AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಬೈಕ್​ನಲ್ಲಿ ಬಂದು 12 ಲಕ್ಷ ರೂ. ದೋಚಿದ ಖದೀಮರು: ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು..!

Crime News Kannada: ದೆಹಲಿಯ ನ್ಯೂ ಕೋಡ್ಲಿಯ ನಿವಾಸಿ ಪ್ರವೀಣ್ ಗಾರ್ಗ್ ಹಲವು ಕಡೆ ರಿಫೈಂಡ್ ಆಯಿಲ್ ವ್ಯವಹಾರ ನಡೆಸುತ್ತಿದ್ದರು. ಈ ಅಂಗಡಿಗಳಿಂದ ತನ್ನ ಮಾರಾಟಗಾರ ಸುಖಬೀರ್ ಹಣ ಸಂಗ್ರಹಿಸಿ ಸ್ಕೂಟಿಯಲ್ಲಿ ಹಾಜಿಪುರ ಅಂಡರ್‌ಪಾಸ್ ಬಳಿ ಹಾದು ಹೋಗುತ್ತಿದ್ದಾಗ ವೇಳೆ ಈ ಘಟನೆ ನಡೆದಿದೆ.

Crime News: ಬೈಕ್​ನಲ್ಲಿ ಬಂದು 12 ಲಕ್ಷ ರೂ. ದೋಚಿದ ಖದೀಮರು: ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 22, 2021 | 10:26 PM

Share

ಉತ್ತರ ಪ್ರದೇಶದ ನೋಯ್ಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡುಹಗಲೇ 12 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ. ಅದು ಕೂಡ ಪೊಲೀಸ್ ಠಾಣೆಯ ಅಸುಪಾಸಿನಲ್ಲೇ ಎಂಬುದೇ ಅಚ್ಚರಿ. ಹೌದು, ನೋಯ್ಡಾ ಪೊಲೀಸ್ ಠಾಣಾ ವಲಯ-39 ಪ್ರದೇಶದ ಅಂಡರ್‌ಪಾಸ್ ಬಳಿ ತೈಲದ ಕಂಪನಿಯ ಏಜೆಂಟ್‌ನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 12 ಲಕ್ಷ ರೂಪಾಯಿ ದೋಚಿದ್ದಾರೆ. ವಿವಿಧ ಕಡೆಗಳಿಂದ ಹಣ ಸಂಗ್ರಹಿಸಿ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಹಣದೊಂದಿಗೆ ಖದೀಮರು ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೆಹಲಿಯ ನ್ಯೂ ಕೋಡ್ಲಿಯ ನಿವಾಸಿ ಪ್ರವೀಣ್ ಗಾರ್ಗ್ ಹಲವು ಕಡೆ ರಿಫೈಂಡ್ ಆಯಿಲ್ ವ್ಯವಹಾರ ನಡೆಸುತ್ತಿದ್ದರು. ಈ ಅಂಗಡಿಗಳಿಂದ ತನ್ನ ಮಾರಾಟಗಾರ ಸುಖಬೀರ್ ಹಣ ಸಂಗ್ರಹಿಸಿ ಸ್ಕೂಟಿಯಲ್ಲಿ ಹಾಜಿಪುರ ಅಂಡರ್‌ಪಾಸ್ ಬಳಿ ಹಾದು ಹೋಗುತ್ತಿದ್ದಾಗ ವೇಳೆ ಮೋಟಾರ್ ಸೈಕಲ್‌ನಲ್ಲಿ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಅಲ್ಲದೆ ಸುಖಬೀರ್ ಮೇಲೆ ಹಲ್ಲೆ ನಡೆಸಿ ಸ್ಕೂಟಿಯ ಟ್ರಂಕ್‌ನಲ್ಲಿ ಇರಿಸಿದ್ದ 12 ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಕೂಡಲೇ ಸ್ಥಳೀಯ ಪೊಲೀಸ್ ಇನ್ಸ್​ಪೆಕ್ಟರ್ ಅಜಾದ್ ಸಿಂಗ್ ತೋಮರ್ ಅವರಿಗೆ ಮಾಹಿತಿ ನೀಡಿದರೂ ಅವರು ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಖದೀಮರು ಅನಾಯಾಸವಾಗಿ ಪರಾರಿಯಾಗಲು ಸಹಾಯಕವಾಗಿದೆ ಎಂದು ತೈಲ ವ್ಯಾಪಾರಿ ಪ್ರವೀಣ್ ಗಾರ್ಗ್ ಆರೋಪಿಸಿದ್ದಾರೆ. ಇತ್ತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಲವ ಕುಮಾರ್, ಕಳ್ಳರನ್ನು ಹಿಡಿಯಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅಷ್ಟೇ ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸ್ಥಳದ ಸುತ್ತಲೂ ಅಳವಡಿಸಲಾಗಿರುವ ಕಣ್ಗಾವಲಿನ ಕ್ಯಾಮೆರಾ ಆಧಾರದ ಮೇಲೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನು ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ನಡೆದಿರುವ ಈ ಘಟನೆಗೆ ಸಂಬಂಧಿಸಿದರೆ ಪೊಲೀಸ್ ಠಾಣೆ ಸೆಕ್ಟರ್-39 ರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು. ಇದು ನಿಜವಾಗಲೂ ಪೊಲೀಸರ ನಿರ್ಲಕ್ಷ್ಯದಿಂದ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲವ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: TVS Apache RR 310: ಬರಲಿದೆ ಟಿವಿಎಸ್​ ಅಪಾಚೆ 310 ಧೂಂ ಧಾಂ ಬೈಕ್

ಇದನ್ನೂ ಓದಿ: ಗಂಟೆಗೆ ಲಕ್ಷ ಲಕ್ಷ…ಬಣ್ಣದ ಲೋಕದ ನಟಿಮಣಿಯರ ಇನ್ನೊಂದು ಮುಖ ಬಹಿರಂಗ

ಇದನ್ನೂ ಓದಿ: IPL 2021: ಐಪಿಎಲ್​ನಿಂದ ಹಿಂದೆ ಸರಿದ 10 ಸ್ಟಾರ್ ಆಟಗಾರರು ಇವರೇ

(miscreants looted Rs 12 lakh, inspector in-charge suspended)

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ