ತ್ರಿಕೋನ ಪ್ರೇಮ: ಯುವತಿ ಮತ್ತು ಆಕೆಯ ಸ್ನೇಹಿತನ ಕೊಂದು, ತಾನು ಗುಂಡು ಹಾರಿಸಿಕೊಂಡ ಯುವಕ
Madhya Pradesh: ಇಂದೋರ್ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾನು ಇಷ್ಟಪಟ್ಟ ಹುಡುಗಿಯನ್ನು ತನಗೆ ಸಿಕ್ಕಿಲ್ಲ ಎಂದು ಹುಡುಗಿ ಮತ್ತು ಆಕೆಯ ಸ್ನೇಹಿತನ್ನು ಕೊಂದು ತಾನು ಗುಂಡು ಹಾರಿಸಿಕೊಂಡ ಸಾವನ್ನಪ್ಪಿದ್ದಾನೆ. ಇದು ತ್ರಿಕೋನ ಪ್ರೇಮ ಪ್ರಕರಣ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಸಾವನ್ನಪ್ಪಿರುವ ಮೂವರ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ.
ಇಂದೋರ್, ಏ.05: ಮಧ್ಯಪ್ರದೇಶದ ಇಂದೋರ್ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾನು ಇಷ್ಟಪಟ್ಟ ಹುಡುಗಿಯನ್ನು ತನಗೆ ಸಿಕ್ಕಿಲ್ಲ ಎಂದು ಹುಡುಗಿ ಮತ್ತು ಆಕೆಯ ಸ್ನೇಹಿತನ್ನು ಕೊಂದು ತಾನು ಗುಂಡು ಹಾರಿಸಿಕೊಂಡ ಸಾವನ್ನಪ್ಪಿದ್ದಾನೆ. ಇದು ತ್ರಿಕೋನ ಪ್ರೇಮ ಪ್ರಕರಣ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಸಾವನ್ನಪ್ಪಿರುವ ಮೂವರ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ.
ಈ ಘಟನೆ ನಡೆಯುವ ಮುನ್ನ ಮೂವರು ಕೂಡ ದೇವಸ್ಥಾನದಲ್ಲಿ ಭೇಟಿಯಾಗಿದ್ದಾರೆ. ಮೂರು ಜನರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಆರೋಪಿಯನ್ನು 26 ವರ್ಷದ ಅಭಿಷೇಕ್ ಯಾಧವ್ ಎಂದು ಹೇಳಲಾಗಿದೆ. ಈತ ಸ್ನೇಹಾ ಜಾಟ್ (22) ಹಾಗೂ ಈಕೆಯ ಪ್ರೇಮಿ ದೀಪಕ್ ಜಾಟ್ನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಸ್ನೇಹಾ ಮತ್ತು ದೀಪಕ್ ಸಂಬಂಧಿಕರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಇದು ತ್ರಿಕೋನ ಪ್ರೇಮ ಪ್ರಕರಣ ಎಂದು ಹೇಳಲಾಗಿದೆ. ಹತ್ಯೆಯಾಗಿರುವ ಸ್ನೇಹಾ ಮತ್ತು ದೀಪಕ್ ಇಬ್ಬರು ಕೂಡ ಪ್ರೀತಿಸುತ್ತಿದ್ದರು. ಆದರೆ ಆರೋಪಿ ಅಭಿಷೇಕ್ ಸ್ನೇಹಾನ್ನು ಪ್ರೀತಿ ಮಾಡುತ್ತಿದ್ದ, ಸ್ನೇಹಾ ಅಭಿಷೇಕ್ನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಮಾತನಾಡಿದ ಸ್ನೇಹಾಳ ತಂದೆ, ಬೆಳಿಗ್ಗೆ ಆಕೆಯನ್ನು ಕಾಲೇಜ್ವರೆಗೆ ನಾನೇ ಬಿಟ್ಟಿದ್ದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು, ಆಕೆಯ ತಂದೆ ಕಾಲೇಜಿಗೆ ಬಿಟ್ಟ ನಂತರ ದೀಪಕ್ನ್ನು ಭೇಟಿಯಾಗಿದ್ದಾಳೆ, ಈ ಸಮಯದಲ್ಲಿ ಸ್ನೇಹಾಳಿಗೆ ತನ್ನನ್ನು ಭೇಟಿಯಾಗುಂತೆ ಅಭಿಷೇಕ್ ಕರೆ ಮಾಡಿ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಾನೆ. ಸ್ನೇಹಾ ಮತ್ತು ದೀಪಕ್ ಇಬ್ಬರು ಬೈಕ್ನಲ್ಲಿ ದೇವಸ್ಥಾನಕ್ಕೆ ಹೋಗಿದ್ದಾರೆ.
ಇದನ್ನೂ ಓದಿ: ದೆಹಲಿ: ಮನೆಯೊಂದರ ಕಪಾಟಿನಲ್ಲಿ ಮಹಿಳೆಯ ಶವ ಪತ್ತೆ
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಸಮಯದಲ್ಲಿ ಅಭಿಷೇಕ್ ಗನ್ ತೆಗೆದು, ಸ್ನೇಹಾ ಹಾಗೂ ದೀಪಕ್ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಇಬ್ಬರು ಕೂಡ ಅಭಿಷೇಕ್ನ ಗುಂಡಿನ ದಾಳಿಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರಿಬ್ಬರನ್ನು ಎಳೆದು ತಲೆಗೆ ಗುಂಡು ಹಾರಿಸಿದ್ದಾನೆ. ಇಬ್ಬರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಸಮಯದಲ್ಲಿ ಆತನು ಕೂಡ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ