Mysore News: ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​​​​ ಸ್ನೇಹಿತನ ಕೊಲೆ ಪ್ರಕರಣ: ಮೂವರು ಆರೋಪಿಗಳು ಅಂದರ್

ಅತಿಕ್ರಮವಾಗಿ ಮಹಿಳಾ ವಸತಿ ನಿಲಯಕ್ಕೆ ಪ್ರವೇಶಿಸಿದ್ದ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

Mysore News: ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​​​​ ಸ್ನೇಹಿತನ ಕೊಲೆ ಪ್ರಕರಣ: ಮೂವರು ಆರೋಪಿಗಳು ಅಂದರ್
ಬಂಧಿತ ಆರೋಪಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 20, 2022 | 7:14 AM

ಮೈಸೂರು: ಸೋಶಿಯಲ್ ಮೀಡಿಯಾದಲ್ಲಿ (Social Media) ಕೆಟ್ಟದಾಗಿ ಕಮೆಂಟ್ (Comment) ಸ್ನೇಹಿತನ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ಪಟ್ಟಣ ಪೊಲೀಸರ ಕಾರ್ಯಾಚರಣೆಯಿಂದ ನಿತಿನ್ ಅಲಿಯಾಸ್ ವಠಾರ (23) ಮನೋಜ್ ಕುಮಾರ್ ಅಲಿಯಾಸ್ ಮೋಟು (24) ಪೋತರಾಜ್ (25) ಬಂಧಿತ ಆರೋಪಿಗಳು. ಬೀರೇಶ್​ ಕೊಲೆಯಾಗಿದ್ದ ದುರ್ದೈವಿ. ತನ್ನ ಹೆಂಡತಿಯ ಬಗ್ಗೆ ಬೀರೇಶ್ ಇನ್ಸ್ಟಾಗ್ರಾಮ್​​ನಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡಿರುವ ಆರೋಪ ಮಾಡಲಾಗಿದೆ. ಹಾಡುಹಗಲೇ ಚಾಕುವಿನಿಂದ ಚುಚ್ಚಿ ನಿತಿನ್ ಕೊಲೆ ಮಾಡಿದ್ದ. ಬೈಕಿನಲ್ಲಿ ಮಾತನಾಡಿಸುವ ನೆಪದಲ್ಲಿ ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ದ್ವಿಚಕ್ರ ವಾಹನದ ಮಧ್ಯ ಕೂರಿಸಿಕೊಂಡು ಕೊಲೆ ಮಾಡಿದ್ದು, ಚಾಕುವಿನಿಂದ ಬೀರೇಶ್​ನ ಭುಜ, ಕುತ್ತಿಗೆಗೆ ಪಾತಕಿಗಳು ಬಲವಾಗಿ ಚುಚ್ಚಿದ್ದರು. ಬೀರೇಶ್‌ನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್​ ಸಾವನ್ನಪ್ಪಿದ್ದ. ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Sakshi Agarwal Birthday: ಸ್ಯಾಂಡಲ್​ವುಡ್​ To ಹಾಲಿವುಡ್​: ಬರ್ತ್​ಡೇ ಗರ್ಲ್ ಸಾಕ್ಷಿ ಅಗರ್​ವಾಲ್​ ಸಿನಿ ಜರ್ನಿ

ಆಸ್ತಿ ಆಸೆಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ಅರೆಸ್ಟ್​:

ಬೆಂಗಳೂರು: ಆಸ್ತಿ ಆಸೆಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಬಂಧಿತ ಆರೋಪಿ. ವಿನಯ್ ಕೊಲೆಯಾದ ಯುವಕ. ಚಾಕುವಿನಿಂದ ಚುಚ್ಚಿ ಬಹುಮಾಡಿ ಕಟ್ಟಡದಿಂದ ಎಸೆದು ಹೋಗಿರುವ ಆರೋಪಿ ಸತೀಶ್, ಕಾಮಾಕ್ಷಿಪಾಳ್ಯದ ಕಾವೇರಿಪುರಂನಲ್ಲಿ ಘಟನೆ ನಡೆದಿತ್ತು. ಸಹೋದರರ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿ ಕೊಲೆಯಾಗಿರುವ ಶಂಕೆಯಾಗಿತ್ತು. ಘಟನೆ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಆರೋಪಿ ಸತೀಶ್ ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಘಟನೆ ನಡೆದ ಸ್ಥಳದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಮಹಜರು ಮಾಡಲಾಗಿದೆ.

ಅಪರಿಚಿತ ವಾಹನ ಡಿಕ್ಕಿಯಾಗಿ ಕರಡಿ ಸಾವು:

ಚಿತ್ರದುರ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ ಕರಡಿಯೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದಿದೆ. ಅಪಘಾತದಲ್ಲಿ ಸುಮಾರು ನಾಲ್ಕು ವರ್ಷದ ಗಂಡು ಕರಡಿ ಮೃತಪಟ್ಟಿದೆ. ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇನ್ನು ಈ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತಿಕ್ರಮವಾಗಿ ಮಹಿಳಾ ವಸತಿ ನಿಲಯಕ್ಕೆ ಪ್ರವೇಶಿಸಿದ್ದ ಯುವಕರ ಬಂಧನ:

ಹಾವೇರಿ: ಅತಿಕ್ರಮವಾಗಿ ಮಹಿಳಾ ವಸತಿ ನಿಲಯಕ್ಕೆ ಪ್ರವೇಶಿಸಿದ್ದ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ. ಶ್ರೀರಾಮನಗರದಲ್ಲಿರೋ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿದ್ದ ಮಾರುತಿ ದೇವರಗುಡ್ಡ, ನಾಗರಾಜ ಬೆನ್ನೂರು, ಮಾಲತೇಶ ವಾಲ್ಮೀಕಿ ಪೊಲೀಸರ ಅತಿಥಿಯಾಗಿದ್ದಾರೆ. ಹಾಸ್ಟೆಲ್ ವಾರ್ಡನ್ ಶಶಿರೇಖಾ ಎಂಬುವರ ದೂರಿನ ಆಧಾರದ ಮೇರೆಗೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಈ ಕುರಿತು ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ