AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಸಗೂರು: ಮಠಕ್ಕೆ ನುಗ್ಗಿ ಶ್ರೀಗಳಿಗೆ ಬೆದರಿಕೆ ಹಾಕಿ ದರೋಡೆ

ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿರುವ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠಕ್ಕೆ ಗುರುವಾರ ರಾತ್ರಿ ಅಪರಿಚಿತರು ನುಗ್ಗಿ ಸಿದ್ದಲಿಂಗ ಸ್ವಾಮೀಜಿಯವರಿಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಮಠದಲ್ಲಿದ್ದ ಬಂಗಾರ, ಬೆಳ್ಳಿ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಲಿಂಗಸಗೂರು: ಮಠಕ್ಕೆ ನುಗ್ಗಿ ಶ್ರೀಗಳಿಗೆ ಬೆದರಿಕೆ ಹಾಕಿ ದರೋಡೆ
ಮಠದಲ್ಲಿ ಪೊಲೀಸರ ಪರಿಶೀಲನೆ
ಭೀಮೇಶ್​​ ಪೂಜಾರ್
| Edited By: |

Updated on:Jul 05, 2024 | 11:15 AM

Share

ರಾಯಚೂರು, ಜುಲೈ 05: ಲಿಂಗಸುಗೂರು (Lingsugur) ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾದಿಪತಿಗಳನ್ನು ಹೆದರಿಸಿ, ದರೋಡೆ ಮಾಡಲಾಗಿದೆ. ಗುರುವಾರ ಮಧ್ಯರಾತ್ರಿ ಡಕಾಯಿತಿರ ಗ್ಯಾಂಗ್ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದಿದೆ. ಮಠದಲ್ಲಿದ್ದ ಓಬ್ಬರೇ ಇದ್ದ ಸಿದ್ದಲಿಂಗ ಸ್ವಾಮೀಜಿಯವರನ್ನು ದುಷ್ಕರ್ಮಿಗಳು ಎಬ್ಬಸಿದ್ದಾರೆ. ಬಳಿಕ ಸಿದ್ದಲಿಂಗ ಸ್ವಾಮೀಜಿಯವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ನಂತರ ಮಠದಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನ ಹಾಗೂ 7 ಕೆಜಿ ಬೆಳ್ಳಿ ಆಭರಣಗಳು, ಸುಮಾರು‌ 20 ಲಕ್ಷ ನಗದು ಸೇರಿ‌ದಂತೆ 35 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್​ ಇನ್ಸ್​​ಸ್ಪೆಕ್ಟರ್​​ ಪುಂಡಲಿಕ್​ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಹರೀಶಬಾಬು, ಡಿವೈಎಸ್​ಪಿ ದತ್ತಾತ್ರೇಯ ಕಾರ್ನಾಡ್​​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ಸೆಕ್ಯೂರಿಟಿ ಗಾರ್ಡ್​​ನನ್ನೇ ಬರ್ಬರವಾಗಿ ಹತ್ಯೆಗೈದ ಕಾಲೇಜು ವಿದ್ಯಾರ್ಥಿ

ಶ್ರೀಗಂಧದ ಮರ ಬೆಳದ ರೈತರಿಗೆ ಕಳ್ಳರ ಕಾಟ

ಕೊಪ್ಪಳ: ಲಕ್ಷಾಂತರ ಬೆಲೆ ಬಾಳುವ ಶ್ರೀಗಂಧದ ಮರಗಳ ಕಳ್ಳತನ ಮಾಡಿರುವ ಘಟನೆ ಕುಷ್ಟಗಿ ತಾಲೂಕಿನ ನಡವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿವೃತ್ತ ಉಪನ್ಯಾಸಕ ಶಿವಸಂಗನಗೌಡ ಶಿವನಗುತ್ತಿ ಎಂಬುವರು ತಮ್ಮ ಜಮೀನಿನಲ್ಲಿ 371 ಶ್ರೀಗಂಧದ ಮರಗಳನ್ನು ಬಳೆದಿದ್ದಾರೆ. ಇವುಗಳಲ್ಲಿ ಸುಮಾರು 10 ಲಕ್ಷ ರೂ.ನಷ್ಟು ಬೆಲೆಬಾಳುವ  13 ಮರಗಳನ್ನು ಖದೀಮರು ಕಳೆದ ರಾತ್ರಿ ಕತ್ತರಿಸಿಕೊಂಡು ಹೋಗಿದ್ದಾರೆ. ಕುಷ್ಟಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:05 am, Fri, 5 July 24

ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!