Shocking: ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿದ ವ್ಯಕ್ತಿ ಸಾವು..!

ಕೈ ನೋವಿನ ನಿವಾರಣೆಗಾಗಿ ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿಕೊಂಡು ಸೇವಿಸಿದ ವ್ಯಕ್ತಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Shocking: ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿದ ವ್ಯಕ್ತಿ ಸಾವು..!
ಮೃತ ಧರ್ಮೇಂದ್ರ ಕೊರೊಳೆ
Edited By:

Updated on: Nov 12, 2022 | 5:33 PM

ಇಂದೋರ್: ತನ್ನ ಕೈಗೆ ಆಗಿದ್ದ ನೋವು ಗುಣಪಡಿಸಿಕೊಳ್ಳಲು ವ್ಯಕ್ತಿಯೊಬ್ಬ ಯೂಟ್ಯೂಬ್​ನಲ್ಲಿ ಆಯುರ್ವೇದಿಕ ವಿಡಿಯೋ ನೋಡಿ ಜ್ಯೂಸ್ ಮಾಡಿಕೊಂಡು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಖಂದ್ವ ನಗರದಲ್ಲಿ ನಡೆದಿದೆ.

ಮೊಬೈಲ್ ಚಾರ್ಜ್ ವಿಚಾರದಲ್ಲಿ ಜಗಳ; ದೊಣ್ಣೆ ಏಟಿಗೆ ವ್ಯಕ್ತಿ ಸಾವು

ಖಂದ್ವ ನಗರದ ಸ್ವರ್ಣಬಾಗ್ ಕಾಲೋನಿ ನಿವಾಸಿ ಧರ್ಮೇಂದ್ರ ಕೊರೋಲೆ (32) ಎಂದು ಗುರುತಿಸಲಾಗಿದೆ. ಧರ್ಮೇಂದ್ರ ಚಾಲಕರಾಗಿದ್ದರು. ಈತ ಯೂಟ್ಯೂಬ್‍ನಲ್ಲಿ ಸೋರೆಕಾಯಿ ರಸ ತಯಾರಿಸುವ ವಿಧಾನವನ್ನು ಕಲಿತು ಜ್ಯೂಸ್ ಮಾಡಿ ಕುಡಿದು ಬಳಿಕ ಮೃತಪಟ್ಟಿದ್ದಾನೆ.

ಅಪಘಾತದಿಂದಾಗಿ ಧರ್ಮೇಂದ್ರ ಕೈ ನೋವಿನಿಂದ ಬಳಲುತ್ತಿದ್ದ. ಈ ನೋವನ್ನು ನಿವಾರಿಸಿಕೊಳ್ಳಲು ಬಳಸುವ ಔಷಧಿಗಳನ್ನು ಯೂಟ್ಯೂಬ್​ನಲ್ಲಿ ಹುಡುಕಿದ್ದಾರೆ. ನಂತರ ಕಾಡು ಸೋರೆಕಾಯಿಯನ್ನು ರಸ ಮಾಡಿಕೊಂಡು ಸೇವಿಸಿದ್ದಾನೆ. ರಸವನ್ನು ಕುಡಿದ ಸ್ವಲ್ಪ ಸಮಯದ ಬಳಿಕ ಧರ್ಮೇಂದ್ರನ ಆರೋಗ್ಯದಲ್ಲಿ ಏರುಪೇರಾಗಿದೆ.

ಕೂಡಲೇ ಕುಟುಂಬಸ್ಥರು ಧರ್ಮೇಂದ್ರನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಧರ್ಮೇಂದ್ರ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಧರ್ಮೇಂದ್ರನ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೋಲಿಸರು ತಿಳಿಸಿದ್ದಾರೆ,

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ