ತಾಯಂದಿರ ದಿನದಂದು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಕಾಜಲ್ ಅಗರ್​ವಾಲ್

ತಾಯಂದಿರ ದಿನದಂದು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಕಾಜಲ್ ಅಗರ್​ವಾಲ್
ಕಾಜಲ್

ಇತ್ತೀಚೆಗೆ ಕಾಜಲ್​ಗೆ ಗಂಡು ಮಗು ಜನಿಸಿತ್ತು. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬಂದಿದ್ದವು. ಈಗ ಮಗುವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

TV9kannada Web Team

| Edited By: Rajesh Duggumane

May 08, 2022 | 1:38 PM

ನಟಿ ಕಾಜಲ್ಅಗರ್​ವಾಲ್ ಅವರ (Kajal Aggarwal) ಕುಟುಂಬದಲ್ಲಿ ಕೆಲ ದಿನಗಳಿಂದ ಸಂಭ್ರಮ ಮನೆ ಮಾಡಿದೆ. ಕಾಜಲ್​ ಅವರಿಗೆ ಗಂಡು ಮಗು ಜನಿಸಿದೆ. ಇದಾದ ಬೆನ್ನಲ್ಲೇ ಅವರ ಕುಟುಂಬದವರು ಮಗುವಿನ ಹೆಸರು ಬಹಿರಂಗ ಮಾಡಿದ್ದರು. ಕಾಜಲ್​ ತಮ್ಮ ಮಗುವಿಗೆ ನೀಲ್ ಎಂದು ಹೆಸರಿಟ್ಟಿದ್ದಾರೆ. ಈಗ ಅವರು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ವಿಶ್ವ ತಾಯಂದಿರ ದಿನದಂದೇ (Mother’s Day) ಕಾಜಲ್ ಈ ಫೋಟೋ ಹಂಚಿಕೊಂಡಿದ್ದು ವಿಶೇಷ.

ನಟಿ ಕಾಜಲ್​ ಅಗರ್​ವಾಲ್ 2020ರ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆದರು. ತಮ್ಮ ಬಾಯ್​ಫ್ರೆಂಡ್​ ಗೌತಮ್ ಕಿಚ್ಲು ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ತಾವು ​ಪ್ರೆಗ್ನೆಂಟ್​ ಎನ್ನುವ ವಿಚಾರವನ್ನು ಕಾಜಲ್ ಕಳೆದ ವರ್ಷವೇ ಘೋಷಣೆ ಮಾಡಿದ್ದರು. ಇತ್ತೀಚೆಗೆ ಕಾಜಲ್​ಗೆ ಗಂಡು ಮಗು ಜನಿಸಿತ್ತು. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬಂದಿದ್ದವು. ಈಗ ಮಗುವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಕಾಜಲ್​ ಮಲಗಿದ್ದಾರೆ. ಅವರ ಎದೆಯ ಮೇಲೆ ಮಗು ಹಾಯಾಗಿ ನಿದ್ರಿಸಿದೆ. ಈ ಫೋಟೋಗೆ ಉದ್ದನೆಯ ಕ್ಯಾಪ್ಶನ್ ನೀಡಿದ್ದಾರೆ. ಈ ಚಿತ್ರಕ್ಕೆ ಸಮಂತಾ, ನಿಶಾ ಅಗರ್​ವಾಲ್​ ಸೇರಿ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ-ಮಗುವಿನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಕಡೆಯಿಂದ ಪ್ರೀತಿ ಹರಿದು ಬಂದಿದೆ.

‘ನೀನು ಎಷ್ಟು ಅಮೂಲ್ಯ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಬೆಚ್ಚಗಿನ ಉಸಿರನ್ನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸಿತು. ನೀನು ನನ್ನ ಮೊದಲ ಮಗು. ನನ್ನ ಮೊದಲ ಮಗ. ನನ್ನ ಎಲ್ಲ ಮೊದಲಿಗ. ತಾಯಿಯಾಗುವುದು ಏನು ಎಂಬುದನ್ನು ನೀನು ನನಗೆ ಕಲಿಸಿದ್ದೀಯಾ. ನೀನು ನನಗೆ ನಿಸ್ವಾರ್ಥವಾಗಿರಲು ಕಲಿಸಿದ್ದೀಯ. ಶುದ್ಧ ಪ್ರೀತಿ ನಿನ್ನದು’ ಎಂದು ಕಾಜಲ್ ಬರೆದುಕೊಂಡಿದ್ದಾರೆ.

ಕಾಜಲ್​ ಅಗರ್​ವಾಲ್​ಗೆ ಇದೆ ಅಸ್ತಮಾ ಸಮಸ್ಯೆ

‘ನಾನು 5ನೇ ವಯಸ್ಸಿನಲ್ಲಿ ಇದ್ದಾಗ ನನ್ನಲ್ಲಿ ಶ್ವಾಸನಾಳದ ಅಸ್ತಮಾ ಇರುವುದು ಪತ್ತೆಯಾಯಿತು. ಆಗ ನನಗೆ ಆಹಾರದಲ್ಲೂ ಕಟ್ಟುನಿಟ್ಟಾದ ನಿರ್ಬಂಧ ಹೇರಲಾಯಿತು. ಅದರಲ್ಲೂ ಹಾಲಿನ ಉತ್ಪನ್ನಗಳನ್ನು ತಿನ್ನಲು ಬಿಡುತ್ತಿರಲಿಲ್ಲ. ಆಗ ನಾನಿನ್ನೂ ಮಗು. ಎಲ್ಲ ಮಕ್ಕಳಂತೆ ನನಗೂ ಚಾಕಲೇಟ್​, ಐಸ್​ಕ್ರೀಂನಂಥ ತಿಂಡಿಗಳೆಲ್ಲ ಇಷ್ಟವೇ ಇದ್ದರೂ ಅದನ್ನೆಲ್ಲ ಬಿಡಲೇಬೇಕಿತ್ತು. ನಾನು ಬೆಳೆಯುತ್ತ ಹೋದಂತೆ ಅಸ್ತಮಾವನ್ನು ಎದುರಿಸುತ್ತ ಸಾಗುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರತಿ ಬಾರಿ ಎಲ್ಲಿಗಾದರೂ ಪ್ರಯಾಣ ಮಾಡಿದಾಗ, ಚಳಿಗಾಲದಲ್ಲಿ ಅಥವಾ ಧೂಳು, ಹೊಗೆಗೆ ನನ್ನನ್ನು ನಾನು ಒಡ್ಡಿಕೊಂಡಾಗ ನನ್ನಲ್ಲಿರುವ ಅಸ್ತಮಾ ಹೆಚ್ಚಾಗುತ್ತಿತ್ತು. ಆಮೇಲೆ ಬೇರೆ ದಾರಿ ಕಾಣದೆ ಈ ಕಷ್ಟದಿಂದ ಪಾರಾಗಲು ಇನ್​ ಹೇಲರ್​ ಬಳಸಲು ಪ್ರಾರಂಭಿಸಿದೆ. ಹಾಗೇ, ಇನ್​ ಹೇಲರ್​ ತೆಗೆದುಕೊಳ್ಳುವುದರಿಂದ ಕೂಡಲೇ ನನಗೆ ಪರಿಹಾರವೂ ಸಿಗುತ್ತಿತ್ತು.

ಈಗಲೂ ಸಹ ನಾನು ಎಲ್ಲಿಗೇ ಹೋದರೂ ನನ್ನೊಂದಿಗೆ ಇನ್​ ಹೇಲರ್​​ನ್ನು ಕೊಂಡೊಯ್ಯುತ್ತೇನೆ. ನನ್ನ ಕೈಯ್ಯಲಿ ಇನ್​ಹೇಲರ್​ ನೋಡಿ ಅದೆಷ್ಟೋ ಬಾರಿ ಹಲವರು ನನಗೆ ವಿಚಿತ್ರ, ವ್ಯಂಗ್ಯಭರಿತ ಪ್ರಶ್ನೆ ಕೇಳಿದ್ದಾರೆ. ಹಾಗೇ, ಅವರೇ ಒಂದು ನಿರ್ಣಯಕ್ಕೆ ಬಂದಂತೆ ನೋಟದಲ್ಲೇ ಚುಚ್ಚಿದವರೂ ಇದ್ದಾರೆ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲಿ ಲಕ್ಷಾಂತರ ಜನರಿಗೆ ಈ ಇನ್​ ಹೇಲರ್​ ಅಗತ್ಯವಿದೆ. ಆದರೆ ಇದೇ ಕಾರಣಕ್ಕೆ, ಅಂದರೆ ಮುಜುಗರವಾಗುತ್ತದೆ, ಸಮಾಜ ಬೇರೆ ತರ ನೋಡುತ್ತದೆ ಎಂಬ ಕಾರಣಕ್ಕೆ ಇನ್​ ಹೇಲರ್​ ಇಟ್ಟುಕೊಳ್ಳದೆ ಕಷ್ಟಪಡುತ್ತಾರೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada