30ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ಸೆರೆ
ಬೆಂಗಳೂರು: 30ಕ್ಕೂ ಹೆಚ್ಚು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕುಖ್ಯಾತ ಮನೆಗಳ್ಳನಾಗಿದ್ದು, ಆಂಧ್ರ ಮೂಲದ ವೆಂಕಯ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವೆಂಕಯ್ಯ ಕಮ್ಮಿ ಜನಗಳಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಯಾರು ಇಲ್ಲದ ಸಮಯ ನೋಡಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈ ವರೆಗೆ 30ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆಂಧ್ರದಿಂದ ಬಂದು ಕಳ್ಳತನ ಮಾಡಿಕೊಂಡು ಇದ್ದ ಖದೀಮನನ್ನು ಕಳೆದ ಎರಡು ತಿಂಗಳಿಂದ ವಾಚ್ ಮಾಡಿ ಪೊಲೀಸರು […]
ಬೆಂಗಳೂರು: 30ಕ್ಕೂ ಹೆಚ್ಚು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕುಖ್ಯಾತ ಮನೆಗಳ್ಳನಾಗಿದ್ದು, ಆಂಧ್ರ ಮೂಲದ ವೆಂಕಯ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವೆಂಕಯ್ಯ ಕಮ್ಮಿ ಜನಗಳಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಯಾರು ಇಲ್ಲದ ಸಮಯ ನೋಡಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈ ವರೆಗೆ 30ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆಂಧ್ರದಿಂದ ಬಂದು ಕಳ್ಳತನ ಮಾಡಿಕೊಂಡು ಇದ್ದ ಖದೀಮನನ್ನು ಕಳೆದ ಎರಡು ತಿಂಗಳಿಂದ ವಾಚ್ ಮಾಡಿ ಪೊಲೀಸರು ಬಂಧಿಸಿದ್ದಾರೆ.
Published On - 1:16 pm, Tue, 16 June 20