AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಕಳ್ಳಾಟ? ಡಿಸ್ಚಾರ್ಜ್ ವೇಳೆ ಅಡ್ವಾನ್ಸ್ ಅಂತಾ ಹಣ ಪಡೆದು ಬಿಲ್ ಕೊಟ್ಟ ಸಿಬ್ಬಂದಿ

ಬೆಂಗಳೂರಿನ ಜಯನಗರದಲ್ಲಿರೋ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಂದ ಡಿಸ್ಚಾರ್ಜ್ ವೇಳೆ ಹಣ ಪಡೆಯಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಯಶಸ್ವಿನಿ ಕಾರ್ಡ್, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಅಥವಾ ರಿಯಾಯಿತಿ ನೀಡಬೇಕು ಅನ್ನೋ ನಿಯಮವಿದೆ. ಆದರೆ ಡಿಸ್ಚಾರ್ಜ್ ಬಿಲ್​ನಲ್ಲಿ ಯಾವುದಕ್ಕೆ ಹಣ ಪಡೆದಿದ್ದಾರೆ ಅನ್ನೋದನ್ನ ನಮೂದಿಸದೇ ಇರೋದು ಹಲವು ಅನುಮಾನ ಮೂಡಿಸಿದೆ.

ಪ್ರತಿಷ್ಠಿತ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಕಳ್ಳಾಟ? ಡಿಸ್ಚಾರ್ಜ್ ವೇಳೆ ಅಡ್ವಾನ್ಸ್ ಅಂತಾ ಹಣ ಪಡೆದು ಬಿಲ್ ಕೊಟ್ಟ ಸಿಬ್ಬಂದಿ
ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ
TV9 Web
| Updated By: ಆಯೇಷಾ ಬಾನು|

Updated on: Jan 13, 2024 | 7:13 AM

Share

ಬೆಂಗಳೂರು, ಜ.13: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ (Sanjay Gandhi Institute of Trauma and Orthopaedics) ವಿರುದ್ಧ ಯಶಸ್ವಿನಿ ಕಾರ್ಡ್ (Yashaswini Card), ಬಿಪಿಎಲ್ ಕಾರ್ಡ್ (BPL Card) ಫಲಾನುಭವಿಗಳಿಂದ ಹಣ ಕಟ್ಟಿಸಿಕೊಂಡ ಆರೋಪ ಕೇಳಿಬಂದಿದೆ. ರೋಗಿಗಳು ಡಿಸ್ಚಾರ್ಜ್ ಆಗೋ ವೇಳೆ ಅಡ್ವಾನ್ಸ್ ಅಂತಾ ಹಣ ಪಡೆದು ಬಿಲ್ ಕೊಟ್ಟಿರೋ ಆರೋಪ ಕೇಳಿಬಂದಿದೆ. ಒಳ್ಳೆಯ ಚಿಕಿತ್ಸೆ ಸಿಗುತ್ತೆ ಅಂತಾ ಆಸ್ಪತ್ರೆಗೆ ಬಂದ ರೋಗಿಗಳು, ಇದೀಗ ಬಿಲ್ ಕೊಟ್ಟಿದ್ದನ್ನ ಕಂಡು ಕಂಗಾಲಾಗಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿರೋ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಂದ ಡಿಸ್ಚಾರ್ಜ್ ವೇಳೆ ಹಣ ಪಡೆಯಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ತುಮಕೂರು ಮೂಲದ ಯುವಕನೊಬ್ಬ ಡಿಸೆಂಬರ್ 30ನೇ ತಾರೀಕು ಕಾಲಿನ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ರು, ಚಿಕಿತ್ಸೆ ಮುಗಿಸಿ ಡಿಸ್ಚಾರ್ಜ್ ಆಗೋ ವೇಳೆ ಆಸ್ಪತ್ರೆ ಸಿಬ್ಬಂದಿ 3 ಸಾವಿರ ರೂಪಾಯಿ ಪಡೆದು ಬಿಲ್ ಕೈಗಿಟ್ಟಿದ್ದಾರೆ. ಬಿಲ್ ನಲ್ಲಿ ಸೇವೆಯ ವಿವರ ಇಲ್ಲದ್ದನ್ನ ಕಂಡ ರೋಗಿ ಸಂಬಂಧಿಕರು, ಹಣ ಯಾಕೆ ಪಡಿತಿದ್ದಾರೆ ಅಂತಾ ತಮ್ಮ ಜಿಲ್ಲೆಯ ಯಶಸ್ವಿನಿ ಸಂಯೋಜಕರನ್ನ ಕೇಳಿದಾಗ, ದೂರು ನೀಡಿವಂತೆ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಯುವನಿಧಿ: ಮಾರ್ಗ ಮಧ್ಯೆ ಕೆಟ್ಟುನಿಂತ ಕೆಎಸ್​ಆರ್​ಟಿಸಿ ಬಸ್​ ತಳ್ಳಿದ ವಿದ್ಯಾರ್ಥಿಗಳು

ಇನ್ನು ಯಶಸ್ವಿನಿ ಕಾರ್ಡ್, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಅಥವಾ ರಿಯಾಯಿತಿ ನೀಡಬೇಕು ಅನ್ನೋ ನಿಯಮವಿದೆ. ಆದರೆ ಡಿಸ್ಚಾರ್ಜ್ ಬಿಲ್​ನಲ್ಲಿ ಯಾವುದಕ್ಕೆ ಹಣ ಪಡೆದಿದ್ದಾರೆ ಅನ್ನೋದನ್ನ ನಮೂದಿಸದೇ ಇರೋದು ಹಲವು ಅನುಮಾನ ಮೂಡಿಸಿದೆ. ಇನ್ನು ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ಆ ರೀತಿ ಸುಮ್ಮ ಸುಮ್ಮನೆ ಹಣ ತೆಗೆದುಕೊಳ್ಳಲ್ಲ, ಒಂದು ವೇಳೆ ಏನಾದ್ರೂ ಸಮಸ್ಯೆಯಾಗಿದ್ರೆ ಹಣ ಹಿಂದಿರುಗಿಸ್ತೀವೆ ಅಂತಿದ್ದಾರೆ. ಆದರೆ ಆಸ್ಪತ್ರೆಗೆ ಬಂದು ಡಿಸ್ಚಾರ್ಜ್ ಆದ ಕೆಲ ರೋಗಿಗಳು, ಹಣ ಹಿಂತಿರುಗಿಸಿ ಅಂತಾ ಈ ಹಿಂದೆ ಇದ್ದ ನಿರ್ದೇಶಕರಿಗೆ ಪತ್ರ ಬರೆದಿದ್ದು, ಇದರಿಂದ ಹಣ ಎಷ್ಟರಮಟ್ಟಿಗೆ ರೋಗಿಗಳಿಗೆ ವಾಪಸ್ ಆಗ್ತಿದೆ ಅನ್ನೋ ಪ್ರಶ್ನೆ ಮೂಡಿಸಿದೆ.

ಸದ್ಯ ಆಸ್ಪತ್ರೆಯ ಡಿಸ್ಚಾರ್ಜ್ ಬಿಲ್ ಪಡೆದ ರೋಗಿ ಹಾಗೂ ಆತನ ಸಂಬಂಧಿಕರು, ಯಶಸ್ವಿನಿ ಕಾರ್ಡ್ ಸೇವೆಯಲ್ಲಿ ಏನೋ ಗೋಲ್ ಮಾಲ್ ಆಗ್ತಿದೆ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಬಗ್ಗೆ ಯಶಸ್ವಿನಿ ಸೇವೆ ನಿರ್ವಹಣಾಧಿಕಾರಿಗಳಿಗೂ ದೂರು ಕೊಡಲು ಕೂಡ ನಿರ್ಧರಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್