AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಮೌಗಂಜ್​ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲಾಗಿದೆ, 108 ತುರ್ತು ಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಈ ದುಷ್ಕೃತ್ಯ ನಡೆದಿದೆ.

ಮಧ್ಯಪ್ರದೇಶ: ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಆಂಬ್ಯುಲೆನ್ಸ್​ Image Credit source: Amarujala.com
Follow us
ನಯನಾ ರಾಜೀವ್
|

Updated on: Nov 29, 2024 | 10:22 AM

ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಮೌಗಂಜ್​ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲಾಗಿದೆ, 108 ತುರ್ತು ಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಈ ದುಷ್ಕೃತ್ಯ ನಡೆದಿದೆ.

ಆಘಾತಕಾರಿ ಘಟನೆ ನವೆಂಬರ್ 22 ರಂದು ನಡೆದಿದ್ದು, ಚಾಲಕ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಬಾಲಕಿ ತನ್ನ ಸಹೋದರಿ ಮತ್ತು ಸೋದರ ಮಾವನೊಂದಿಗೆ ಆಂಬ್ಯುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಳು.

ಮೂವರ ಹೊರತಾಗಿ ಇನ್ನೂ ಇಬ್ಬರು ವ್ಯಕ್ತಿಗಳು, ಚಾಲಕ ಮತ್ತು ಅವರ ಸಹಚರರು ರೋಗಿಯ ಜತೆ ಇದ್ದರು ಎಂದು ಅವರು ಹೇಳಿದರು. ಅವರೂ ಕೂಡ ಈ ಅಪರಾಧಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಆಂಬ್ಯುಲೆನ್ಸ್​ ಚಾಲಕ ಮೊದಲೇ ಅವರಿಗೆ ತಿಳಿದಿದ್ದ ಎಂದು ಹೇಳಲಾಗಿದೆ. ಮಾರ್ಗಮಧ್ಯೆ ನೀರು ತರುವ ನೆಪದಲ್ಲಿ ಬಾಲಕಿಯ ಸಹೋದರಿ ಹಾಗೂ ಆಕೆಯ ಸೋದರ ಮಾವ ವಾಹನದಿಂದ ಇಳಿದಿದ್ದಾರೆ. ಆಂಬ್ಯುಲೆನ್ಸ್ ಚಾಲಕ, ಅವರಿಗಾಗಿ ಕಾಯುವ ಬದಲು ವೇಗವಾಗಿ ಓಡಿಸಿದ್ದ ಎಂದು ಅಧಿಕಾರಿ ಹೇಳಿದರು.

ಮತ್ತಷ್ಟು ಓದಿ: ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಕೋಲು, ಮೆಣಸಿನ ಪುಡಿ ತುರುಕಿ ಚಿತ್ರಹಿಂಸೆ

ಅವನೊಂದಿಗೆ ಪ್ರಯಾಣಿಸುತ್ತಿದ್ದ ಚಾಲಕನ ಸಹವರ್ತಿ ರಾಜೇಶ್ ಕೇವತ್, ನವೆಂಬರ್ 22 ರಂದು (ಶುಕ್ರವಾರ) ಸುನ್ಸಾನ್ ಗ್ರಾಮದಲ್ಲಿ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿಯಿಡೀ ಬಾಲಕಿಯನ್ನು ಒತ್ತೆಯಾಳಾಗಿಟ್ಟ ನಂತರ, ಮರುದಿನ ಬೆಳಗ್ಗೆ ಇಬ್ಬರು ಆರೋಪಿಗಳು ಅವಳನ್ನು ರಸ್ತೆಬದಿಯಲ್ಲಿ ಎಸೆದರು ಹೋಗಿದ್ದರು.

ನವೆಂಬರ್ 25 ರಂದು, ಸಂತ್ರಸ್ತೆ ಮತ್ತು ಆಕೆಯ ತಾಯಿ ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳಾದ ಆಂಬ್ಯುಲೆನ್ಸ್ ಚಾಲಕ ವೀರೇಂದ್ರ ಚತುರ್ವೇದಿ ಮತ್ತು ಆತನ ಸಹಚರ ಕೇವತ್ ಅವರನ್ನು ಬುಧವಾರ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಬಾಲಕಿಯ ಸಹೋದರಿ ಮತ್ತು ಸೋದರ ಮಾವನ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ