ಮಂಡ್ಯ: ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ

ರಾಜ್ಯದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪದ ನಡುವೆ ಮಂಡ್ಯದಲ್ಲಿ ಹೇಯ ಕೃತ್ಯವೊಂದು ಎಸಗಲಾಗಿದೆ. ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮದುವೆಯಾಗಲು ಮತಾಂತರಕ್ಕೆ ಒತ್ತಾಯಿಸಲಾಗಿದೆ.

ಮಂಡ್ಯ: ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ
ಅತ್ಯಾಚಾರವೆಸಗಿ ಇಸ್ಲಾಂಗೆ ಮತಾಂತರ ಆದರೆ ಮದುವೆ ಆಗುತ್ತೇನೆಂದ ಜಿಹಾದಿ
Follow us
TV9 Web
| Updated By: Rakesh Nayak Manchi

Updated on:Nov 22, 2022 | 3:07 PM

ಮಂಡ್ಯ: ರಾಜ್ಯದಲ್ಲಿ ಆಮಿಷವೊಡ್ಡಿ ಮತಾಂತರ (Conversion)ಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪದ ನಡುವೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ (Supreme Court) ಕೂಡ ಬಲವಂತದ ಮತಾಂತರದ ಬಗ್ಗೆ ಅಸಮಾಧಾನ ಹೊರಹಾಕಿದ್ದಲ್ಲದೆ, ಅದರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು. ಕೆಲವು ದಿನಗಳ ಹಿಂದೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲವ್ ಜಿಹಾದ್ (Love Jihad) ಪಿತೂರಿ ಆರೋಪ ಕೇಳಿ ಬಂದ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. 13 ವರ್ಷದ ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 24 ವರ್ಷದ ಮುಸ್ಲಿಂ ಯುವಕ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಬೆದರಿಕೆ ಹಾಕಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

24 ವರ್ಷದ ಜಿಹಾದಿ ಯೂನಸ್ ಪಾಷ ಎಂಬತಾ ನಾಗಮಂಗಲದ 13 ವರ್ಷದ ವಿಕಲಚೇತನ ಬಾಲಕಿಯನ್ನು ಪುಸಲಾಯಿಸಿ ಮೊಬೈಲ್ ಕೊಡಿಸಿದ್ದಾನೆ. ಬಳಿಕ ಮೆಸೆಜ್ ಮಾಡಲು ಆರಂಭಿಸಿದ್ದಲ್ಲದೆ ವಿಡಿಯೋ ಕಾಲ್ ಮಾಡುತ್ತಿದ್ದನು. ಹೀಗೆ ವಿಡಿಯೋ ಕಾಲ್ ಮಾಡಿ ಸ್ಕ್ರೀನ್​ ರೆಕಾರ್ಡ್ ಕೂಡ​ ಮಾಡಿಕೊಂಡಿದ್ದ. ಅಲ್ಲದೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನು. ಅಷ್ಟೇ ಅಲ್ಲದೆ ತನ್ನ ಖಾಸಗಿ ಅಂಗವನ್ನು ತೋರಿಸುವಂತೆ ಧಮ್ಕಿ ಹಾಕಿದ್ದಲ್ಲದೆ ಖಾಸಗಿ ಅಂಗವನ್ನು ತೋರುವಾಗ ಮತ್ತೆ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೊಗಾಗಿ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ, ಬಂಧಿತನ ಮೊಬೈಲ್​ನಲ್ಲಿ ಸಾವಿರಾರು ವಿಡಿಯೊ

ಇಷ್ಟಕ್ಕೆ ನಿಲ್ಲದ ಜೀಹಾದಿ ಅಟ್ಟಹಾಸ, ಲೈಂಗಿಕ ಕ್ರಿಯೆಗೆ ಸಮ್ಮತಿಸುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ. ಖಾಸಗಿ ಅಂಗದ ವಿಡಿಯೋ ರೆಕಾರ್ಡ್ ಮುಂದಿಟ್ಟುಕೊಂಡು ಲೈಂಗಿಕ ಕ್ರಿಯೆಗೆ ಸಮ್ಮತಿಸಬೇಕು, ಇಲ್ಲದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಇದೇ ವೇಳೆ ಬಾಲಕಿಯ ತಾಯಿ, ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಲು ಒತ್ತಾಯಿಸಿ ಸಂತ್ರಸ್ಥೆ ಕೈಗೆ ನಿದ್ದೆ ಮಾತ್ರೆ ಕೊಟ್ಟು ಊಟದಲ್ಲಿ ಬೆರಸುವಂತೆ ತಾಕೀತು ಮಾಡಿದ್ದಾನೆ. ಹೀಗೆ ಬಾಲಕಿ ಕೈಗೆ ನಿದ್ದೆ ಬರಿಸುವ ಮಾತ್ರೆ ಕೊಟ್ಟು ತಾಯಿ ಮತ್ತು ಅಜ್ಜಿ ಮಾಡುವ ಊಟಕ್ಕೆ ಬೆರೆಸುವಂತೆ ಒತ್ತಾಯಿದ್ದಾನೆ. ಅದರಂತೆ ತಾಯಿ ಹಾಗೂ ಅಜ್ಜಿ ಊಟ ಮಾಡುವಾಗ ಸಾಂಬರಿಗೆ ನಿದ್ದೆ ಮಾತ್ರೆ ಬೆರೆಸಿದ ಪರಿಣಾಮ ಅವರು ನಿದ್ದೆಗೆ ಜಾರಿದ್ದಾರೆ.

ಇದೇ ವೇಳೆ ಮನೆಗೆ ಎಂಟ್ರಿ ಕೊಟ್ಟ ಯೂನಸ್, ಕರೆ ಮಾಡಿ ಬಾಗಿಲು ತೆರೆಯುವಂತೆ ತಾಕೀತು ಮಾಡಿದ್ದಾನೆ. ಕೀಚಕನ ಅಣತಿಯಂತೆ ರಾತ್ರಿ ಮನೆ ಬಾಗಿಲು ತೆರೆದಿದ್ದ ಸಂತ್ರಸ್ಥೆಯನ್ನು ಬಲವಂತವಾಗಿ ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗಬೇಕಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಹೇಳಿದ್ದಾನೆ. ಈ ಎಲ್ಲಾ ಕೃತ್ಯ ನಡೆಯುವ ಸಂದರ್ಭದಲ್ಲಿ ತಂದೆ ಮನೆಯಲ್ಲಿ ಇರಲಿಲ್ಲ. ಶಿರಡಿಯಿಂದ ಸಂತ್ರಸ್ತೆಯ ತಂದೆ ಮನೆಗೆ ಬಂದಾಗ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಸಂತ್ರಸ್ತೆ ತಂದೆ ಮಗಳನ್ನು ನಾಗಮಂಗಲ ಟೌನ್ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಜಿಹಾದಿ ಕಾಮುಕನನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Tue, 22 November 22