Sakshi Agarwal Birthday: ಸ್ಯಾಂಡಲ್​ವುಡ್​ To ಹಾಲಿವುಡ್​: ಬರ್ತ್​ಡೇ ಗರ್ಲ್ ಸಾಕ್ಷಿ ಅಗರ್​ವಾಲ್​ ಸಿನಿ ಜರ್ನಿ

ವಿಶೇಷ ಎಂದರೆ ಸಾಕ್ಷಿ ಕೈಯಲ್ಲಿ ಈಗ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಸಿನಿಮಾಗಳು ಇವೆ. ಇವುಗಳ ಪೈಕಿ 7 ತಮಿಳು ಸಿನಿಮಾ, ಒಂದು ಹಾಲಿವುಡ್ ಚಿತ್ರ.

Sakshi Agarwal Birthday: ಸ್ಯಾಂಡಲ್​ವುಡ್​ To ಹಾಲಿವುಡ್​: ಬರ್ತ್​ಡೇ ಗರ್ಲ್ ಸಾಕ್ಷಿ ಅಗರ್​ವಾಲ್​ ಸಿನಿ ಜರ್ನಿ
ಸಾಕ್ಷಿ ಅಗರ್​ವಾಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 20, 2022 | 6:30 AM

ನಟಿ ಸಾಕ್ಷಿ ಅಗರ್​ವಾಲ್​ (Sakshi Agarwal) ಅವರು ಇಂದು (ಜುಲೈ 20) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ. ಮೂರು ವಾರಗಳ ಹಿಂದೆ ಸಾಕ್ಷಿ ಅಮೆರಿಕಕ್ಕೆ (America) ತೆರಳಿದ್ದಾರೆ. ಅಲ್ಲಿ ಅವರು ಒಂದು ತಿಂಗಳ ಕಾಲ ಸಮಯ ಕಳೆಯುವ ಬಗ್ಗೆ ಆಗಲೇ ತಿಳಿಸಿದ್ದರು. ಹೀಗಾಗಿ, ಅಮೆರಿಕದಲ್ಲೇ ಅವರು ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ಬದುಕು ಆರಂಭಿಸಿದ ಸಾಕ್ಷಿ ಅವರು ಈಗ ಹಾಲಿವುಡ್​ನತ್ತ ಮುಖ ಮಾಡಿದ್ದಾರೆ.

2013ರಲ್ಲಿ ತೆರೆಗೆ ಬಂದ ತಮಿಳಿನ ‘ರಾಜಾ ರಾಣಿ’ ಸಿನಿಮಾದಲ್ಲಿ ಸಾಕ್ಷಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಪಾತ್ರ ಅಷ್ಟು ಪ್ರಾಮುಖ್ಯತೆ ಪಡೆದಿರಲಿಲ್ಲ. ಹೀಗಾಗಿ, ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದು ಕನ್ನಡದ ‘ಸಾಫ್ಟ್​​ವೇರ್ ಗಂಡ’ ಚಿತ್ರದ ಮೂಲಕ ಎನ್ನಬಹುದು. 2014ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಜಗ್ಗೇಶ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ನಾನ್ಸಿ ಎಂಬ ಪಾತ್ರವನ್ನು ಸಾಕ್ಷಿ ಮಾಡಿದ್ದರು.

ಕನ್ನಡದಲ್ಲಿ ನಟಿಸಿದ ನಂತರದಲ್ಲಿ ಸಾಕ್ಷಿಗೆ ಹಲವು ತಮಿಳು ಆಫರ್​ಗಳು ಬಂದವು. 2015ರಿಂದ ಈಚೆಗೆ ಅವರು ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘4 ಸಾರಿ’ ಸಿನಿಮಾ 2021ರಲ್ಲಿ ತೆರೆಗೆ ಬಂತು. ಅದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಇದನ್ನೂ ಓದಿ
Image
ತಾಯಂದಿರ ದಿನದಂದು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಕಾಜಲ್ ಅಗರ್​ವಾಲ್
Image
‘ಆಚಾರ್ಯ’ ತಂಡದಿಂದ ನಟಿ ಕಾಜಲ್​ಗೆ ಅವಮಾನ; ಫ್ಯಾನ್ಸ್​ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ
Image
Kajal Aggarwal: ಕಾಜಲ್ ಅಗರ್ವಾಲ್ ಪುತ್ರನ ಹೆಸರು ಬಹಿರಂಗ; ಮಗುವಿನ ಹೆಸರು ತಿಳಿಸಿದ ಪತಿ ಗೌತಮ್
Image
ಕಾಜಲ್ ಅಗರ್​ವಾಲ್​ ಕಡೆಯಿಂದ ಸಿಹಿ ಸುದ್ದಿ; ಮನೆಗೆ ಹೊಸ ಸದಸ್ಯನ ಆಗಮನ

ವಿಶೇಷ ಎಂದರೆ ಸಾಕ್ಷಿ ಕೈಯಲ್ಲಿ ಈಗ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಸಿನಿಮಾಗಳು ಇವೆ. ಇವುಗಳ ಪೈಕಿ 7 ತಮಿಳು ಸಿನಿಮಾ, ಒಂದು ಹಾಲಿವುಡ್ ಚಿತ್ರ. ‘120 ಅವರ್ಸ್​’ ಹೆಸರಿನ ಇಂಗ್ಲಿಷ್ ಸಿನಿಮಾದಲ್ಲಿ ಸಾಕ್ಷಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಹಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್​ ಅಗರ್​ವಾಲ್​; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ

8 ಚಿತ್ರಗಳ ಕೆಲಸಗಳಲ್ಲಿ ಸಾಕ್ಷಿ ಬ್ಯುಸಿ ಆಗಿದ್ದರು. ಇತ್ತೀಚೆಗೆ ಕೆಲವು ಚಿತ್ರಗಳ ಕೆಲಸಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಈ ಕಾರಣಕ್ಕೆ ಅವರು ಒಂದು ತಿಂಗಳ ಬ್ರೇಕ್ ತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿ ಬರ್ತ್​ಡೇ ಆಚರಿಸಿಕೊಂಡ ನಂತರದಲ್ಲಿ ಸಾಕ್ಷಿ ಮರಳಿ ಭಾರತಕ್ಕೆ ಮರಳಲಿದ್ದಾರೆ. ನಂತರ ಬಾಕಿ ಉಳಿದಿರುವ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ