ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ಚಾಕುವಿನಿಂದ ವ್ಯಕ್ತಿಯನ್ನು ತಿವಿದು ಕೊಂದ ಅಪ್ರಾಪ್ತ ಬಾಲಕ
ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬನನ್ನು 15 ವರ್ಷದ ಬಾಲಕ ತಿವಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬನನ್ನು 15 ವರ್ಷದ ಬಾಲಕ ತಿವಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಗಾಜಿನ ಬಾಟಲಿಯಲ್ಲಿ ಪಟಾಕಿ ಇರಿಸಿ ಹಚ್ಚುತ್ತಿದುದನ್ನು ವ್ಯಕ್ತಿಯೊಬ್ಬರು ವಿರೋಧಿಸಿದ್ದರು, ಮೂರು ಬಾಲಕರು ಹಾಗೂ ಈ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿತ್ತು.
ಬಳಿಕ ಕೋಪಗೊಂಡ ಬಾಲಕರು ಆ ವ್ಯಕ್ತಿಯನ್ನು ಥಳಿಸಲು ಪ್ರಾರಂಭಿಸಿದ್ದರು, ಜಗಳ ಅತಿರೇಕಕ್ಕೇರಿ ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿತ್ತು. ಅದರಲ್ಲಿ ಓರ್ವ ಬಾಲಕ ವ್ಯಕ್ತಿಗೆ ಚಾಕುವಿನಿಂದ ತಿವಿದು ಹಲ್ಲೆ ನಡೆಸಿದ್ದ, ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ, ಚಿಕ್ಕ ವಿಷಯ ವ್ಯಕ್ತಿಯನ್ನೇ ಬಲಿ ಪಡೆದಿದೆ.
ಪೊಲೀಸರು 14, 15 ವರ್ಷದ ಬಾಲಕರನ್ನು ವಶಕ್ಕೆ ಪಡೆದಿದ್ದು, 12 ವರ್ಷದ ಬಾಲಕಿನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತಪಟ್ಟವರು 21 ವರ್ಷದ ಸುನಿಲ್ ನಾಯ್ಡು ಎಂಬುದು ತಿಳಿದುಬಂದಿದೆ.
ಸಾಕಷ್ಟು ನಗರಗಳಲ್ಲಿ ಪಟಾಕಿಯನ್ನು ನಿಷೇಧಿಸಲಾಗಿದೆ. ಆದರೂ ಕೆಲವೆಡೆ ಮಾರಾಟ ಮಾಡಲಾಗುತ್ತಿದೆ. ಪಟಾಕಿ ಶಬ್ದ, ಹೊಗೆಯಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ ಜನರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ