ಪತ್ನಿ ಮತ್ತು ಮಗುವಿಗೆ ವಿಷ ಕೊಟ್ಟ ಪತಿರಾಯ? ಹೆಂಡತಿ ಸಾವು, ಮಗು ಗಂಭೀರ -ಪತಿ ಅಂದರ್
ವರದಕ್ಷಿಣೆ ವರೋಪಚಾರ ಪಡೆದುಕೊಂಡು ಮದುವೆಯಾಗಿದ್ದ ಪತಿರಾಯ. ಎರಡು ಮಕ್ಕಳಾದ ಮೇಲೆ ಪತ್ನಿ ಜೊತೆ ಒಂದಿಲ್ಲ ಒಂದು ಕಾರಣದಿಂದ ಗಲಾಟೆ ಮಾಡಿಕೊಳ್ಳುತ್ತಿದ್ದ ಪತಿಯು ಕೊನೆಗೂ ಪತ್ನಿಯ ಸಾವಿಗೆ ಕಾರಣವಾಗಿದ್ದಾನೆ. ಮತ್ತೊಂದಡೆ ಆರು ತಿಂಗಳ ಗಂಡು ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ... ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆನ್ನುವುದು ಹೆತ್ತವರ ಕೂಗು.
ಮದುವೆಯಾಗಿ ಐದು ವರ್ಷ ಆಗಿತ್ತು. ಇಬ್ಬರು ಮಕ್ಕಳು. ಸಂಸಾರ ಆನಂದಿಂದಲೇ ಇತ್ತು. ಈ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಪತಿ ಪತ್ನಿ ನಡುವೆ ಜಗಳ ಶುರುವಾಗಿತ್ತು. ಪತಿ ಮತ್ತು ಆತನ ಕುಟುಂಬಸ್ಥರ ಟಾರ್ಚರ್ ದಿನೇ ದಿನೇ ಹೆಚ್ಚಾಗಿತ್ತು. ಈ ನಡುವೆ ತಾಯಿ ವಿಷದಿಂದ (poison) ಮೃತಪಟ್ಟರೆ ಮತ್ತೊಂದೆಡೆ ಆರು ತಿಂಗಳ ಮಗು ವಿಷಪ್ರಾಶನದಿಂದ ಬಳಲುತ್ತಿದೆ. ಅಷ್ಟಕ್ಕೂ ಪತಿಯೇ ಈ ಇಬ್ಬರ ಜೀವ ತೆಗೆಯಲು ವಿಷ ಕೊಟ್ಟಿದ್ದಾನಂತೆ.. ಪತ್ನಿ ಮತ್ತು ಮಗುವಿಗೆ ವಿಷಕಂಠನಾದ ಪತಿ. ಈ ಕುರಿತು ಒಂದು ವರದಿ ಇಲ್ಲಿದೆ.. ಮದುವೆಯಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಆಗಿರುವ ಸಂಸಾರ. ಈ ನಡುವೆ ಪತಿ (Husband) ಮಂಜುನಾಥ್ ಪತ್ನಿ ಕಸ್ತೂರಿ ನಡುವೆ ಮನಸ್ತಾಪಗಳು ಶುರುವಾಗಿದ್ದವು. ಪದೇ ಪದೇ ಪತ್ನಿಗೆ ವರದಕ್ಷಿಣೆಗಾಗಿ ಪತಿ ಮಂಜುನಾಥ್ ಮತ್ತು ಆತನ ಕುಟುಂಬಸ್ಥರು ಪೀಡಿಸುತ್ತಿದ್ದರು. ಈ ನಡುವೆ ಮಹಿಳೆಯು ಮತ್ತು ಮಗು ಇಬ್ಬರೂ ವಿಷ ಸೇವಿಸಿ ಒದ್ದಾಡುತ್ತಿದ್ದರು. ಪತ್ನಿ (wife) ಕಸ್ತೂರಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ (death). ಇನ್ನೂ ಆರು ತಿಂಗಳ ಗಂಡು ಮಗುವಿಗೆ ವಿಷ ಉಣಸಿದ್ದರಿಂದ ಅದರ ಸ್ಥಿತಿಯೂ ಗಂಭೀರವಾಗಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕಸ್ತೂರಿ ಕುಟುಂಬಸ್ಥರು ಪತಿಯೇ ಪತ್ನಿ ಮತ್ತು ಮಗುವಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಕಸ್ತೂರಿ ಮೃತಪಟ್ಟಿದ್ದಾಳೆ. ಮಗುವಿನ ಸ್ಥಿತಿ ಗಂಭೀರವಾಗಿದೆ. ಮಗಳ ಕೊಲೆಗೆ ಮತ್ತು ಮಗುವಿನ ಕೊಲೆಗೆ ಯತ್ನಿಸಿದ್ದಾನೆಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಅಗಿದೆ. ಮೃತಳ ಕುಟುಂಬಸ್ಥರು ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಮತ್ತೊಂದಡೆ ಮಗು ಗುಣಮುಖವಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. 50 ಸಾವಿರ ನಗದು ಮತ್ತು 50 ಗ್ರಾಂ ಚಿನ್ನಾಭರಣ ಕೊಟ್ಟು ಮಗಳ ಮದುವೆ ಮಾಡಿಕೊಟ್ಟಿದ್ದರು. ವರನಿಗೆ ಒಂದು ಲಕ್ಷ ನಗದು ಮದುವೆ ಸಮಯದಲ್ಲಿ ಮಾತುಕತೆ ಆಗಿತ್ತು. ಇನ್ನೂ 50 ಸಾವಿರ ವರಕ್ಷಿಣೆ ಕೊಡುವುದು ಬಾಕಿಯಿತ್ತು. 50 ಸಾವಿರ ವರದಕ್ಷಿಣೆ ತರುವಂತೆ ಪತ್ನಿಗೆ ಪತಿ ಟಾರ್ಚರ್ ಕೊಡುತ್ತಿದ್ದನಂತೆ. ಈ ನಡುವೆ ಈಗ ತಾಯಿ ಮತ್ತು ಮಗು ಇಬ್ಬರು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಾಯಿ ಮತ್ತು ಮಗುವಿಗೆ ವಿಷ ಕೊಟ್ಟು ಪತಿಯೇ ಕೊಲೆಗೆ ಮುಂದಾಗಿದ್ದನು ಎನ್ನುವುದು ಮೃತಳ ಕುಟುಂಬಸ್ಥರ ಆರೋಪವಾಗಿದೆ. ಪ್ರಕರಣದಲ್ಲಿ ಪತಿ ಮಂಜುನಾಥ್ ನ ಬಂಧನವಾಗಿದೆ. ಇನ್ನು ಅತ್ತೆ ಉಮಾ ಮತ್ತು ಮಾವ ಮುತ್ತು ಇಬ್ಬರೂ ಎಫ್ ಐಆರ್ ಬಳಿಕ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಧಾರವಾಡ: ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ
ಐದು ವರ್ಷದ ಹಿಂದೆ ಸಿದ್ಲೀಪುರದ ಮಂಜುನಾಥ್ ಜೊತೆ ಕಸ್ತೂರಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಬಳಿಕ ಪತಿಯು ಚೆನ್ನಾಗಿ ನೋಡಿಕೊಂಡಿದ್ದನು. ಮಂಜುನಾಥ್ ದಂಪತಿಗೆ ಮೊದಲನೇ ಹೆಣ್ಣು ಮಗು ಸೀಳು ತುಟಿಯೊಂದಿಗೆ ಹುಟ್ಟಿದೆ. ಈ ಮಗು ಹುಟ್ಟಿದ ಬಳಿಕ ಪತ್ನಿಗೆ ನಿತ್ಯ ಪತಿಯು ಮತ್ತು ಆತನ ಗಂಡನ ಮನೆಯವರು ಕಿರುಕುಳ ನೀಡಲು ಆರಂಭಿಸದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಮಗುವಿನ ಸೀಳುತುಟಿ ಆಪರೇಷನ್ ಗೆ ಕಸ್ತೂರಿ ತವರು ಮನೆಯವರೆ ಐದು ಲಕ್ಷ ಖರ್ಚು ಮಾಡಿದ್ದಾರಂತೆ. ಮಂಜುನಾಥ್ ಮತ್ತು ಕಸ್ತೂರಿಗೆ ಎರಡು ಮಕ್ಕಳಿವೆ. ಮೂರು ವರ್ಷದ ಹೆಣ್ಣು ಮಗು. ಬಳಿಕ ಎರಡನೆಯದ್ದು ಗಂಡು ಮಗು ಹುಟ್ಟಿದೆ.
ಮುದ್ದಿನಕೊಪ್ಪ ಗ್ರಾಪಂ ಸದಸ್ಯ ಹಾಗೂ ಸಿದ್ಲೀಪುರದ ನಿವಾಸಿ ಚಂದ್ರನಾಯ್ಕನ ಬಳಿ ಮಂಜುನಾಥ್ ಕೂಲಿ ಕೆಲಸಕ್ಕಿದ್ದನು. ಕಸ್ತೂರಿ ಚಂದ್ರನಾಯ್ಕ್ ಬಳಿ ಕೆಲಸ ಮಾಡಲು ನಿರಾಕರಿಸುತ್ತಿದ್ದಳು. ಇದರಿಂದ ಪ್ರತಿದಿನ ಪತಿ ಪತ್ನಿ ನಡುವೆ ಗಲಾಟೆಯಾಗುತ್ತಿತ್ತು. ಪತ್ನಿಗೆ ಪತಿಯು ಮತ್ತು ಅತ್ತೆ ಮಾವ ಇಬ್ಬರು ಕಿರುಕುಳ ನೀಡುತ್ತಿದ್ದರು. ಇದರ ಮುಂದುವರೆದ ಭಾಗವಾಗಿ ಈಗ ಕಸ್ತೂರಿ ವಿಷಪ್ರಾಶನದಿಂದ ಮೃತಪಟ್ಟಿದ್ದಾಳೆ. ಇನ್ನು ಮಗುವಿಗೂ ವಿಷ ಕೊಟ್ಟು ಕೊಲೆಗೆ ಯತ್ನಿಸಿದ್ದಾರಂತೆ. ಈ ಹಿಂದೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪತಿ ಮತ್ತು ಪತ್ನಿ ನಡುವೆ ಜಗಳವಾದ ಸಂದಂಭದಲ್ಲಿ ರಾಜೀ ಪಂಚಾಯಿತಿ ನಡೆದಿದ್ದವು. ರಾಜೀ ಪಂಚಾಯಿತಿಗೆ ಮಣಿದ ಪತಿಯು ಕೊನೆಗೂ ಪತ್ನಿಯ ಬಲಿ ಪಡೆದಿದ್ದಾನೆ. ಇನ್ನು ಮಗುವಿನ ಸ್ಥಿತಿ ಕೂಡಾ ಗಂಭೀರವಾಗಿದೆ. ಘಟನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ