Belagavi News: ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಲೆ ಮಾಡಿದ ತಾಯಿ

ಇಪ್ಪತ್ತೆರಡು ವರ್ಷದ ಯುವಕ ಮಲಗಿದ ಜಾಗದಲ್ಲೇ ಶವವಾಗಿ ಹೋಗಿದ್ದ. ಹಾರ್ಟ್ ಅಟ್ಯಾಕ್ ಆಗಿ ಮಗ ಸತ್ತಿದ್ದಾನೆ ಎಂದು ತಾಯಿ ಡ್ರಾಮಾ ಮಾಡಿದ್ದಳು. ಮಗನ ಸಾವಿನ ಬಗ್ಗೆ ಸಂಶಯ ಪಟ್ಟುಕೊಂಡ ತಂದೆ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿದಾ ಕೊಲೆ ಎಂದು ತಿಳಿದಿದ್ದು, ತನಿಖೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ತಾಯಿಯೇ ಕೊಲೆ ಮಾಡಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.

Belagavi News: ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಲೆ ಮಾಡಿದ ತಾಯಿ
ಆರೋಪಿ ತಾಯಿ, ಮೃತ ಮಗ
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 24, 2023 | 10:19 AM

ಬೆಳಗಾವಿ: ಈ ಪೋಟೋದಲ್ಲಿರುವ ಯುವಕನ ಹೆಸರು ಹರಿಪ್ರಸಾದ್ ಬೋಸಲೆ(22)ವರ್ಷದ ಈತ ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ಪಟ್ಟಣದ ನಾವಿ ಗಲ್ಲಿಯ ನಿವಾಸಿ. ಹರಿಪ್ರಸಾದ್ ಮೇ.28ರಂದು ಮನೆಯಲ್ಲಿ ಮಲಗಿದ್ದಾಗಲೇ ಶವವಾಗಿ ಹೋಗಿದ್ದ. ಈ ಕುರಿತು ಅನುಮಾನ ಯುವಕನ ತಂದೆಗೆ ಬಂದಿದ್ದು, ತನ್ನ ಮಗನ ಸಾವು ಸಹಜ ಸಾವು ಅಲ್ಲವೆಂದು ರಾಯಬಾಗ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಇದು ಸಜಹ ಸಾವಲ್ಲ, ಕೊಲೆ ಎಂದು ರಿಪೋರ್ಟ್ ಬಂದಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ತನಿಖೆಗಿಳಿದು ವಿಚಾರಣೆ ನಡೆಸಿದಾಗ, ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯೇ ಮಗನನ್ನ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.ಇನ್ನು ಹರಿಪ್ರಸಾದ್​ನ ತಾಯಿ ಸುಧಾ ಅಲಿಯಾಸ್ ಮಾಧವಿ ಬೋಸಲೆ ಅವರು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಡ್ರಾಮಾ ಮಾಡಿದ್ದರು. ಕೊಲೆಯಲ್ಲಿ ಆರೋಪಿ ಸುಧಾಳ ಜತೆಗೆ 7 ಜನ ಭಾಗಿಯಾಗಿದ್ದು, ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಆರೋಪಿ ಸುಧಾ ಗಂಡನನ್ನ ಬಿಟ್ಟು ಪಾತ್ರೆ ಅಂಗಡಿಯನ್ನಿಟ್ಟುಕೊಂಡು ಎರಡು ಗಂಡು ಮಕ್ಕಳ ಜತೆಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಳು. ತಾಯಿಗೆ ತಕ್ಕ ಮಗನಂತೆ ಹೇಳಿದ್ದೇಲ್ಲವನ್ನೂ ಕೇಳುತ್ತಿದ್ದ. ಈ ಮಧ್ಯೆ ಪಾತ್ರೆ ಕೊಂಡುಕೊಳ್ಳಲು ಬಂದ ಕುಮಾರ್ ಬಬಲೇಶ್ವರ್ ಎಂಬಾತನ ಜತೆಗೆ ಆರೋಪಿ ಸುಧಾ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಳು. ಈ ವಿಚಾರ ಮಗ ಹರಿಪ್ರಸಾದ್​ಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಮಗ ತಾಯಿ ಜತೆಗೆ ಜಗಳ ಮಾಡಿಕೊಂಡು ಸಂಬಂಧಿಕರಿಗೆ ಕರೆ ಮಾಡಿ ತಾಯಿಯ ವಿಚಾರ ಹೇಳಿದ್ದ.

ಇದನ್ನೂ ಓದಿ:ಅನುಮಾನ ಎಂಬ ಪಿಶಾಚಿ: ತಮ್ಮನ ಹೆಂಡತಿ ಶೀಲ ಶಂಕಿಸಿ ಕೊಲೆ, ಆರೋಪಿಗಳು ಅರೆಸ್ಟ್

ಅನೈತಿಕ ಸಂಬಂಧ ಹೊಂದಿದ್ದ ತಾಯಿ

ಆಗ ಕುಟುಂಬಸ್ಥರು ಕರೆ ಮಾಡಿ ಸುಧಾಗೆ ಬೈಯ್ದಿದ್ದರು. ಇದರಿಂದ ತನ್ನ ಅನೈತಿಕ ಸಂಬಂಧದ ವಿಚಾರ ಗೊತ್ತಾಯ್ತು, ಹೀಗೆ ಬಿಟ್ಟರೇ, ಇನ್ನೂಳಿದವರಿಗೂ ವಿಚಾರ ಗೊತ್ತಾಗಿ, ತನ್ನ ಮಾನ ಮರ್ಯಾದೆ ಹೋಗುತ್ತದೆ ಎಂದುಕೊಂಡ ಆರೋಪಿ ತಾಯಿ ಮಗನನ್ನೇ ಮುಗಿಸಲು ಸ್ಕೇಚ್ ಹಾಕಿದ್ದಳು. ಹೌದು ಪ್ರಿಯಕರ ಕುಮಾರ್ ಜತೆಗೆ ಸೇರಿಕೊಂಡು ಮೇ.28ರಂದು ರಾತ್ರಿ ಹರಿಪ್ರಸಾದ್ ಮಲಗಿದ ಮೇಲೆ ಸುಧಾ, ಚಿಕ್ಕ ಮಗ, ಆಕೆಯ ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌತಮ್ ಮಾನೆ, ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ಎಂಟು ಜನ ಕೊಲೆ ಮಾಡಿದ್ದಾರೆ. ಹರಿಪ್ರಸಾದ್​ನನ್ನ ಉಸಿರುಗಟ್ಟಿಸಿ, ಕತ್ತು ಹಿಸುಕಿ ಕೊಲೆ ಮಾಡಿ ನಂತರ ಎಲ್ಲರೂ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದರು.

ಮಗನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಡ್ರಾಮಾ

ಇತ್ತ ಬೆಳಗ್ಗೆ ಎಳುತ್ತಿದ್ದಂತೆ ತಾಯಿ ಸುಧಾ ಮಗನಿಗೆ ಹಾರ್ಟ್ ಅಟ್ಯಾಕ್ ಆಗಿದೆಯೆಂದು ಬಾಯಿ ಬಡೆದುಕೊಂಡಿದ್ದಳು. ಈ ವೇಳೆ ಆಕೆಯ ರಂಗಿನಾಟ ಕಂಡಿದ್ದ ಗಂಡ ಸಂತೋಷ ಪೊಲೀಸರಿಗೆ ಸುಳಿವು ನೀಡಿದ್ದ. ಆತನ ಹೇಳಿಕೆಯಿಂದ ತಾಯಿ ಸುಧಾಳನ್ನ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಇನ್ನು ಎಸ್ಕೇಪ್ ಆಗಿರುವ ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ನಾಲ್ಕು ಜನರ ಶೋಧ ಕಾರ್ಯ ಮುಂದುವರೆದಿದೆ. ಒಟ್ಟಾರೆ ಪಾತ್ರೆ ಕೊಳ್ಳಲು ಬಂದವನ ಜತೆಗೆ ಲವ್ವಿಡವ್ವಿ ಶುರು ಮಾಡಿಕೊಂಡು, ಅಂಗಡಿಯಲ್ಲೇ ಮಗನ ಜತೆಗೆ ಸಿಕ್ಕಿಹಾಕಿಕೊಂಡಿದ್ದಳು. ಇದನ್ನ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ ಮತ್ತು ಕುಟುಂಬಸ್ಥರು ಜೈಲು ಪಾಲಾಗಿದ್ದಾರೆ. ತಾಯಿಯಿಂದ ಒಬ್ಬ ಮಗ ಮಸಣ ಸೇರಿದ್ರೇ, ಇನ್ನೊಬ್ಬ ಮಗ ಜೈಲುಪಾಲಾಗಿದ್ದು, ಎರಡು ಮಕ್ಕಳನ್ನ ಕಳೆದುಕೊಂಡ ತಂದೆ ಅನಾಥವಾಗಿದ್ದಾನೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 24 June 23

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us