ನಾನು ಸನ್ಯಾಸಿ ಅಲ್ಲ, ಕಾವಿ ತೊಟ್ಟಿಲ್ಲ, ಖಾದಿ ತೊಟ್ಟಿದ್ದೇನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಪ್ರತಿಪಕ್ಷ ವೀಕ್ ಆಗಿಲ್ಲ. ವೀಕ್ ಆಗಿದ್ದರೆ ಸಚಿವರು ರಾಜೀನಾಮೆ ನೀಡುತ್ತಿದ್ದರಾ. ನಮ್ಮ ಕೈಲಾದ ಹೋರಾಟವನ್ನು ನಾವು ಮಾಡಿದ್ದೇವೆ.
ಮೈಸೂರು: ನಾನು ಸನ್ಯಾಸಿ ಅಲ್ಲ, ಕಾವಿ ತೊಟ್ಟಿಲ್ಲ ಖಾದಿ ತೊಟ್ಟಿದ್ದೇನೆ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಎಸ್.ಎಂ.ಕೃಷ್ಣ ನಂತರ ಸಿಎಂ ಆಗುವ ಅವಕಾಶ ಬಂದಿದ್ದು, ಅದನ್ನು ಮಿಸ್ ಮಾಡಿಕೊಳ್ಳಬೇಡಿ ಅಂತಾ ಹೇಳಿದ್ದೇನೆ. ಸಮುದಾಯ ನನ್ನ ಪರ ನಿಲ್ಲಲಿ ಅಂತಾ ಮನದಟ್ಟು ಮಾಡಿದ್ದೇನೆ. ಸಿಎಂ ಆಗಬೇಕಾದರೆ ನಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲಬೇಕು. ಆಮೇಲೆ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತೆ. ನನ್ನ ಬೆನ್ನಿಗೆ ಒಕ್ಕಲಿಗರು ಮಾತ್ರವಲ್ಲ ಎಲ್ಲಾ ಸಮುದಾಯಗಳು ನಿಲ್ಲಲಿ. ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಸಿಎಂ ಆಗುವುದು ಸಂಪ್ರದಾಯ. ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಆಗಿದ್ದರು. ಅಂತಹದೊಂದು ಅವಕಾಶ ಸಮುದಾಯಕ್ಕೆ ಸಿಕ್ಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಷ್ಟ ಪಟ್ಟಿದ್ದೀನಿ. ಅನುಭವಿಸಿದ್ದೀನಿ. ಯಾರಿಗೂ ತೊಂದ್ರೆ ಕೊಟ್ಟಿಲ್ಲ. ಇಡೀ ಸಮಾಜ, ನಿಮ್ಮ ಸಮಾಜಕ್ಕೆ ಮತ್ತೆ ಎಸ್.ಎಂ.ಕೃಷ್ಣ ಅವರಾದ ಮೇಲೆ ಒಂದು ಅವಕಾಶ ಇದೆ ಅಂತಂದ್ರೆ. ಇದು ಮತ್ತೆ.. ನಿಮ್ಮ ಸಮಾಜಕ್ಕೆ ಯಾರಿಗಿದೆ ಅಂತಾ ನಾನು ಬಾಯ್ಬಿಟ್ಟು ಹೇಳೋದಿಲ್ಲ. ಅದನ್ನು ಉಳಿಸಿಕೊಳ್ಳೋದು ಬೆಳೆಸಿಕೊಳ್ಳೋದು ನಿಮಗೆ ಬಿಟ್ಟಿದ್ದು. ದೇವ್ರು ವರಾನೂ ಕೊಡೋದಿಲ್ಲ. ಶಾಪನೂ ಕೊಡೋದಿಲ್ಲ. ಆದರೆ ಅವಕಾಶಗಳನ್ನು ಮಾತ್ರ ಕೊಡುತ್ತಾನೆ. ಆ ಅವಕಾಶಗಳನ್ನು ನೀವು ಕಳ್ಕೊಳ್ಳಬೇಡಿ ಅನ್ನೋ ಮಾತನ್ನು ಈ ಸಂದರ್ಭದಲ್ಲಿ ಹೇಳೋಕೆ ಬಯಸ್ತೀನಿ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿಪಕ್ಷ ವೀಕ್ ಆಗಿಲ್ಲ:
ರಾಜ್ಯದಲ್ಲಿ ಪ್ರತಿಪಕ್ಷ ವೀಕ್ ಆಗಿಲ್ಲ. ವೀಕ್ ಆಗಿದ್ದರೆ ಸಚಿವರು ರಾಜೀನಾಮೆ ನೀಡುತ್ತಿದ್ದರಾ. ನಮ್ಮ ಕೈಲಾದ ಹೋರಾಟವನ್ನು ನಾವು ಮಾಡಿದ್ದೇವೆ. ಕೇಂದ್ರ ಸರ್ಕಾರ ಹಲವು ವಿಚಾರದಲ್ಲಿ ಯೂಟರ್ನ್ ಆಗಿದೆ. ದಪ್ಪ ಚರ್ಮದ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಸರ್ಕಾರದ ಸಾಧನಾ ಸಮಾವೇಶ ವಿಚಾರವಾಗಿ ಮಾತನಾಡಿದ್ದು, ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಭರವಸೆ ಈಡೇರಿಸಿದ್ದೇವೆ. ಅವರ 40% ರೈತರಿಗೆ ದುಡ್ಡು ತಲುಪಿಲ್ಲ. ಪಿಎಸ್‌ಐ ಹಗರಣದ ಸೇರಿ ಎಲ್ಲದರ ಬಗ್ಗೆ ಸಮಾವೇಶದಲ್ಲಿ ಹೇಳಲಿ ಎಂದು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.