ಕಾನ್ಪುರದ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಹುಟ್ಟುಹಬ್ಬದ ಮರುದಿನವೇ ಶವವಾಗಿ ಪತ್ತೆಯಾಗಿದ್ದಾನೆ. ಕಾಲೇಜಿನ ಹಾಸ್ಟೆಲ್‌ನ ನೆಲಮಾಳಿಗೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, 24 ವರ್ಷದ ಯುವಕನಿಗೆ ಭಾರವಾದ ವಸ್ತುವಿನಿಂದ ತಿವಿದಿರುವ ಅನೇಕ ಗಾಯಗಳಾಗಿವೆ. ವಿದ್ಯಾರ್ಥಿಯ ದೇಹದ ಬಳಿ ಒಡೆದ ಮದ್ಯದ ಬಾಟಲಿ ಹಾಗೂ ಸಿಗರೇಟ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ನವೆಂಬರ್ 25 ಮತ್ತು 26 ರ ಮಧ್ಯರಾತ್ರಿಯಲ್ಲಿ ಹೊರಗಿನವರು ಹಾಸ್ಟೆಲ್‌ಗೆ ಪ್ರವೇಶಿಸಿದ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾಹಿಲ್, ರೂಮ್‌ಮೇಟ್ ಮತ್ತು ಇತರ ಹಾಸ್ಟೆಲ್ ನಿವಾಸಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ. ಅವರು ಪೊಲೀಸರಿಗೆ ಕೊಲೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಹಾಸ್ಟೆಲ್‌ನಲ್ಲಿದ್ದ ಯಾರೋ ವಿದ್ಯಾರ್ಥಿಯನ್ನು ಕೊಂದಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಡಿದ ಅಮಲಿನಲ್ಲಿ ಆಕಸ್ಮಿಕವಾಗಿ ಬಾಲ್ಕನಿಯಿಂದ ಬಿದ್ದಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಆನೇಕಲ್: ಒಂದೂವರೆ ಗುಂಟೆ ಜಾಗಕ್ಕಾಗಿ ಅಣ್ಣನ ಹತ್ಯೆಗೆ ಸುಪಾರಿ ನೀಡಿದ ಸಹೋದರು
ಸಾಹಿಲ್ ಎಂದಿಗೂ ಯಾರೊಂದಿಗೂ ಜಗಳವಾಡುತ್ತಿರಲಿಲ್ಲ ಆತ ತುಂಬಾ ಒಳ್ಳೆಯ ಸ್ವಭಾವದ ವ್ಯಕ್ತಿ, ರೋ ಅವನನ್ನು ಕೊಲೆ ಮಾಡಿದ್ದರೆಂದು ನಾವು ನಂಬುವುದಿಲ್ಲ ಎಂದು ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಬಾಲ್ಕನಿ ಗೋಡೆಯ ಎತ್ತರ ಸಾಕಷ್ಟು ಕಡಿಮೆ ಇರುವ ಕಾರಣ ಸಾಹಿಲ್ ಪಾನಮತ್ತರಾಗಿ ಬಾಲ್ಕನಿಯಿಂದ ಕೆಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹಾಸ್ಟೆಲ್‌ನ ಮತ್ತೊಬ್ಬರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ