ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ (Sexually Assaulting) ಆರೋಪದ ಮೇಲೆ 46 ವರ್ಷದ ವ್ಯಕ್ತಿಗೆ ತುಮಕೂರು (Tumakuru) ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ, 75,000 ದಂಡ ವಿಧಿಸಿದೆ. ಆರೋಪಿ ಕೃಷ್ಣಮೂರ್ತಿ, ತುಮಕೂರು ಜಿಲ್ಲೆಯ ದೊಮ್ಮತ್ತಮರಿ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಕಾರ್ಮಿಕನಾಗಿದ್ದನು. 2021 ರ ಜುಲೈ 30 ರಂದು 7 ವರ್ಷದ ಓರ್ವ ಬಾಲಕಿ ಮತ್ತು ಆಕೆಯ ಸಹೋದರ, ಯಲಗಾನಗುಟ್ಟೆಯ ಮಜರೆಯಲ್ಲಿ ತಮ್ಮ ಮನೆ ಬಳಿ ಆಟವಾಡುತ್ತಿದರು.
ಈ ವೇಳೆ ಆರೋಪಿ ಕೃಷ್ಣಮೂರ್ತಿ ಬಾಲಕಿ ಮತ್ತು ಆಕೆಯ ಸಹೋದರನ ಬಳಿಗೆ ಬಂದು, ನೇರಳೆ ಹಣ್ಣು ನೀಡುವುದಾಗಿ ಆಮಿಷ ಒಡ್ಡಿದ್ದನು. ನಂತರ ಬಾಲಕಿಯನ್ನು ನೇರಳೆ ಮರದ ಬಳಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿದ ಬಾಲಕಿಯ ಪೋಷಕರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಆರೋಪ; ಹಾಡಹಗಲೇ ಪತ್ನಿಯನ್ನು ಕೊಂದು ಹಾಕಿದ ಗಂಡ
ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಸಂಧ್ಯಾ ರಾವ್ ಪಿ. ಗುರುವಾರ (ಮಾ.23) ರಂದು ಆರೋಪಿ ದೋಷಿ ಎಂದು ಹೇಳಿದ್ದು, ಆರೋಪಿಯಿಂದ ದಂಡವಾಗಿ ಪಡೆದ 75,000 ರೂ ಹಣವನ್ನು ಬಾಲಕಿಗೆ ನೀಡಲಾಗುವುದು ಎಂದು ತೀರ್ಪು ನೀಡಿದ್ದಾರೆ. ಹೆಚ್ಚುವರಿಯಾಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ 4 ಲಕ್ಷ ರೂ. ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Sat, 25 March 23