ಹಾವೇರಿ: 9 ವರ್ಷದ ಬಾಲಕಿ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ 59 ವರ್ಷದ ವೃದ್ದ

ಹಾವೇರಿ: 9 ವರ್ಷದ ಬಾಲಕಿ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ 59 ವರ್ಷದ ವೃದ್ದ
ಸಾಂದರ್ಭಿಕ ಚಿತ್ರ

ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ ಮಾಡಿರುವಂತಹ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಪ್ಪು- ಬಿಳಿ ಬಣ್ಣದ 32 ಪಾನ್ ಸಮೇತ ಬಂಧನ ಮಾಡಲಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಮೆಲ್ವಿನ್ ಬಂಧಿತ ಆರೋಪಿ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 26, 2022 | 2:40 PM

ಹಾವೇರಿ: 9 ವರ್ಷದ ಬಾಲಕಿ ಮೇಲೆ 59 ವರ್ಷ ವೃದ್ದನಿಂದ ಲೈಗಿಂಕ ದೌರ್ಜನ್ಯ (Sexual Assault) ಎಸಗಿರುವಂತಹ ಘಟನೆ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರನಲ್ಲಿ ನಡೆದಿದೆ. ಆರೋಪಿ ನಾಗಪ್ಪ ಬಾಡದ ನನ್ನು ಬಂಧಿಸಲಾಗಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ‌ ದಾಖಲು ಮಾಡಲಾಗಿದೆ.

ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ;

ಚಿಕ್ಕಮಗಳೂರು: ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ ಮಾಡಿರುವಂತಹ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಪ್ಪು- ಬಿಳಿ ಬಣ್ಣದ 32 ಪಾನ್ ಸಮೇತ ಬಂಧನ ಮಾಡಲಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಮೆಲ್ವಿನ್ ಬಂಧಿತ ಆರೋಪಿ. ಆನೆ ದಂತದಲ್ಲಿ ಕೆತ್ತಿದ್ದ ಚೆಸ್ ಪಾನ್ ಇಡುವ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಚೆಸ್ ಪಾನ್ ಜೊತೆಗೆ ಜಿಂಕೆ ಕೊಂಬು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಐಡಿ ವಿಭಾಗದ ಅಧಿಕಾರಿಗಳಿಂದ ದಾಳಿ ಮಾಡಿದ ವೇಳೆ ಕಳ್ಳರ ಬಂಧನ ಮಾಡಲಾಗಿದೆ.

ಲಾರಿ ಚಾಲಕನ ನಿರ್ಲಕ್ಷ್ಯ ಫುಟ್ ಪಾತ್ ಮೇಲೆ ಹರಿದ ಲಾರಿ ರಾಯಚೂರು: ನಗರದ ಸ್ಟೇಷನ್​ ರಸ್ತೆಯಲ್ಲಿ ಅಕ್ಕಿ ಸಾಗಣೆ ಲಾರಿ ಫುಟ್​ಪಾತ್​ ಮೇಲೆ ಚಲಿಸಿ ಲೋಕಾಯುಕ್ತ ಕಚೇರಿ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ. ಮದ್ಯದ ಅಮಲಿನಲ್ಲಿ ಲಾರಿ ಚಲಾಯಿಸುತ್ತಿದ್ದ ಚಾಲಕನಿಂದ ಕೃತ್ಯ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲು ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಾರಕೆರೆ ಹೊಸೂರು ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಪ್ರಜ್ವಲ್(11) ನೀರುಪಾಲಾಗಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ;

PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್​​ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!

Nokia G21: ಬಿಡುಗಡೆಯಾದ ದಿನವೇ ಭರ್ಜರಿ ಸದ್ದು ಮಾಡುತ್ತಿದೆ ನೋಕಿಯಾದ ಹೊಸ ಸ್ಮಾರ್ಟ್​ಫೋನ್

Follow us on

Related Stories

Most Read Stories

Click on your DTH Provider to Add TV9 Kannada