AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ ಲೋಕಸಭಾ ಅಖಾಡದಲ್ಲಿ ಕೋಟಿ ಕುಬೇರರ ಕಾಳಗ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ ಆಸ್ತಿ ಎಷ್ಟಿದೆ ಗೊತ್ತಾ?

ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಇಂದು ನಾಮಪತ್ರ ಸಲ್ಲಿಸಿದ್ದು, 4.43 ಕೋಟಿ ರೂ. ಆಸ್ತಿ ಒಡೆಯ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಅದೇ ರೀತಿಯಾಗಿ ಕಾಂಗ್ರೆಸ್​ ಅಭ್ಯರ್ಥಿ ಬಿ.ಎನ್​​ ಚಂದ್ರಪ್ಪ ಕೂಡ ನಾಮಪತ್ರ ಸಲ್ಲಿಸಿದ್ದು, 14.33 ಕೋಟಿ ರೂ. ಆಸ್ತಿಯ ಒಡೆಯ ಎಂದು ಹೇಳಿದ್ದಾರೆ.

ಚಿತ್ರದುರ್ಗ ಲೋಕಸಭಾ ಅಖಾಡದಲ್ಲಿ ಕೋಟಿ ಕುಬೇರರ ಕಾಳಗ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ ಆಸ್ತಿ ಎಷ್ಟಿದೆ ಗೊತ್ತಾ?
ಬಿಎನ್ ​ಚಂದ್ರಪ್ಪ, ಗೋವಿಂದ ಕಾರಜೋಳ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Apr 04, 2024 | 10:14 PM

Share

ಚಿತ್ರದುರ್ಗ, ಏಪ್ರಿಲ್​ 04: ಕೋಟೆನಾಡು ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳರನ್ನು ಬಿಜೆಪಿ ಕಣಕ್ಕಿಳಿಸಿದೆ. ಇಂದು ಗಾಂಧಿ ವೃತ್ತದಿಂದ ಡಿಸಿ ಕಚೇರಿವರೆಗೆ ರೋಡ್ ಶೋ ಮೂಲಕ ಮಧ್ಯಾಹ್ನ 3ಗಂಟೆ ವೇಳೆಗೆ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಗೋವಿಂದ ಕಾರಜೋಳ್​ ತಮ್ಮ ಬಳಿ 4.43 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಜೊತೆಗೆ ಕಾರಜೋಳ ಬಳಿ ವಾಹನ ಇಲ್ಲ, ಸಾಲ ಇಲ್ಲ, ಯಾವುದೇ ಕೇಸ್ ಸಹ ಇಲ್ಲ ಎಂದು ತಿಳಿಸಿದ್ದಾರೆ.

4.43 ಕೋಟಿ ರೂ. ಆಸ್ತಿ ಒಡೆಯ ಎನ್‌ಡಿಎ ಅಭ್ಯರ್ಥಿ ಕಾರಜೋಳ 

  • ಗೋವಿಂದ ಕಾರಜೋಳ ಚರಾಸ್ತಿ ಮೌಲ್ಯ 1.26 ಕೋಟಿ ರೂ.
  • ಸ್ಥಿರಾಸ್ತಿ ಮೌಲ್ಯ 1.62 ಕೋಟಿ ರೂ.
  • ಒಟ್ಟು ಆಸ್ತಿ 2.88 ಕೋಟಿ ರೂ.
  • ಕಾರಜೋಳ ಪತ್ನಿ ಶಾಂತಾದೇವಿ ಚರಾಸ್ತಿ ಮೌಲ್ಯ 73.13 ಲಕ್ಷ ರೂ.
  • ಶಾಂತಾದೇವಿ ಬಳಿ 65 ಲಕ್ಷ, ಕಾರಜೋಳ ಬಳಿ 9 ಲಕ್ಷ ನಗದು ಇದೆ.
  • ಪತ್ನಿ ಬಳಿ 2.5 ಲಕ್ಷ ರೂ. ಮೌಲ್ಯದ ಚಿನ್ನ, ಕಾರಜೋಳ ಬಳಿ ಚಿನ್ನ ಇಲ್ಲ.
  • ಪತ್ನಿ ಬಳಿ 1 ಕೆಜಿ 50 ಗ್ರಾಂ ಬೆಳ್ಳಿ ಇದೆ, ಕಾರಜೋಳ ಬಳಿ ಬೆಳ್ಳಿ ಇಲ್ಲ.

14.33 ಕೋಟಿ ರೂ. ಆಸ್ತಿಯ ಒಡೆಯ ಕಾಂಗ್ರೆಸ್​​ ಅಭ್ಯರ್ಥಿ ಬಿ.ಎನ್​​ ಚಂದ್ರಪ್ಪ

ಅದೇ ರೀತಿಯಾಗಿ ಕಾಂಗ್ರೆಸ್​ ಅಭ್ಯರ್ಥಿ ಬಿ.ಎನ್​​ ಚಂದ್ರಪ್ಪ ಕೂಡ ಇಂದು ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದು, 14.33 ಕೋಟಿ ರೂ. ಆಸ್ತಿಯ ಒಡೆಯ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. 28.85 ಲಕ್ಷ ರೂ. ಸದ್ಯ ತಮ್ಮ ಕೈಯಲ್ಲಿ ಹೊಂದಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಂಡಾಯ ಶಮನ: ಬಿಜೆಪಿ ಶಾಸಕ ಚಂದ್ರಪ್ಪ ಮನವೊಲಿಕೆ ಯಶಸ್ವಿ; ನಿಟ್ಟುಸಿರು ಬಿಟ್ಟ ಗೋವಿಂದ ಕಾರಜೋಳ

ಪತ್ನಿ ಕಾವ್ಯಾ ಬಳಿ 1.22 ಲಕ್ಷ ರೂ, ಪುತ್ರ ಬಿ.ಸಿ.ಉತ್ಸವ್ ಬಳಿ 1.1 ಲಕ್ಷ ರೂ, 210 ಗ್ರಾಂ, 940 ಗ್ರಾಂ, 180 ಗ್ರಾಂ ಸೇರಿ ಒಟ್ಟು 72.46 ಲಕ್ಷ ಮೌಲ್ಯದ 1,330 ಗ್ರಾಂ ಚಿನ್ನ ಹೊಂದಿದ್ದಾರೆ. 84.90 ಲಕ್ಷ ರೂ., 35.47 ಲಕ್ಷ ರೂ., ಬ್ಯಾಂಕ್ ಖಾತೆಯಲ್ಲಿ 1.32 ಲಕ್ಷ ರೂ., 20.68 ಲಕ್ಷ ರೂ., 5.21 ಲಕ್ಷ ರೂ ಹೊಂದಿದ್ದು ಕುಟುಂಬದ ಒಟ್ಟು ಚರಾಸ್ತಿ 2.25 ಕೋಟಿ ರೂ.

ಸ್ಥಿರಾಸ್ತಿ: ವಿವರ ಕ್ರಮವಾಗಿ 10 ಎಕರೆ ಅಡಿಕೆ ತೋಟ ಸೇರಿ 22 ಎಕರೆ 16 ಗುಂಟೆ ಜಮೀನು 9.55 ಕೋಟಿ ರೂ. ಮೌಲ್ಯದ್ದಾಗಿದೆ. ಪತ್ನಿ ಹೆಸರಲ್ಲಿ ಜಮೀನು ಇಲ್ಲ. ಪುತ್ರನ ಹೆಸರಲ್ಲಿ 2 ಎಕರೆ, 24 ಗುಂಟೆ ಸೇರಿ 1.35 ಕೋಟಿ ರೂ.  ಮೌಲ್ಯ ಆಸ್ತಿ ಹೊಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ, ಚಿತ್ರದುರ್ಗ ಹಾಲಿ ಎಂಪಿಗೆ ಕೊಕ್, ಬಿಎಸ್​ವೈ ಆಪ್ತನಿಗೆ ಮಣೆ

ಬಿ ಎನ್ ಚಂದ್ರಪ್ಪ ಅವರು ನಿವೇಶನ-6, ಚದರ ಅಡಿ-15,028, ಮೌಲ್ಯ-53.47 ಲಕ್ಷ ರೂ., ವಾಣಿಜ್ಯ ಕಟ್ಟಡ-2, ಮೌಲ್ಯ-8.6 ಕೋಟಿ ರೂ., ಕಾರು-30 ಲಕ್ಷ ರೂ., ಸಾಲ-89.71 ಲಕ್ಷ ರೂ., ಕಾವ್ಯಾ: 1.25 ಕೋಟಿ ರೂ. ಮೌಲ್ಯದ ಮನೆ, ಪುತ್ರ‌ ಉತ್ಸವ್ ಹೆಸರಲ್ಲಿ 9.48 ಲಕ್ಷ ರೂ. ವಾಹನ ಸಾಲ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.