲಾಗಿದೆ. ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಕಟ್ಟಕಡ ಡಿಎಸ್ಪಿ ಆಕೆಯನ್ನು ವಿಚಾರಣೆ ನಡೆಸಲಿದ್ದಾರೆ. ಆರೋಪಿಯನ್ನು ಡಿಎಸ್‌ಪಿ ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.
Published On - 3:36 pm, Wed, 20 July 22