ಅತ್ತಿಗೆಯನ್ನೇ ಪ್ರೀತಿಸಿ, ಆಕೆಯನ್ನು ಪಡೆಯಲು ಅಣ್ಣನನ್ನು ಕೊಂದ ಯುವಕ; ಹತ್ಯೆ ನಡೆಯುವಾಗ ಆಕೆ ನಿದ್ರಿಸುತ್ತಿದ್ದಳು

ಒಂದೇ ಮನೆಯಲ್ಲಿ ಮೂವರೂ ವಾಸವಾಗಿದ್ದರು. ಮೊದಲು ಎಲ್ಲ ಸರಿಯಾಗೇ ಇತ್ತು. ಆದರೆ ಬರುಬರುತ್ತ ಭೂಪೇಂದ್ರನಿಗೆ ತನ್ನ ಅಣ್ಣ ಮೋಹಿತ್​ ಪತ್ನಿಯ ಮೇಲೆ ಅಂದರೆ ಅತ್ತಿಗೆ ಮೇಲೆ ಕಣ್ಣುಬಿತ್ತು.

ಅತ್ತಿಗೆಯನ್ನೇ ಪ್ರೀತಿಸಿ, ಆಕೆಯನ್ನು ಪಡೆಯಲು ಅಣ್ಣನನ್ನು ಕೊಂದ ಯುವಕ; ಹತ್ಯೆ ನಡೆಯುವಾಗ ಆಕೆ ನಿದ್ರಿಸುತ್ತಿದ್ದಳು
ಪ್ರಾತಿನಿಧಿಕ ಚಿತ್ರ
Updated By: Lakshmi Hegde

Updated on: Apr 25, 2022 | 3:55 PM

ಮತ್ತೊಬ್ಬರ ಮೇಲೆ ಪ್ರೀತಿ ಹುಟ್ಟುವುದು ಸಹಜ. ಆದರೆ ಅದು ಒಮ್ಮೊಮ್ಮೆ ಕ್ರೈಂಗೆ ಕಾರಣವಾಗಿಬಿಡುವುದು ಅಸಹಜ. ಆದರೆ ಪ್ರೀತಿಯ ಕಾರಣಕ್ಕೆ ಅದೆಷ್ಟೋ ಕೊಲೆ, ಕಿಡ್ನ್ಯಾಪ್​, ರೇಪ್​ಗಳಂಥ ಕ್ರೈಂಗಳು ನಡೆಯುವುದು ಪ್ರತಿದಿನ ವರದಿಯಾಗುತ್ತಿದೆ. ಹಾಗೇ ಉತ್ತರ ಪ್ರದೇಶದ ಲಖನೌನಲ್ಲೊಂದು ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಅತ್ತಿಗೆಯ ಮೇಲೆ ಅಂದರೆ ಅಣ್ಣನ ಪತ್ನಿಯ ಮೇಲೆ ಹುಟ್ಟಿದ ಪ್ರೀತಿಯನ್ನು ಕುರುಡಾಗಿಸಿಕೊಂಡು, ಆಕೆಯನ್ನು ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದು, ಸ್ವಂತ ಅಣ್ಣನನ್ನೇ ಹತ್ಯೆಗೈದಿದ್ದಾನೆ. ಆರೋಪಿಯನ್ನು ಭೂಪೇಂದ್ರ ಸಹು ಎಂದು ಗುರುತಿಸಲಾಗಿದ್ದು ಪೊಲೀಸರು ಅವನನ್ನು ಬಂಧಿಸಿದ್ದಾರೆ. ಹಾಗೇ, ಮೃತನ ಹೆಸರು ಮೋಹಿತ್ ಸಹು ಎಂದಾಗಿದೆ. ಮೋಹಿತ್​ ತನ್ನ ಸೋದರ ಭೂಪೇಂದ್ರ ಮತ್ತು ಪತ್ನಿಯೊಂದಿಗೆ ಲಖನೌದ ಚಿನ್ಹಾತ್​ ಎಂಬಲ್ಲಿ ಬಾಡಿಗೆ ಫ್ಲ್ಯಾಟ್​ವೊಂದರಲ್ಲಿ ವಾಸವಾಗಿದ್ದ.

ಒಂದೇ ಮನೆಯಲ್ಲಿ ಮೂವರೂ ವಾಸವಾಗಿದ್ದರು. ಮೊದಲು ಎಲ್ಲ ಸರಿಯಾಗೇ ಇತ್ತು. ಆದರೆ ಬರುಬರುತ್ತ ಭೂಪೇಂದ್ರನಿಗೆ ತನ್ನ ಅಣ್ಣ ಮೋಹಿತ್​ ಪತ್ನಿಯ ಮೇಲೆ ಅಂದರೆ ಅತ್ತಿಗೆ ಮೇಲೆ ಕಣ್ಣುಬಿತ್ತು. ಆತ ಆಕೆಯನ್ನು ಪ್ರೀತಿಸ ತೊಡಗಿದ. ಹಾಗೇ, ಅತ್ತಿಗೆಯೊಂದಿಗೆ ಸ್ವಲ್ಪ ಸಲಿಗೆಯಿಂದ ವರ್ತಿಸಲೂ ತೊಡಗಿದ್ದ. ಆಕೆಗೇ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬರುತ್ತಿದ್ದ. ಇದು ಅವಳಿಗೆ ಕಿರಿಕಿರಿ ಶುರು ಮಾಡಿತ್ತು. ತನ್ನ ಪತಿ ಮೋಹಿತ್​ ಬಳಿ ಇದನ್ನು ತೋಡಿಕೊಂಡಿದ್ದಳು. ಮೋಹಿತ್​ ತನ್ನ ಸೋದರನಿಗೆ ಬುದ್ಧಿ ಹೇಳಿದ. ಆದರೆ ಇವರಿಬ್ಬರ ನಡುವಿನ ಮಾತುಕತೆ ನಂತರ ವಾಗ್ವಾದಕ್ಕೆ ತಿರುಗಿ ಗಲಾಟೆ ಮಾಡಿಕೊಂಡರು. ನಂತರ ಭೂಪೇಂದ್ರ ಮೋಹಿತ್​ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಖಾಸಿಮ್​ ಅಬಿಡಿ ತಿಳಿಸಿದ್ದಾರೆ.

ಮೋಹಿತ್​​ ಮತ್ತು ಭೂಪೇಂದ್ರ ನಡುವೆ ಗಲಾಟೆಯಾಗಿ, ಮೋಹಿತ್​ ಹತ್ಯೆಯಾಗುವ ಹೊತ್ತಲ್ಲಿ ಆತನ ಪತ್ನಿ ಮನೆಯ ಮಹಡಿ ಮೇಲೆ ನಿದ್ರಿಸುತ್ತಿದ್ದರು.  ಆದರೆ ನಂತರ ಕೆಳಗೆ ಬಂದ ತುಂಬ ಶಾಕ್​ ಆದರು. ಭೂಪೇಂದ್ರ ತಾನು ಅಪರಾಧ ಮಾಡಿದ್ದಲ್ಲದೆ, ಅದನ್ನು ಮೋಹಿತ್ ಪತ್ನಿ ತಲೆಗೆ ಕಟ್ಟಲೂ ಪ್ರಯತ್ನಿಸಿದ. ತಮ್ಮಿಬ್ಬರ ಮಧ್ಯೆ ಜಗಳ ಹುಟ್ಟುಹಾಕಿದ್ದೇ ಅವಳು ಎಂದೂ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಕೆಜಿಗೆ ಲಕ್ಷಕ್ಕೂ ಹೆಚ್ಚು ಬೆಲೆ ಇರುವ ಈ ತಳಿ ಭಾರತದಲ್ಲೂ ಇದೆ !