3 ಕೋಟಿ ಹಣಕ್ಕಾಗಿ ಸ್ನೇಹಿತನ ಮಗನ ಅಪಹರಣ; ಘಟನೆ ನಡೆದ 3 ಗಂಟೆಗಳಲ್ಲಿ ವಿದ್ಯಾರ್ಥಿ ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀಸರು

3 ಕೋಟಿ ಹಣಕ್ಕಾಗಿ ಬ್ಯುಸಿನೆಸ್ ಪಾಟ್ನರ್ಗಳೇ ದುಷ್ಮನಿಗಳಾಗಿರುವ ಕಥೆ ಇದು. ಕಲಬುರಗಿ ಮೂಲದ ರಮೇಶ್, ಬೆಂಗಳೂರಿನ ಸುರೇಶ್ ಜೊತೆ ತೊಗರಿಬೆಳೆ ವ್ಯಾಪಾರ ಮಾಡ್ತಿದ್ದ. ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಅನೇಕ ಕಡೆ ಇಬ್ರು ಬ್ಯುಸಿನೆಸ್ ಮಾಡ್ತಿದ್ರು.

3 ಕೋಟಿ ಹಣಕ್ಕಾಗಿ ಸ್ನೇಹಿತನ ಮಗನ ಅಪಹರಣ; ಘಟನೆ ನಡೆದ 3 ಗಂಟೆಗಳಲ್ಲಿ ವಿದ್ಯಾರ್ಥಿ ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀಸರು
ಆರೋಪಿಗಳು
TV9kannada Web Team

| Edited By: Ayesha Banu

Jul 20, 2022 | 6:14 PM

ಬೆಂಗಳೂರು: 3 ಕೋಟಿ ಹಣಕ್ಕಾಗಿ ಸ್ನೇಹಿತನ ಮಗನನ್ನೇ ಆರೋಪಿಗಳು ಕಿಡ್ನ್ಯಾಪ್(Kidnap) ಮಾಡಿದ್ದು ಅಪಹರಣವಾಗಿದ್ದ 3 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿ ವಿದ್ಯಾರ್ಥಿ ರಕ್ಷಣೆ ಮಾಡಲಾಗಿದೆ. ಬೆಂಗಳೂರು ಪೊಲೀಸರು(Bengaluru Police) ಪ್ರಕರಣವನ್ನು ಮೂರು ಗಂಟೆಗಳಲ್ಲಿ ಭೇದಿಸಿ, ಅಪಹರಣಕ್ಕೊಳಗಾದ ಕಾಲೇಜು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಮತ್ತು ಚಿತ್ರದುರ್ಗ ಪೊಲೀಸರ(Chitradurga Police) ನೆರವಿನೊಂದಿಗೆ ನಾಲ್ವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಈಶಾನ್ಯ ವಿಭಾಗದ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಅನೂಪ್ ಎ ಶೆಟ್ಟಿ ಅವರು ಪ್ರಕರಣದ ವಿವರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಲಹಂಕ ಪೊಲೀಸರು ಚಿತ್ರದುರ್ಗ ಪೊಲೀಸರ ಸಹಾಯದಿಂದ 3 ಗಂಟೆಗಳಲ್ಲಿ ವಿದ್ಯಾರ್ಥಿಯ ಅಪಹರಣ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. 4 ಆರೋಪಿಗಳನ್ನು ಬಂಧಿಸಿದ್ದಾರೆ. ಸಮಯೋಚಿತ ಸಹಾಯಕ್ಕಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸರಿಗೆ ಧನ್ಯವಾದಗಳು ಎಂದು ಅನೂಪ್ ಶೆಟ್ಟಿ ಬರೆದುಕೊಂಡಿದ್ದಾರೆ.

3 ಕೋಟಿ ಹಣಕ್ಕಾಗಿ ಸ್ನೇಹಿತನ ಮಗನ ಕಿಡ್ನ್ಯಾಪ್

3 ಕೋಟಿ ಹಣಕ್ಕಾಗಿ ಬ್ಯುಸಿನೆಸ್ ಪಾಟ್ನರ್ಗಳೇ ದುಷ್ಮನಿಗಳಾಗಿರುವ ಕಥೆ ಇದು. ಕಲಬುರಗಿ ಮೂಲದ ರಮೇಶ್, ಬೆಂಗಳೂರಿನ ಸುರೇಶ್ ಜೊತೆ ತೊಗರಿಬೆಳೆ ವ್ಯಾಪಾರ ಮಾಡ್ತಿದ್ದ. ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಅನೇಕ ಕಡೆ ಇಬ್ರು ಬ್ಯುಸಿನೆಸ್ ಮಾಡ್ತಿದ್ರು. ಆದ್ರೆ, ವ್ಯಾಪಾರಕ್ಕೆ ಸಂಬಂಧಿಸಿದಂತೆ 3 ಕೋಟಿ ಹಣವನ್ನು ಸುರೇಶ್, ರಮೇಶ್ಗೆ ಕೊಟ್ಟಿರಲಿಲ್ಲ. ಎಷ್ಟೇ ಕೇಳಿದ್ರೂ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ, ರಮೇಶ್, ಸುರೇಶ್ನ ಮಗನನ್ನೇ ಕಿಡ್ನ್ಯಾಪ್ ಮಾಡಿದ್ದ.

ಕಲಬುರಗಿಯಿಂದ ಸ್ನೇಹಿತರ ಜೊತೆ ಬಂದಿದ್ದ ರಮೇಶ್, ಜುಲೈ 18ರ ಮಧ್ಯಾಹ್ನ ಸುರೇಶ್ನ ಪುತ್ರ ಜಗದೀಶ್ ಓದುವ ಕಾಲೇಜಿನ ಬಳಿ ಬಂದಿದ್ದ. ಕಾಲೇಜಿನಿಂದ ಹೊರಬಂದ ಜಗದೀಶ್ನನ್ನ ಇನ್ನೋವಾ ಕಾರಿನಲ್ಲಿ ನಾಲ್ವರು ಕಿಡ್ನ್ಯಾಪ್ ಮಾಡಿದ್ರು. ಕೆಲವೇ ಹೊತ್ತಲ್ಲಿ ಈ ವಿಷ್ಯ ಯಲಹಂಕ ಪೊಲೀಸರ ಕಿವಿಗೆ ಬಿದ್ದಿತ್ತು. ಅಷ್ಟ್ರಲ್ಲಿ, ಜಗದೀಶ್ ಕೂಡ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ.

ರಮೇಶ್ ಅಂಡ್ ಗ್ಯಾಂಗ್ ಹುಬ್ಬಳ್ಳಿ ಕಡೆ ಹೋಗುತ್ತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ, ಚಿತ್ರದುರ್ಗ ಪೊಲೀಸರ ಸಹಾಯ ಪಡೆದು ದಾರಿಮಧ್ಯೆಯೇ ಅವ್ರನ್ನ ಬಂಧಿಸಿದ್ದಾರೆ. ರಮೇಶ್ ಜೊತೆ ಕೈ ಜೋಡಿಸಿದ ರಿಜ್ವಾನ್ ಪಟೇಲ್, ಇಂದ್ರಜಿತ್, ಹರೀಶ್ ಕುಮಾರ್ ಕೂಡ ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada