‘ಗುಮ್ಮಾ ಬಂದ ಗುಮ್ಮಾ..’ ಸಾಂಗ್ ರಿಲೀಸ್​ಗೆ ರೆಡಿ ಆದ ‘ವಿಕ್ರಾಂತ್ ರೋಣ’ ತಂಡ; ಇಲ್ಲಿದೆ ದಿನಾಂಕ, ಸಮಯ

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ.

‘ಗುಮ್ಮಾ ಬಂದ ಗುಮ್ಮಾ..’ ಸಾಂಗ್ ರಿಲೀಸ್​ಗೆ ರೆಡಿ ಆದ ‘ವಿಕ್ರಾಂತ್ ರೋಣ’ ತಂಡ; ಇಲ್ಲಿದೆ ದಿನಾಂಕ, ಸಮಯ
ಕಿಚ್ಚ ಸುದೀಪ್
TV9kannada Web Team

| Edited By: Rajesh Duggumane

Jul 19, 2022 | 7:35 PM

‘ವಿಕ್ರಾಂತ್ ರೋಣ’ ಚಿತ್ರದ (Vikrant Rona Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸುದೀಪ್ (Sudeep) ಅವರು ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಈ ಚಿತ್ರ 3ಡಿಯಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಚಿತ್ರತಂಡದವರು ಒಂದಾದಮೇಲೆ ಒಂದರಂತೆ ಸಾಂಗ್​ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಮೂರು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈಗ ಮತ್ತೊಂದು ಹಾಡು ರಿಲೀಸ್​ಗೆ ರೆಡಿ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ.

‘ವಿಕ್ರಾಂತ್ ರೋಣ’ ಚಿತ್ರತಂಡ ಮೊಟ್ಟ ಮೊದಲ ಬಾರಿಗೆ ರಿಲೀಸ್ ಮಾಡಿದ ಸಾಂಗ್ ‘ರಾ ರಾ ರಕ್ಕಮ್ಮ..’ ಹಾಡು. ಈ ಸಾಂಗ್ ಸೂಪರ್ ಹಿಟ್ ಆಯಿತು. ಇದಾದ ಬಳಿಕ ‘ರಾಜಕುಮಾರಿ..’ ಹೆಸರಿನ ಮೆಲೋಡಿ ಸಾಂಗ್ ಬಿಡುಗಡೆ ಮಾಡಲಾಯಿತು. ನಂತರ ರಿಲೀಸ್ ಆಗಿದ್ದು ‘ಹೇ ಫಕೀರಾ..’ ಹಾಡು. ಈಗ ‘ಗುಮ್ಮಾ ಬಂದ ಗುಮ್ಮಾ..’ ಹಾಡು ಬಿಡುಗಡೆಗೆ ರೆಡಿ ಇದೆ.

‘ಗುಮ್ಮಾ ಬಂದ ಗುಮ್ಮಾ..’ ಹಾಡು ಜುಲೈ 21ರ ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗುತ್ತಿದೆ. ಟ್ರೇಲರ್ ಹಾಗೂ ಟೀಸರ್​ನಲ್ಲಿ ‘ಗುಮ್ಮಾ ಬಂದ ಗುಮ್ಮಾ ಬಂದ..’ ಎನ್ನುವ ಧ್ವನಿ ಕೇಳಿಸಿತ್ತು. ಹೀಗಾಗಿ ಈ ಬಗ್ಗೆ ಕುತೂಹಲ ಸೃಷ್ಟಿ ಆಗಿದೆ. ಈಗ ರಿಲೀಸ್ ಆಗಲಿರುವ ಸಾಂಗ್ ಯಾವ ರೀತಿ ಇರಲಿದೆ ಎಂಬುದು ಸದ್ಯದ ಕುತೂಹಲ.

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಕಾರಣಕ್ಕೂ ‘ವಿಕ್ರಾಂತ್ ರೋಣ’ ಚಿತ್ರದ ಆಲ್ಬಂ ಸಾಕಷ್ಟು ಗಮನ ಸೆಳೆದಿದೆ. ಸಿನಿಮಾ ಹಾಡುಗಳಿಂದಲೂ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಪೈರಸಿ ಆದ್ರೆ? ‘ಆಗಿದ್ದಾಗಲಿ, ಎಲ್ಲವನ್ನೂ ಸಮಾಜಕ್ಕೆ ಬಿಡ್ತೀನಿ’ ಎಂದ ಸುದೀಪ್

ಇದನ್ನೂ ಓದಿ

‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಕ್ ಮಂಜು ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಹೀಗಾಗಿ, ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಹೇಗೆ ಮೂಡಿ ಬಂದಿದೆ ಎಂಬ ಕುತೂಹಲ ಫ್ಯಾನ್ಸ್​​ಗಳದ್ದು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada