ಸಾರ್ ಎಣ್ಣೆ ಬೇಕು ಎಣ್ಣೆ..! ಹಂಡ್ರೆಡ್ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?
ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್ ಕಟ್ಟಿ ಹಾಕೋಕೆ ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ. ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್ಡೌನ್ ಬಳಿಕ […]
ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್ ಕಟ್ಟಿ ಹಾಕೋಕೆ ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ.
ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್ಡೌನ್ ಬಳಿಕ ಮಾರ್ಚ್ 24ರಿಂದ ಏಪ್ರಿಲ್ 15ರವೆಗೆ ಬರೋಬ್ಬರಿ 1,03,986 ಕರೆಗಳು ನಮ್ಮ 100ಗೆ ಬಂದಿವೆ. ಅಪರಾಧ ಕೃತ್ಯಗಳ ಕರೆ ಬದಲು ಮದ್ಯದ ಕುರಿತ ಕುಡುಕರ ದೂರುಗಳೇ ಜಾಸ್ತಿಯಾಗಿದೆ.
ಮದ್ಯ ಮಾರಾಟ ಯಾವಾಗ ಪ್ರಾರಂಭವಾಗುತ್ತೆ? ಊಟ ಆಯ್ತು.. ಈಗ ಡ್ರಿಂಕ್ಸ್ ಬೇಕು. ಹೀಗೆ ಅಸಂಬಂಧ ಕರೆ ಮಾಡಿ ಪೊಲೀಸ್ ತುರ್ತು ಸೇವೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಪೊಲೀಸ್ ಕಂಟ್ರೋಲ್ ರೂಂಗೆ 4000 ಕರೆಗಳು ಬರುತ್ತಿವೆ. ಒಟ್ಟು 1.03 ಲಕ್ಷ ಕರೆಗಳ ಪೈಕಿ 22,007 ಕರೆಗಳಿಗೆ ಪೊಲೀಸರು ಸ್ಪಂದಿಸಿದ್ದಾರೆ.
Published On - 1:49 pm, Sat, 18 April 20