AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಲ್ಲಿ ಬೈಕ್​ ಸವಾರರದ್ದೇ ಮೇಲುಗೈ; ಒಂದೇ ದಿನ 4.33 ಲಕ್ಷ ದಂಡ

ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ನಿನ್ನೆ ದಿನವಿಡೀ ವಿಶೇಷ ಕಾರ್ಯಾಚರಣೆ ನಡೆಸಿದ್ದು ಒಂದೇ ದಿನ 851 ಪ್ರಕರಣಗಳನ್ನು ದಾಖಲಿಸಿ ಬರೋಬ್ಬರಿ 4.33 ಲಕ್ಷ ದಂಡ ಹಾಕಲಾಗಿದೆ. ಹೆಲ್ಮೆಟ್ ಇಲ್ಲದವರ ವಿರುದ್ದವೇ ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಅಧಿಕ ರೂ ದಂಡ ಹಾಕಲಾಗಿದೆ.

ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಲ್ಲಿ ಬೈಕ್​ ಸವಾರರದ್ದೇ ಮೇಲುಗೈ; ಒಂದೇ ದಿನ 4.33 ಲಕ್ಷ ದಂಡ
ಸಾಂದರ್ಭಿಕ ಚಿತ್ರ
Jagadisha B
| Edited By: |

Updated on: Jul 04, 2024 | 12:25 PM

Share

ಬೆಂಗಳೂರು, ಜುಲೈ.04: ಟ್ರಾಫಿಕ್ ರೂಲ್ಸ್​ನ (Traffic Rules) ನಿಜಕ್ಕೂ ಜನ ಪಾಲಿಸುತಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ದಂಡದ ಮೌಲ್ಯ ಹೆಚ್ಚಾದರೂ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಹೆಚ್ಚಾಗಿ ಬೈಕ್ ಸವಾರರಿಂದಲೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗುತ್ತಿದೆ. ನಗರದಲ್ಲಿ ನಡೆಯುವ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರದ್ದೇ ಮೇಲುಗೈ. ಈ ಹಿನ್ನಲೆ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ನಿನ್ನೆ ದಿನವಿಡೀ ವಿಶೇಷ ಕಾರ್ಯಾಚರಣೆ ನಡೆಸಿದ್ದು ಒಂದೇ ದಿನ 851 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ 4.33 ಲಕ್ಷ ದಂಡ ಹಾಕಿದ್ದಾರೆ.

ಕಾರ್ಯಾಚರಣೆ ವೇಳೆ ಬೈಕ್ ಸವಾರರ ಬೇಜವಾಬ್ದಾರಿ ಚಾಲನೆ ಪತ್ತೆಯಾಗಿದೆ. ಹೆಲ್ಮೆಟ್ ಇಲ್ಲ‌, ರಾಂಗ್ ರೂಟ್​ನಲ್ಲಿ ಓಡಾಟ. ಸೇರಿದಂತೆ ನಾನಾ ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆಯ ಕೇಸ್​ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ಧ 500ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿದವರ ವಿರುದ್ದವೇ ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಅಧಿಕ ರೂ ದಂಡ ಹಾಕಲಾಗಿದೆ.

ಇದನ್ನೂ ಓದಿ: ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂಗೆ ಏರಿಕೆ ಸಾಧ್ಯತೆ; ಬಜೆಟ್​ನಿಂದ ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ..!

ನಿನ್ನೆಯ ಕಾರ್ಯಾಚರಣೆಯ ದಂಡದ ವಿವರದಲ್ಲಿ ಬೈಕ್ ಸವಾರರ ಪಟ್ಟಿಯೇ ಹೆಚ್ಚು. ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ 511 ಕೇಸ್ ಸಂಬಂಧ 2,51,500ರೂ ದಂಡ ವಿಧಿಸಲಾಗಿದೆ. ಒನ್ ವೇ ರಾಂಗ್ ರೂಟ್​ನ 55 ಕೇಸ್ ಸಂಬಂಧ 27,600 ರೂ ದಂಡ ಬಿದ್ದಿದ್ದು. ರಾಂಗ್ ಪಾರ್ಕಿಂಗ್​ನ 69 ಕೇಸ್ ಸಂಬಂಧ 37,800ರೂ ದಂಡ ವಿಧಿಸಲಾಗಿದೆ. ಫುಟ್ ಪಾತ್ ಪಾರ್ಕಿಂಗ್ ಸಂಬಂಧ 6 ಕೇಸ್ ಸಂಬಂಧ 5 ಸಾವಿರ ದಂಡ ವಿಧಿಸಲಾಗಿದೆ. ರೇಡಿಂಗ್ ವೇಳೆ ಮೊಬೈಲ್ ಬಳಕೆ 7 ಕೇಸ್ ದಾಖಲಾಗಿದ್ದು 10,000ರೂ ದಂಡ ಹಾಕಲಾಗಿದೆ. ತ್ರಿಬಲ್ ರೇಡಿಂಗ್ 10 ಕೇಸ್ ಸಂಬಂಧ 6 ಸಾವಿರ ರೂ ದಂಡ ಬಿದ್ದಿದೆ. ಇತರೆ ಸಂಚಾರಿ ನಿಯಮ ಉಲ್ಲಂಘನೆಯ 184 ಪ್ರಕರಣ ಸಂಬಂಧ 90,700ರೂ ದಂಡ ಹಾಕಲಾಗಿದ್ದು ಒಟ್ಟು 851 ಪ್ರಕರಣ ಸಂಬಂಧ 4,33,600ರೂ ದಂಡ ವಿಧಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ