ಮಂಡ್ಯ: ಮನೆ ಕಳ್ಳರಿಗೆ ಸಹಕಾರ: ಪೊಲೀಸರಿಂದಲೇ ಪೊಲೀಸ್​ ಕಾನ್ಸ್​ಟೇಬಲ್ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 23, 2024 | 8:23 AM

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆ ಪೇದೆ ಕೆಂಡಗಣ್ಣಯ್ಯ ಸೇರಿ 8 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮನೆಗಳ್ಳತನ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಹಾಯ ಮಾಡುತ್ತಿದ್ದರು.

ಮಂಡ್ಯ: ಮನೆ ಕಳ್ಳರಿಗೆ ಸಹಕಾರ: ಪೊಲೀಸರಿಂದಲೇ ಪೊಲೀಸ್​ ಕಾನ್ಸ್​ಟೇಬಲ್ ಬಂಧನ
ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ, ಜಪ್ತಿ ಮಾಡಿದ ವಸ್ತುಗಳು
Follow us on

ಮಂಡ್ಯ, ಫೆಬ್ರವರಿ 23: ಮನೆ ಕಳ್ಳರಿಗೆ (thieves) ಸಹಕಾರ ನೀಡುತ್ತಿದ್ದ ಪೊಲೀಸ್ ಕಾನ್ಸ್​​ಟೇಬಲ್​ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಜಿಲ್ಲೆಯ ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆಯ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ, ಡಾಲಿ, ಭವನ್, ಸಾದನ್, ಅಯೂಬ್, ಮುನ್ನಾ, ಪ್ರಸಾದ್, ಫಯಾಜ್ ಅರೆಸ್ಟ್​ ಮಾಡಲಾಗಿದೆ. ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮನೆಗಳ್ಳತನ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಹಾಯ ಮಾಡುತ್ತಿದ್ದರು. ಕಳೆದ ತಿಂಗಳು ಮದ್ದೂರಿನಲ್ಲಿ ವೈದ್ಯ ಚಂದ್ರು ಮನೆಯಲ್ಲಿ ಕಳ್ಳತನ ನಡೆದಿದ್ದು, ಆರೋಪಿಗಳು 1 ಕೆಜಿ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ದೋಚಿದ್ದರು.

ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಾಗಿದೆ. ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದರು. ಆರೋಪಿಗಳು ಕದ್ದ ಚಿನ್ನಾಭರಣವನ್ನು ಕೆಂಡಗಣ್ಣಯ್ಯ ಅಡವಿಟ್ಟುಕೊಡುತ್ತಿದ್ದರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಹಣ ಡಬ್ಲಿಂಗ್ ಮಾಡಿಕೊಡೋದಾಗಿ ಹೇಳಿ ವಂಚಿಸಿದ್ದ ಆರೋಪಿ ಬಂಧನ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ವಂಚಿಸಿದ್ದ ಆರೋಪಿಯನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತ ಆರೋಪಿ ಸೂರ್ಯನಿಂದ 44 ಲಕ್ಷ ರೂ. ಹಣ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಆಂಧ್ರ ಮೂಲದ ಸೂರ್ಯ(42)ನನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ. 1 ಕೋಟಿ ರೂ. ಹಣ ಕೊಟ್ಟರೆ 25 ಕೋಟಿ ರೂ. ಕೊಡುವುದಾಗಿ ನಂಬಿಸಿ ಶ್ಯಾಲೋಮ್ ಎಜುಕೇಶನಲ್ ಆ್ಯಂಡ್​ ಚಾರಿಟೇಬಲ್ ಟ್ರಸ್ಟ್​ಗೆ ವಂಚನೆ ಮಾಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಮೃತನ ತಂದೆಗೆ ಹಾಸ್ಟೆಲ್ ವಾರ್ಡನ್ ಕರೆ ಮಾಡಿ ಹೇಳಿದ್ದೇನು? ಇಲ್ಲಿದೆ ಆಡಿಯೋ ಸಂಭಾಷಣೆ

ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದಲ್ಲಿರುವ ಚಾರಿಟೇಬಲ್ ಟ್ರಸ್ಟ್​ನ ಎಸ್.ಮೇರಿ ಎಂಬುವವರು ಆರೋಪಿ ಮಾತು ಕೇಳಿ ಪೇಪರ್ ನೋಟ್​ಗಳನ್ನು ಹಣವೆಂದು ನಂಬಿ 70 ಲಕ್ಷ ರೂ. ನೀಡಿದ್ದರು. ಬಳಿಕ ಜ್ಯೂಸ್​ನಲ್ಲಿ ಮತ್ತುಬರುವ ಔಷಧಿ ನೀಡಿ ಸೂರ್ಯ ಪರಾರಿಯಾಗಿದ್ದ.

ಹೆಬ್ಬಣಿ ಗ್ರಾಮದ ವಿರಕ್ತ ಮಠದ ಸ್ವಾಮೀಜಿಯೊಬ್ಬರ ಮೂಲಕ ಮೇರಿ ಪರಿಚಯ ಮಾಡಿಕೊಂಡಿದ್ದ ಸೂರ್ಯ ಪರಿಚಯವಾಗಿದ್ದರು. ಹಣ ದುಪ್ಪಟ್ಟು ಮಾಡಿಕೊಡೋದಾಗಿ ನಂಬಿಸಿ ಆರೋಪಿ ಸೂರ್ಯ ವಂಚಿಸಿದ್ದಾನೆ. ಈ ಹಿಂದೆ ಹಲವು ಪ್ರಕರಣದಲ್ಲಿ ಆರೋಪಿ ಸೂರ್ಯ ವಂಚಿಸಿದ್ದಾನೆ. ಜೈಲಿನಿಂದ ಬೇಲ್ ಮೇಲೆ ಹೊರ ಬಂದು ಮತ್ತೆ ವಂಚನೆಗಿಳಿದಿದ್ದ.

ಸಾಲ ನೀಡಿದ್ದ ಸಂಘದ ಕಿರುಕುಳ ಆರೋಪ: ಬೇಸತ್ತು ಮಹಿಳೆ ನೇಣಿಗೆ ಶರಣು

ಮೈಸೂರು: ಸಾಲ ನೀಡಿದ್ದ ಸಂಘದ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವಂತಹ ಘಟನೆ  ಮೈಸೂರಿನ ಅಶೋಕ ರಸ್ತೆಯ ನಿಜಾಮಿಯಾ ಶಾಲೆಯ ಬಳಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಶಹನಾ ಶರೀನ್(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಗೆ ಗೂಡ್ಸ್ ವಾಹನ ಕೊಡಿಸುವ ಸಲುವಾಗಿ ಮೂರು ಸಂಘಗಳಲ್ಲಿ ಸಾಲ ಪಡೆದಿದ್ದರು. ಮೂರು ತಿಂಗಳ ಹಿಂದೆ ಪಡೆದಿದ್ದ ಸಾಲಕ್ಕೆ 50,000 ರೂ. ಬಡ್ಡಿ ಕಟ್ಟಿದ್ದರು.

ಇದನ್ನೂ ಓದಿ: ಕಲಬುರಗಿ: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌; ಆಸ್ಪತ್ರೆಗೆ ದಾಖಲು

ಬಡ್ಡಿ ಹಣ ಕಟ್ಟಿದ್ದರೂ ಸಂಘದ ಮೂವರಿಂದ ಕಿರುಕುಳ ಆರೋಪ ಮಾಡಿದ್ದಾರೆ. 2 ದಿನಗಳ ಹಿಂದೆ ಮನೆಗೆ ನುಗ್ಗಿ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಫರ್ಜಾನಾ, ನಾಜಿಯಾ, ಮುಬಾರಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:22 am, Fri, 23 February 24