ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಗೆ ಅವಕಾಶ ಇಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿರುವುದು ಮಾರ್ಮಿಕವಾಗಿದೆ ಎಂದು ಕಾಲೆಳೆದ ಹೆಚ್ ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಆಗಲು ಒಕ್ಕಲಿಗರಿಗೆ ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ. ಜೆಡಿಎಸ್‌ ಪಕ್ಷಕ್ಕೆ ಅವಕಾಶವಿದೆ ಅದನ್ನು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಟಿವಿ9ಗೆ ಹೇಳಿದ್ದಾರೆ.

ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಗೆ ಅವಕಾಶ ಇಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿರುವುದು ಮಾರ್ಮಿಕವಾಗಿದೆ ಎಂದು ಕಾಲೆಳೆದ ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 19, 2022 | 8:10 PM

ಮೈಸೂರು: ಮುಖ್ಯಮಂತ್ರಿ ಆಗಲು ಒಕ್ಕಲಿಗರಿಗೆ ಕಾಂಗ್ರೆಸ್‌ನಲ್ಲಿ (Congress) ಅವಕಾಶವಿಲ್ಲ. ಜೆಡಿಎಸ್‌ (JDS) ಪಕ್ಷಕ್ಕೆ ಅವಕಾಶವಿದೆ ಅದನ್ನು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ (HD Kumarswamy) ಟಿವಿ9ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗಲು ಪೈಪೋಟಿಯ ಕ್ಯೂ ಇದೆ. ಅಮೃತ ಮಹೋತ್ಸವದ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಹೊರಟಿದ್ದಾರೆ ಎಂದು ಹೇಳಿದರು.

ಅಮೃತ ಮಹೋತ್ಸವ ಡಿಕೆ ಶಿವಕುಮಾರ ಸಿಎಂ ಮಾಡಲು ಮಾಡುತ್ತಿದ್ದಾರಾ? ಸಿದ್ದರಾಮಯ್ಯ ಸಿಎಂ ಆಗಲು ಸಮಾವೇಶ ನಡೆಯುತ್ತಿದೆ.  ಮಾರ್ಮಿಕವಾಗಿ ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಗೆ ಅವಕಾಶವಿಲ್ಲ. ಜೆಡಿಎಸ್  ಮತ್ತು ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಅಂತಾ ಡಿಕೆ ಶಿವಕುಮಾರ ಅವರು ಸೂಚ್ಯವಾಗಿ‌ ಹೇಳಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಡಿಕೆ ಅಥವಾ ಬೇರೆಯವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಲ್ಲ. ಹಿಂದೆ ಖರ್ಗೆಯಂತಹ ಹಳೆಯ ನಾಯಕರಿಗೆ ಆಗಲಿಲ್ಲ. ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೂ ಸಾಧ್ಯವಾಗಲಿಲ್ಲ ಇನ್ನು ಡಿ ಕೆ ಶಿವಕುಮಾರ್ ಅವರಿಗೆ ಆಗುತ್ತದಾ ? ಅವರ ಆಸೆ ಅಷ್ಟು ಸುಲಭವಾಗಿ ಕೈ ಗೂಡುವುದಿಲ್ಲ.  ಸಿದ್ದರಾಮಯ್ಯ ನಮ್ಮ ಜೊತೆಗಿದ್ದವರು. ಅವರ ಬಗ್ಗೆ ನನಗೆ ಅನುಭವ ಜಾಸ್ತಿ ಇದೆ.  ಸಿದ್ದರಾಮಯ್ಯ ಸಿಎಂ ಆಗುವ ನಿಟ್ಟಿನಲ್ಲಿ ಇವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದರು.

ಡಿ ಕೆ ಶಿವಕುಮಾರ ಅವರಿಗೆ ಅಷ್ಟು ಸುಲಭವಾಗಿ ಅವಕಾಶ ಸಿಗುವುದಿಲ್ಲ. ಒಕ್ಕಲಿಗ ಸಮುದಾಯದವರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಈ ಸಭೆಯೇ ಸಾಕ್ಷಿ. ಡಿ ಕೆ ಶಿವಕುಮಾರ್ ಮುಂದೆ ಜನ ನನ್ನ ಹೆಸರು ಹೇಳಿದಾಗ ವ್ಯಕ್ತಪಡಿಸಿದ್ದಾರೆ.  ಶಿವಕುಮಾರ್ ಹೇಳಿರುವುದರಲ್ಲಿ ಹಲವು ಅರ್ಥಗಳಿವೆ. ಮುಂದಿನ ದಿನದಲ್ಲಿ ಕಾದು ನೋಡೋಣ. ಎಲ್ಲರಿಗೂ ಸಾಧನೆ ಮಾಡುವ ಆಸೆ ಇರುತ್ತದೆ.  ಡಿ ಕೆ ಶಿವಕುಮಾರ್ ಆಸೆ ತಪ್ಪಲ್ಲ. ಆದರೆ ಅಷ್ಟೇ ಸಿಎಂ ಆಗುವ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿ ನಿರ್ಮಾಣ ಆಗುವುದಿಲ್ಲ ಎಂದು ಮಾತನಾಡಿದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ, ಅದು ಕಾಂಗ್ರೆಸ್ ಅವನತಿಗೆ ಬೇಸ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮೊದಲು ಕಾಂಗ್ರೆಸ್​ ಅಧಿಕಾರಕ್ಕೆ ಬರಲಿ ಎಂದ ಮಲ್ಲಿಕಾರ್ಜುನ ಖರ್ಗೆ ಒಕ್ಕಲಿಗರು ಸಿಎಂ ಆಗಬೇಕೆಂಬ ವಿಚಾರ “ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು.”  ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಬಹುಮತ ಬಂದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ ಎಂದು  ದೆಹಲಿಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ತತ್ವ, ಸಿದ್ಧಾಂತಗಳ ಉಳಿಸಲು ನಾವು ಹೋರಾಟ ಮಾಡಬೇಕು. ಎಷ್ಟೋ ಪಕ್ಷಗಳು ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಆದರೂ ಅವ ರೂ ಸಿದ್ಧಾಂತ ಬಿಟ್ಟು ಬೇರೆ ಕಡೆ ಹೋಗಿಲ್ಲ. ಪ್ರಜಾಪ್ರಭುತ್ವ ಸಿದ್ಧಾಂತ, ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.

ನಾನು ಕಾವಿ ತೊಟ್ಟಿಲ್ಲ, ಖಾದಿ ತೊಟ್ಟಿದ್ದೇನೆ: ಡಿಕೆ ಶಿವಕುಮಾರ

ಚಾಮರಾಜನಗರ: ನಾನು ಕಾವಿ ತೊಟ್ಟಿಲ್ಲ, ಖಾದಿ ತೊಟ್ಟಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೇಳಿದ್ದಾರೆ. ನನ್ನ ಕಾಂಗ್ರೆಸ್ ಹಿಸ್ಟರಿ ಗೊತ್ತಾ ನಿಮಗೆ ? ನನ್ನ ಹಿಸ್ಟರಿ ಗೊತ್ತಾ ? ನಾನು ಯಾವಾಗ ಚುನಾವಣೆ ನಿಂತಿದ್ದು ಗೊತ್ತಾ ? ನಾನು ಯಾರ ಮೇಲೆ ಗೆದ್ದಿದ್ದೇನೆ, ಸೋತಿದ್ದೇನೆ ಅಂತ ಗೊತ್ತಾ? ನನ್ನ ಪಕ್ಷ ಹಾಗೂ ಜನ ಇಲ್ಲಿಯವರೆಗೆ ನನ್ನನ್ನು ತಂದಿದೆ. ನಾನು ಈಗ ಅಧ್ಯಕ್ಷ ಆಗಿದ್ದೇನೆ ಎಂದರು.

ನನ್ನ ಅವಧಿಯಲ್ಲಿ ಸರ್ಕಾರ ಅಧಿಕಾರಕ್ಕೆ ಬರಬೇಕು ಅದೇ ನನ್ನ ಅಜೆಂಡಾ. ನಾನು ಸಿಎಂ ಆಗೋದು ಬಿಡೋದು ಹೈಕಮಾಂಡ್​​ಗೆ ಬಿಟ್ಟಿದ್ದು. 40 ಕ್ಷೇತ್ರಗಳಲ್ಲಿ​ ಗೆದ್ದವರಿಗೆ ಸಿಎಂ ಆಗಬೇಕೆಂಬ ಆಸೆ ಇದ್ದ ಮೇಲೆ. 80 ಕ್ಷೇತ್ರಗಳಲ್ಲಿ​ ಗೆದ್ದವರಿಗೆ ಸಿಎಂ ಆಗಬೇಕೆಂಬ ಆಸೆ ಇರಲ್ವಾ? ಎಂದು ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಡಿ.ಕೆ.ಶಿವಕುಮಾರ್​ ಟಾಂಗ್ ಕೊಟ್ಟಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿಗೆ ಶುಭವಾಗಲಿ, ಅವರಿಗೆ ಒಳ್ಳೆಯದಾಗಲಿ. ಹೆಚ್.ಡಿ.ಕುಮಾರಸ್ವಾಮಿ ಆಸೆಗಳು ಏನೇನಿದೆ ಅದೆಲ್ಲವೂ ಈಡೇರಲಿ ಎಂದರು

ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ವಿಚಾರವಾಗಿ ಬೆಂಬಲಿಗರ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ನನಗೆ ಅಭಿಮಾನಿಗಳಿಲ್ಲ, ನನಗೆ ಯಾವ ಬಣವೂ ಇಲ್ಲ, ನಂದು ಕಾಂಗ್ರೆಸ್​ ಬಣ. ಕೆಲವರು ಆಸೆಯಿಂದ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಾರೆ. ನಾನು ಎಷ್ಟು ಜನರಿಗೆ ಕೂಗಬೇಡಿ ಎಂದು ಹೇಳಲಿ. ಕೆಲವರಿಗೆ ಆಸೆ ಇರುತ್ತೆ, ಇದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ತರಬೇಕಿದೆ, ಅದರತ್ತ ಗಮನ ಕೊಡುವೆ.

ಒಬ್ಬರಿಗೆ ಚಿಕನ್ ತಿನ್ನುವಾಸೆ, ಮತ್ತೊಬ್ಬರಿಗೆ ವೆಜಿಟೇರಿಯನ್ ತಿನ್ನುವಾಸೆ. ಒಬ್ಬೊಬ್ಬರ ಟೇಸ್ಟ್​ ಒಂದೊಂದು ರೀತಿ ಇರುತ್ತದೆ ಎಂದು ತಿಳಿಸಿದರು.

Published On - 5:59 pm, Tue, 19 July 22

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ