ಯೂಟ್ಯೂಬ್‌ ಪ್ರೇರಣೆ! ಅಂಗಡಿಗಳ ಶೆಟರ್​ ಮುರಿದು ಕಳ್ಳತನ ಮಾಡುತ್ತಿದ್ದ ಯುವಕ ಮಾದನಾಯಕನಹಳ್ಳಿ ಪೊಲೀಸರಿಂದ ಅರೆಸ್ಟ್

madanayakanahalli police: ಸಿನಿಮಾಗಳಲ್ಲಿ ತೋರಿಸಿದಂತೆ ಅಂಗಡಿಗಳ ಶೆಟರ್​ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಿ.ವಿ. ವಿನೋದ್ ಕುಮಾರ್ ಅಲಿಯಾಸ್ ವಿನು (24) ಸೆರೆ ಸಿಕ್ಕಿದ ಯುವಕ.

ಯೂಟ್ಯೂಬ್‌ ಪ್ರೇರಣೆ! ಅಂಗಡಿಗಳ ಶೆಟರ್​ ಮುರಿದು ಕಳ್ಳತನ ಮಾಡುತ್ತಿದ್ದ ಯುವಕ ಮಾದನಾಯಕನಹಳ್ಳಿ ಪೊಲೀಸರಿಂದ ಅರೆಸ್ಟ್
ಯೂಟ್ಯೂಬ್‌ ಪ್ರೇರಣೆ! ಅಂಗಡಿಗಳ ಶೆಟರ್​ ಮುರಿದು ಕಳ್ಳತನ ಮಾಡುತ್ತಿದ್ದ ಯುವಕ ಮಾದನಾಯಕನಹಳ್ಳಿ ಪೊಲೀಸರಿಂದ ಅರೆಸ್ಟ್
Edited By:

Updated on: Jul 21, 2021 | 12:28 PM

ನೆಲಮಂಗಲ: ಸಿನಿಮಾಗಳಲ್ಲಿ ತೋರಿಸಿದಂತೆ ಅಂಗಡಿಗಳ ಶೆಟರ್​ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಿ.ವಿ. ವಿನೋದ್ ಕುಮಾರ್ ಅಲಿಯಾಸ್ ವಿನು (24) ಸೆರೆ ಸಿಕ್ಕಿದ ಯುವಕ.

ಯೂಟ್ಯೂಬ್‌ ಪ್ರೇರಣೆ!
ಆರೋಪಿ ವಿನೋದ್ ಕುಮಾರ್ ಸಿನಿಮೀಯ ಶೈಲಿಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆ ಗ್ರಾಮದಲ್ಲಿ ಮಧು ಎಂಬುವವರ ಪ್ರಾವಿಷನ್ ಸ್ಟೋರ್‌ ಅಂಗಡಿಯಲ್ಲಿ ಶೆಟರ್ ಮುರಿದು ಕಳವು ಮಾಡಿದ್ದ. ಶೆಟರ್​ ಕತ್ತರಿಸಿ 25 ಸಾವಿರ ನಗದು ದೋಚಿದ್ದ. ಆರೋಪಿ ವಿನೋದ್ ಅಂತರ್ಜಾಲದ ಯೂಟ್ಯೂಬ್‌ನಲ್ಲಿ ಗ್ಯಾಸ್ ಕಟ್ಟರ್ ಬಳಕೆಯನ್ನು ನೋಡಿ ಕಳ್ಳತನ ಮಾಡುವುದನ್ನ ಕರಗತ ಮಾಡಿಕೊಂಡಿದ್ದ.

ಮಾದನಾಯಕನಹಳ್ಳಿ ಪೊಲೀಸರು ಅರೋಪಿಯಿಂದ 25 ಸಾವಿರ ನಗದು, ಬೈಕ್, ಗ್ಯಾಸ್ ಕಟರ್ ಗೆ ಬಳಸುವ ವಸ್ತುಗಳು ಜಪ್ತಿ ಮಾಡಿದ್ದಾರೆ. ಪೊಲೀಸ್ ತನಿಖೆ ವೇಳೆ ಆರೋಪಿ ವಿನೋದ್ ತಾನು ಸಿನಿಮಾ ನೋಡಿ ಗ್ಯಾಸ್ ಕಟ್ಟರ್‌ನಿಂದ ಶೆಟರ್ ಕತ್ತರಿಸಿ ಕಳ್ಳತನ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.

YouTube video player

ಇದನ್ನೂ ಓದಿ:

ಮುಂಜಾನೆ ಬೆಂಗಳೂರಿನಲ್ಲಿ ಶೂಟೌಟ್; ರೌಡಿಶೀಟರ್ ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಗುಂಡು, ಇಬ್ಬರ ಬಂಧನ

(madanayakanahalli police arrest youth for shop theft)

Published On - 9:53 am, Wed, 21 July 21

TV9 Web

TV9 Kannada

Read More
Loading...
Unable to load recommendations.
Follow Us