ಕರ್ನಾಟಕ ಹೈಕೋರ್ಟ್ಗೆ ಐವರು ಜಡ್ಜ್ಗಳ ನೇಮಕಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ
ಕರ್ನಾಟಕದ ಹೈಕೋರ್ಟ್ ಗೆ 62 ಜಡ್ಜ್ ಹುದ್ದೆಗಳು ಮಂಜೂರಾಗಿದ್ದವು. ಸದ್ಯ 45 ಜಡ್ಜ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಈಗ ಐದು ಮಂದಿ ಬಡ್ತಿ ಪಡೆದು ನೇಮಕವಾದರೇ, ಜಡ್ಜ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಲಿದೆ.
ಕರ್ನಾಟಕ ಹೈಕೋರ್ಟ್ಗೆ(Karnataka High Court) ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ(Supreme Court Collegium) ಶಿಫಾರಸು ಮಾಡಿದೆ. ಜಿಲ್ಲಾ ಕೋರ್ಟ್ ಜಡ್ಜ್ಗಳಿಗೆ ಹೈಕೋರ್ಟ್ ಜಡ್ಜ್ ಹುದ್ದೆಗೆ ಬಡ್ತಿ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
ಅನಿಲ್ ಭೀಮಸೇನ ಕತ್ತಿ, ಗುರುಸಿದ್ದಯ್ಯ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಷಿ, ಉಮೇಶ್ ಮಂಜುನಾಥ ಭಟ್ ಅಡಿಗ, ತಲಕಾಡು ಗಿರಿಗೌಡ ಶಿವಶಂಕರೇಗೌಡ ಅವರಿಗೆ ಹೈಕೋರ್ಟ್ ಜಡ್ಜ್ ಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಕರ್ನಾಟಕದ ಹೈಕೋರ್ಟ್ ಗೆ 62 ಜಡ್ಜ್ ಹುದ್ದೆಗಳು ಮಂಜೂರಾಗಿದ್ದವು. ಸದ್ಯ 45 ಜಡ್ಜ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಈಗ ಐದು ಮಂದಿ ಬಡ್ತಿ ಪಡೆದು ನೇಮಕವಾದರೇ, ಜಡ್ಜ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಲಿದೆ.
ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈಗ ಕೊಲಿಜಿಯಂ ಶಿಫಾರಸು ಒಪ್ಪಿಕೊಂಡು ನ್ಯಾಯಾಧೀಶರ ನೇಮಕಕ್ಕೆ ಅಧಿಸೂಚನೆ ಹೊರಡಿಸಬೇಕು. ಕೊಲಿಜಿಯಂ ಮೊದಲ ಬಾರಿ ಮಾಡಿದ ಶಿಫಾರಸನ್ನು ಒಪ್ಪದೇ ಮರುಪರಿಶೀಲನೆ ಮಾಡುವಂತೆ ವಾಪಸು ಕೇಂದ್ರ ಸರ್ಕಾರಕ್ಕೆ ಕಳಿಸಬಹುದು. ಆದರೆ ಎರಡನೇ ಬಾರಿಯೂ ಕೊಲಿಜಿಯಂ ಅದೇ ಹೆಸರುಗಳನ್ನು ನೇಮಕಕ್ಕೆ ಶಿಫಾರಸು ಮಾಡಿದರೇ, ಆಗ ಕೇಂದ್ರ ಸರ್ಕಾರ ಕೊಲಿಜಿಯಂ ಶಿಫಾರಸುಗಳನ್ನು ಒಪ್ಪಿಕೊಳ್ಳಲೇಬೇಕು.
Published On - 6:46 pm, Wed, 20 July 22