ನನ್ನ ತಂದೆ ಚರ್ಚ್ಗೆ ಬರುವ ಆರೇಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಗಿದ್ದಾರೆ; ಸ್ವಂತ ಮಗಳಿಂದಲೇ ಪಾದ್ರಿ ವಿರುದ್ಧ ಗಂಭೀರ ಆರೋಪ
ದಾವಣಗೆರೆ ಜಯನಗರ ಚರ್ಚ್ನ ಪಾದ್ರಿಯಾಗಿರುವ ತನ್ನ ತಂದೆ ವಿರುದ್ಧ ಡೈಸಿ ಪ್ರಿಯಾ ಎಂಬ 33 ವರ್ಷದ ಮಗಳು ಗಂಭೀರ ಆರೋಪ ಮಾಡಿದ್ದಾರೆ. ನನ್ನ ತಂದೆ ಚರ್ಚ್ಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಹಾಗೂ ನನಗಿಂತ ಚಿಕ್ಕ ಮಯಸ್ಸಿನ ಯುವತಿ ಜೊತೆ ಮದುವೆಯಾಗಲು ಹೊರಟಿದ್ದಾರೆ ಎಂದು ತಂದೆ ವಿರುದ್ಧ ಮಗಳು ಆರೋಪ ಮಾಡಿದ್ದಾರೆ.
ದಾವಣಗೆರೆ, ಫೆ.28: ಚರ್ಚ್ಗೆ ಪ್ರಾರ್ಥನೆಗೆ ಎಂದು ಬರುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಸಲುಗೆ ಬೆಳೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಗಂಭೀರ ಆರೋಪ ದಾವಣಗೆರೆ ಜಯನಗರ ಚರ್ಚ್ನ ಪಾದ್ರಿ ಪಿ ರಾಜಶೇಖರ್ (58) ವಿರುದ್ಧ ಕೇಳಿ ಬಂದಿದೆ. ಅಲ್ಲದೆ ಪಾದ್ರಿ ಪುತ್ರಿ ಡೈಸಿ ಪ್ರಿಯಾ ತನ್ನ ತಂದೆ ವಿರುದ್ಧವೇ ಇಂತಹ ಅರೋಪ ಮಾಡಿದ್ದಾರೆ. ನನ್ನ ತಂದೆ ಈಗ ನನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಚರ್ಚ್ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಡೈಸಿ ಪ್ರಿಯಾ ಆರೋಪ ಮಾಡಿದ್ದಾರೆ.
ಡೈಸಿ ಪ್ರಿಯಾ ಎಂಬ 33 ವರ್ಷದ ಮಹಿಳೆ, ದಾವಣಗೆರೆ ಜಯನಗರ ಚರ್ಚ್ನ ಪಾದ್ರಿಯಾಗಿರುವ ತನ್ನ ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನಗೆ 33 ವರ್ಷ. ಆದರೆ ಈಗ ನನ್ನ ತಂದೆ ಮದುವೆಯಾಗಲು ನಿರ್ಧರಿಸಿದ್ದು ಮದುವೆಯಾಗೋ ಹುಡುಗಿಗೆ 30 ವರ್ಷ ಇದೆ. ಹಾಗಾಗಿ ಈ ಮದುವೆಗೆ ನನ್ನ ವಿರೋಧವಿದೆ. ಪಾದ್ರಿಯಾಗಿರುವ ನನ್ನ ತಂದೆ ಹಲವಾರು ವರ್ಷಗಳಿಂದ ಈ ಕೃತ್ಯ ಮಾಡಿಕೊಂಡು ಬಂದಿದ್ದಾರೆ. ತಂದೆಯ ವಿರುದ್ದವೇ ದೂರು ಕೊಡುವುದಕ್ಕೆ ಪುತ್ರಿ ಡೈಸಿ ಮುಂದಾಗಿದ್ದಾರೆ. ಇನ್ನು ಕ್ರಿಶ್ಚಿಯನ್ ಸಮುದಾಯದ ಪಾಸ್ಟರ್ ಆಸೋಷಿಯೇಷನ್, ಕ್ರಿಶ್ಚಿಯನ್ ಪೋರಂ ಪಾರ್ ಹ್ಯೂಮನ್ ರೈಟ್ಸ್ಟ್ ಮತ್ತು ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ವೆಲಪೆರ್ ಆಸೋಷಿಯೇಶನ್ ಪಾದ್ರಿ ರಾಜಶೇಕರ್ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪತ್ನಿ ಮತ್ತು ಮಗುವಿಗೆ ವಿಷ ಕೊಟ್ಟ ಪತಿರಾಯ? ಹೆಂಡತಿ ಸಾವು, ಮಗು ಗಂಭೀರ -ಪತಿ ಅಂದರ್
6 ಜನ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸ್ವತಃ ಅವರ ಮಗಳೇ ಹೇಳಿಕೊಂಡಿದ್ದಾಳೆ. ಪಾದ್ರಿ ರಾಜಶೇಖರ್ ವರ್ತನೆ ಬಗ್ಗೆ ನನ್ನ ಬಳಿ ಮಹಿಳೆಯರು ಸಂಕಟ ತೋಡಿಕೊಂಡಿದ್ದರು. ಓರ್ವ ಶಿಕ್ಷಕಿಗೂ ನನ್ನ ತಂದೆ ಅನ್ಯಾಯ ಮಾಡಿದ್ದಾರೆ. ಅವರ ಬಾಳಲ್ಲೂ ಆಟ ಆಡಿದ್ದಾರೆ ಎಂದು ಡೈಸಿ ಪ್ರಿಯಾ ಅವರು ಆ ಶಿಕ್ಷಕಿಯ ಸರ್ವಿಸ್ ರಿಜಿಸ್ಟರ್ ನಲ್ಲಿ ನಾಮಿನಿ ಆಗಿ ರಾಜಶೇಖರ್ ಹೆಸರು ಇರುವ ದಾಖಲೆ ಬಿಡುಗಡೆ ಮಾಡಿದ್ದಾರೆ.
ಮತ್ತೊಂದೆಡೆ ಪಾದ್ರಿ ರಾಜಶೇಖರ್ ವಿರುದ್ದ ದೂರು ಕೊಡೋದಕ್ಕೆ ದಾವಣಗೆರೆ ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ. ಈ ಹಿಂದೆ ದಲಿತ ಮಹಿಳೆಯನ್ನು ಅಮೀಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಮದುವೆಯಾಗುತ್ತಿದ್ದಾನೆ ಎಂದು ಬಂಜಾರ ಸಮಾಜ ಆರೋಪ ಮಾಡಿತ್ತು. ಈ ಆರೋಪದ ಬೆನ್ನಲ್ಲೇ ಸ್ವತಃ ಪಾದ್ರಿ ಪುತ್ರಿ ಡೈಸಿ ಪ್ರಿಯಾ ಗಂಭೀರ ಅರೋಪ ಮಾಡಿದ್ದಾರೆ. ಚರ್ಚ್ ನ ಮುಖ್ಯಸ್ಥರಾಗಿದ್ದುಕೊಂಡವರಿಂದಲೇ ಇಂತಹ ವರ್ತನೆಗಳನ್ನು ಕ್ರಿಶ್ಚಿಯನ್ ಸಮಾಜ ಸಹಿಸುವುದಿಲ್ಲ. ಮಹಿಳೆ ಜೀವನದ ಜೊತೆ ಆಟವಾಡುವ ರಾಜಶೇಖರ್ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ