ದಾವಣಗೆರೆ: ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಪಾದ್ರಿ ಬಂಧನ
ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಜಯನಗರದ ಚರ್ಚ್‌ನ ಪಾದ್ರಿ ರಾಜಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪಾದ್ರಿ ರಾಜಶೇಖರ್ನನ್ನು ಖಚಿತ ಮಾಹಿತಿ, ಮೊಬೈಲ್ ಲೊಕೇಷನ್ ಆಧರಿಸಿ ಹೈದರಾಬಾದ್‌ನಲ್ಲಿ ಕೆಟಿಜೆ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದಾವಣಗೆರೆ, ಏಪ್ರಿಲ್ 04: ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಜಯನಗರದ ಚರ್ಚ್‌ನ ಪಾದ್ರಿ (priest) ರಾಜಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪಾದ್ರಿ ರಾಜಶೇಖರ್ನನ್ನು ಖಚಿತ ಮಾಹಿತಿ, ಮೊಬೈಲ್ ಲೊಕೇಷನ್ ಆಧರಿಸಿ ಹೈದರಾಬಾದ್‌ನಲ್ಲಿ ಕೆಟಿಜೆ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚರ್ಚ್‌ಗೆ ಬರುತ್ತಿದ್ದ ಮಹಿಳೆಯೊಬ್ಬರು ಪಾದ್ರಿ ವಿರುದ್ಧ ದೂರು ನೀಡಿದ ಹಿನ್ನೆಲೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನದ ಭೀತಿಯಿಂದ ಪಾದ್ರಿ ರಾಜಶೇಖರ್ ತಲೆಮರೆಸಿಕೊಂಡಿದ್ದ.
ಈ ಹಿಂದೆ ಪುತ್ರಿಯೇ ಪಾದ್ರಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಅನ್ಯ ಸ್ತ್ರೀಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆಂದು ಆರೋಪಿಸಿದ್ದರು. ಜಯನಗರ ಚರ್ಚ್‌ನ 58 ವಯಸ್ಸಿನ ಪಾದ್ರಿ ಪಿ ರಾಜಶೇಖರ್ ಮಗಳ ಆರೋಪಕ್ಕೆ ತಂದೆ ಗುರಿಯಾಗಿದ್ದ. ಇದಷ್ಟೆ ಅಲ್ಲಾ ಚರ್ಚ್‌ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸಹ ಮಾಡಿದ್ದಾರೆ ಎಂದು ಮಗಳ ಆರೋಪಿಸಿದ್ದರು.
ನನ್ನ ತಂದೆ ಈಗ ನನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಯಾಗಲು ಮುಂದಾಗುತ್ತಿದ್ದಾರೆ. ನನಗೆ 33 ವರ್ಷ, ಮದುವೆಯಾಗುವ ಹುಡುಗಿಗೆ 30 ವರ್ಷ, ಹಾಗಾಗಿ ನನ್ನ ವಿರೋಧವಿದೆ. ಪಾದ್ರಿ ಹಲವಾರು ವರ್ಷಗಳಿಂದ ಈ ಕೃತ್ಯ ಮಾಡಿಕೊಂಡು ಬಂದಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಪಾಸ್ಟರ್ ಆಸೋಷಿಯೇಷನ್ನಿಂದ ರಾಜಶೇಖರ್ ನಡೆಗೆ ಖಂಡನೆ ವ್ಯಕ್ತವಾಗಿತ್ತು.
ಕ್ರಿಶ್ಚಿಯನ್ ಪೋರಂ ಪಾರ್ ಹ್ಯೂಮನ್ ರೈಟ್ಸ್ಟ್ ಮತ್ತು ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ವೆಲಪೆರ್ ಆಸೋಷಿಯೇಶನ್ನಿಂದಲು ಖಂಡನೆ ವ್ಯಕ್ತವಾಗಿತ್ತು. 6 ಜನ ಮಹಿಳೆಯರಿಗೆ ಹೀಗೆ ಮಾಡಿದ್ದಾರೆಂದು ಸ್ವತಃ ಅವರ ಮಗಳಿಂದಲೇ ಗಂಭೀರ ಆರೋಪ ಮಾಡಲಾಗಿದೆ. ಪಾದ್ರಿ ರಾಜಶೇಖರ್ ವರ್ತನೆ ಬಗ್ಗೆ ಅವರ ಮಗಳ ಬಳಿ ಸಂಕಟ ತೋಡಿಕೊಂಡಿದ್ದ ಮಹಿಳೆಯರು. ಓರ್ವ ಶಿಕ್ಷಕಿಗೂ ಅನ್ಯಾಯ ಮಾಡಿದ್ದಾರೆ. ಅವರ ಬಾಳಲ್ಲೂ ಆಟ ಆಡಿದ್ದಾರೆ. ಆ ಶಿಕ್ಷಕಿಯ ಸರ್ವಿಸ್ ರಿಜಿಸ್ಟರ್ನಲ್ಲಿ ನಾಮೀನಿ ಆಗಿ ರಾಜಶೇಖರ್ ಹೆಸರು ಇರುವ ದಾಖಲೆ ಬಿಡುಗಡೆ ಎಂಬುದು ಮಗಳ ಆರೋಪವಾಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ನಾಲ್ವರ ಸಾವು
ಪಾದ್ರಿ ರಾಜಶೇಖರ್ ವಿರುದ್ದ ದೂರು ಕೊಡುವುದಕ್ಕೆ ದಾವಣಗೆರೆ ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ. ದಲಿತ ಮಹಿಳೆಯನ್ನು ಆಮೀಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಮದುವೆಯಾಗುತ್ತಿದ್ದಾನೆ ಎಂದು ಬಂಜಾರ ಸಮಾಜ ಕೂಡ ಆರೋಪ ಮಾಡಿತ್ತು. ಚರ್ಚ್‌ನ ಮುಖ್ಯಸ್ಥ ರಾಗಿದ್ದುಕೊಂಡು ಇಂತಹ ವರ್ತನೆಗಳನ್ನು ಕ್ರಿಶ್ಚಿಯನ್ ಸಮಾಜ ಸಹಿಸುವುದಿಲ್ಲ. ಮಹಿಳೆ ಜೀವನದ ಜೊತೆ ಆಟವಾಡುವ ರಾಜಶೇಖರ್ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕ್ರಿಶ್ಚಿಯನ್ ಸಂಘಟನೆಗಳು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದವು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Thu, 4 April 24