ತಾನು ಪ್ರೀತಿಸಿದ ಹುಡುಗಿ ಬೇರೊಬ್ಬರ ಜೊತೆ ಮದುವೆಯಾದಳೆಂದು ಮನನೊಂದ ಯುವಕ ಆತ್ಮಹತ್ಯೆ

ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲದ ಸುಭಾಷ್ ನಗರದಲ್ಲಿ ಪ್ರವೀಣ್(30) ಎಂಬ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಪ್ರವೀಣ್ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ಜೊತೆ ಲವ್ ಬ್ರೇಕಪ್ ಆಗಿತ್ತು. ಅಲ್ಲದೆ ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬರ ಜೋತೆ ವಿವಾಹವಾದಳು.

ತಾನು ಪ್ರೀತಿಸಿದ ಹುಡುಗಿ ಬೇರೊಬ್ಬರ ಜೊತೆ ಮದುವೆಯಾದಳೆಂದು ಮನನೊಂದ ಯುವಕ ಆತ್ಮಹತ್ಯೆ
ಪ್ರವೀಣ್
Updated By: ಆಯೇಷಾ ಬಾನು

Updated on: Jan 13, 2024 | 8:02 AM

ನೆಲಮಂಗಲ, ಜ.13: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬರ ಜೊತೆ ಮದುವೆಯಾದಳು ಎಂಬ ಕಾರಣಕ್ಕೆ ಮನನೊಂದ ಯುವಕ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ (Love Failure). ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲದ ಸುಭಾಷ್ ನಗರದಲ್ಲಿ ಪ್ರವೀಣ್(30) ಎಂಬ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ (Death) ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ಇಡೀ ಕುಟುಂಬ ಕಣ್ನೀರಲ್ಲಿ ಕೈತೊಳೆಯುತ್ತಿದೆ.

ಮೃತ ಪ್ರವೀಣ್ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ಜೊತೆ ಲವ್ ಬ್ರೇಕಪ್ ಆಗಿತ್ತು. ಅಲ್ಲದೆ ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬರ ಜೋತೆ ವಿವಾಹವಾದಳು. ಇದರಿಂದ ನೊಂದಿದ್ದ ಯುವಕ ಕಳೆದ 6 ತಿಂಗಳಿಂದ ಯುವತಿಯ ನೆನಪಲ್ಲೇ ಕಣ್ಣೀರು ಹಾಕಿದ್ದ. ಆದರೆ ನಿನ್ನೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರೂಂನ ಫ್ಯಾನಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರತಿಷ್ಠಿತ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಕಳ್ಳಾಟ? ಡಿಸ್ಚಾರ್ಜ್ ವೇಳೆ ಅಡ್ವಾನ್ಸ್ ಅಂತಾ ಹಣ ಪಡೆದು ಬಿಲ್ ಕೊಟ್ಟ ಸಿಬ್ಬಂದಿ

ಪಿಕಪ್, ಆಟೋ ನಡುವೆ ಭೀಕರ ಅಪಘಾತ

ಪಿಕಪ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ, ಆಟೋ ಚಾಲಕ ಸುನೀಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಘಟನೆ ನಡೆದಿದ್ದು, ಪಿಕಪ್ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಸದ್ಯ ಪಿಕಪ್ ವಾಹನದ ಚಾಲಕ ಮೋಕ್ಷಿತ್​​​ನನ್ನು ಬಂಧಿಸಲಾಗಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 ಬಾರಿ ಚಾಕು ಇರಿದವನಿಗೆ 18 ವರ್ಷ ಶಿಕ್ಷೆ!

ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ ಇರಿದಿದ್ದವನಿಗೆ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಅಪರಾಧಿ ಸುಶಾಂತ್ ಅಲಿಯಾಸ್ ಶಾನ್​ಗೆ 18 ವರ್ಷ 1 ತಿಂಗಳು ಜೈಲು ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ನಿಂದ ಶಿಕ್ಷೆ ಪ್ರಕಟಿಸಿದೆ. ಜೊತೆಗೆ ದಂಡದ ರೂಪದಲ್ಲಿ ಸಂತ್ರಸ್ತೆಗೆ 2 ಲಕ್ಷ ಹಣ ನೀಡುವಂತೆ ಕೋರ್ಟ್ ಆದೇಶಿಸಿದೆ.
2019ರ ಜೂನ್ 28ರಂದು ಯುವತಿಗೆ ಸುಶಾಂತ್ ಅಲಿಯಾಸ್ ಶಾನ್ 12 ಬಾರಿ ಚೂರಿ ಇರಿದ್ದ. ತಿಂಗಳುಗಟ್ಟಲೆ ಚಿಕಿತ್ಸೆ ಪಡೆದ ಯುವತಿ ಗುಣಮುಖವಾಗಿದ್ಲು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ