ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯವು 2016ರಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕತೆ ಹೊಂದಿದ್ದಕ್ಕಾಗಿ ಇದೀಗ 28 ವರ್ಷದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ವಿಶೇಷ POCSO ನ್ಯಾಯಾಲಯದ ನ್ಯಾಯಾಧೀಶ ಡಿಎಸ್ ದೇಶಮುಖ್ ಅವರು ಮಂಗಳವಾರ ಈ ಆದೇಶದಲ್ಲಿ ನೀಡಿದ್ದಾರೆ. ಥಾಣೆ ನಗರದ ವಾಘ್‌ಬಿಲ್ ಪ್ರದೇಶದ ನಿವಾಸಿಯಾದ ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳನ್ನು ಪ್ರಾಸಿಕ್ಯೂಷನ್ ಯಶಸ್ವಿಯಾಗಿ ಸಾಬೀತುಪಡಿಸಿದೆ.
ಗುರುವಾರ ಆದೇಶದ ಪ್ರತಿ ಲಭ್ಯವಾಗಿದೆ. ನ್ಯಾಯಾಲಯವು ಆರೋಪಿಗೆ 10,000 ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರವಾಗಿ ಪಾವತಿಸುವಂತೆ ಸೂಚಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂಧ್ಯಾ ಹೆಚ್ ಮ್ಹಾತ್ರೆ ಅವರು 2016ರ ಡಿಸೆಂಬರ್ 24ರಂದು ರಾತ್ರಿ 11 ವರ್ಷ ವಯಸ್ಸಿನ ಬಾಲಕ ತನ್ನ ಸ್ನೇಹಿತನ ಮನೆಯಲ್ಲಿ ಕ್ರಿಸ್‌ಮಸ್ ಮುನ್ನಾದಿನದ ಸಮಾರಂಭದಲ್ಲಿ ಭಾಗವಹಿಸಿದ ನಂತರ ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: 10 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪನಿಗೆ 101 ವರ್ಷ ಜೈಲು ಶಿಕ್ಷೆ
ಆಗ ಆರೋಪಿಗಳು ಆತನನ್ನು ದಾರಿ ಮಧ್ಯದಲ್ಲಿ ಹಿಡಿದು, ಕತ್ತಲೆಯ ನಡುವೆ ರಸ್ತೆ ಬದಿಯ ಮರದ ಕೆಳಗೆ ಕರೆದೊಯ್ದು ಆತನೊಂದಿಗೆ ಅಸಹಜ ಸಂಭೋಗ ನಡೆಸಿದ್ದರು. ಮನೆಗೆ ಹಿಂದಿರುಗಿದ ನಂತರ, ಆತ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ನೋವು ಉಂಟಾಗುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದ. ಆತನ ಗುದದ್ವಾರದಲ್ಲಿ ಗಾಯಗಳಿರುವುದನ್ನು ಪೋಷಕರು ಕಂಡು ಕೇಳಿದಾಗ ಬಾಲಕ ಈ ಘಟನೆಯ ಬಗ್ಗೆ ತಿಳಿಸಿದ್ದ.
ಬಳಿಕ ಆ ಬಾಲಕನ ಪೋಷಕರು ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಅಸ್ವಾಭಾವಿಕ ಅಪರಾಧಗಳ ಕಾನೂನು ನಿಬಂಧನೆಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಪ್ರಾಸಿಕ್ಯೂಷನ್ ಪ್ರಕಾರ ಆರೋಪಿಯನ್ನು ಬಂಧಿಸಲಾಯಿತು.
ಇದನ್ನೂ ಓದಿ: ಫಿಸಿಯೋಥೆರಪಿ ವೇಳೆ ಮಹಿಳೆ ಮೇಲೆ ಅತ್ಯಾಚಾರ; ಕಾಂಗ್ರೆಸ್ ಮುಖಂಡನ ಮಗನ ಬಂಧನ
ಆರೋಪಿಗಳ ವಿರುದ್ಧ ಪ್ರಕರಣವನ್ನು ಸಾಬೀತುಪಡಿಸಲು ಬಾಲಕ ಮತ್ತು ಅವರ ತಾಯಿ ಸೇರಿದಂತೆ ಒಟ್ಟು 8 ಸಾಕ್ಷಿಗಳನ್ನು ಪರೀಕ್ಷಿಸಲಾಗಿದೆ ಎಂದು ಮ್ಹಾತ್ರೆ ಹೇಳಿದ್ದಾರೆ. ಬಾಲಕನ ಬಟ್ಟೆಯ ಮೇಲಿನ ರಕ್ತದ ಕಲೆಗಳು ಆರೋಪಿಯ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತವೆ, ಇದನ್ನು ನ್ಯಾಯಾಲಯವು ಅವನನ್ನು ಅಪರಾಧಿ ಎಂದು ಸಾಬೀತುಪಡಿಸುವ ಸಾಕ್ಷಿಯಾಗಿ ಸ್ವೀಕರಿಸಿದೆ ಎಂದು ಅವರು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ