ಅನುಮಾನ ಎಂಬ ಪಿಶಾಚಿ: ತಮ್ಮನ ಹೆಂಡತಿ ಶೀಲ ಶಂಕಿಸಿ ಕೊಲೆ, ಆರೋಪಿಗಳು ಅರೆಸ್ಟ್

ತನ್ನ ತಮ್ಮನ ಹೆಂಡತಿಯ ಶೀಲದ ಬಗ್ಗೆ ಸಂಶಯಗೊಂಡು ಸಂಬಂಧಿಕರೊಂದಿಗೆ ಸೇರಿ ನಿದ್ರೆ ಮಾತ್ರೆ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶಿಗ್ಗಾವಿ ಮೂಲದ ಮಹಿಳೆಯನ್ನ ಕೊಲೆ ಮಾಡಿ ಕುಮಟಾ ಹತ್ತಿರದ ದೇವಿಮನೆ ಘಟ್ಟದಲ್ಲಿ ಎಸೆದಿದ್ದ ಆರೋಪಿಗಳು ಅಂದರ್ ಆಗಿದ್ದಾರೆ.

ಅನುಮಾನ ಎಂಬ ಪಿಶಾಚಿ: ತಮ್ಮನ ಹೆಂಡತಿ ಶೀಲ ಶಂಕಿಸಿ ಕೊಲೆ, ಆರೋಪಿಗಳು ಅರೆಸ್ಟ್
ಆರೋಪಿಗಳು ಅಂದರ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 22, 2023 | 7:10 AM

ಉತ್ತರ ಕನ್ನಡ: ತನ್ನ ತಮ್ಮನ ಹೆಂಡತಿಯ ಶೀಲದ ಬಗ್ಗೆ ಸಂಶಯಗೊಂಡು ಸಂಬಂಧಿಕರೊಂದಿಗೆ ಸೇರಿ ನಿದ್ರೆ ಮಾತ್ರೆ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದೇ ತಿಂಗಳು ಜೂ.17 ನೇ ತಾರೀಕಿನಂದು ಕುಮಟಾ(Kumta) ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಮಹಿಳೆಯೊಬ್ಬಳ ಶವ ದೊರೆತಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಕುಮಟಾ ಪೊಲೀಸರು ಇದೀಗ ಪ್ರಕರಣವನ್ನ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಹಾವೇರಿ ಮೂಲದ ಶಿಗ್ಗಾವಿಯ ಯಲ್ಲಮ್ಮ ಉರ್ಫ ತನುಜಾ ಕೋಂ ಲೋಹಿತ್ ದೊಡ್ಡಮನಿ( 26) ಹತ್ಯೆಯಾದ ಮಹಿಳೆಯಾಗಿದ್ದಾಳೆ.

ತನಿಖೆ ವೇಳೆ ಹೊರಬಿತ್ತು ಸತ್ಯ

ಇನ್ನು ಈ ಪ್ರಕರಣದಲ್ಲಿ ಹತ್ಯೆಯಾದ ತನುಜಾಳ ಗಂಡನ ಅಣ್ಣ ಹಾಗೂ ಸಂಬಂಧಿಕರು ಸೇರಿ ಈಕೆಯ ಶೀಲ ಶಂಕಿಸಿ ಜಗಳವಾಡಿದ್ದರು. ಇದಲ್ಲದೇ ತನುಜಾ ನಡತೆಯಿಂದ ಅವರ ಮನೆತನದ ಘನತೆ ಗೌರವ ಹಾಳಾಗುತ್ತಿದೆ ಎಂದು ಭಾವಿಸಿದ ಸಂಬಂಧಿಕರು ಇದೇ ತಿಂಗಳ ಜೂ.16 ರಂದು ರಾತ್ರಿ ಕೋಳಿ ಊಟ ಮಾಡಿಸಿ, ತನುಜಾಳಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದಾರೆ. ಬಳಿಕ ಅವಳು ನಿದ್ರೆಗೆ ಜಾರಿದ ನಂತರ ಕುತ್ತಿಗೆಗೆ ಚೂಡಿದಾರದ ವೇಲಿನಿಂದ ಬಿಗಿದು ಸಾಯಿಸಿ, ಪುರಾವೆ ನಾಶಪಡಿಸುವ ಉದ್ದೇಶದಿಂದ ವಾಹನದಲ್ಲಿ ಹಾಕಿಕೊಂಡು ಬಂದು ಮಧ್ಯರಾತ್ರಿ ಕುಮಟಾ ಶಿರಸಿ ರಸ್ತೆಯ ದೇವಿಮನೆ ಘಟ್ಟದ ರಸ್ತೆಯ ಪಕ್ಕದ ತಗ್ಗಿನಲ್ಲಿ ಎಸೆದು ಹೋಗಿದ್ದರು.

ಇದನ್ನೂ ಓದಿ:5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ

ಇನ್ನು ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದ್ದು, ಶಿಗ್ಗಾವಿ ಮೂಲದ ಮಹೇಶ್​ ತಂದೆ ಶಿವಪ್ಪ ದೊಡ್ಡಮನಿ(36), ಕಾವ್ಯ ಕೋಂ ಅಮಿತ್ ಗೋಕಲೆ (20)ವರ್ಷ, ನೀಲಕ್ಕ ಕೋಂ ಚಂದ್ರಪ್ಪ( 50),ಗೌರಮ್ಮ ಕೋಂ ಮಲ್ಲೇಶ (40) ಮುಂಡಗೋಡಿನ ಅಮಿತ್‌ ತಂದೆ ಅಶೋಕ ಗೋಕಲೆ(26) ಬಂಧಿತರಾದವರಾಗಿದ್ದಾರೆ. ತನಿಖಾಧಿಕಾರಿ ತಿಮ್ಮಪ್ಪ ನಾಯ್ಕ ರವರ ನೇತೃತ್ವದಲ್ಲಿ ಪಿಎಸ್​ಐ ಈ.ಸಿ ಸಂಪತ್, ಪಿಎಸ್​ಐ ನವೀನ್​ ನಾಯ್ಕ, ಹಾಗೂ ಸಿ.ಹೆಚ್.ಸಿ ದಯಾನಂದ ನಾಯ್ಕ, ಲೋಕೇಶ ಅರಿಶಿಣಗುಪ್ಪಿ, ಸಿಪಿಸಿ ಗುರು ನಾಯಕ, ಪ್ರದೀಪ್ ನಾಯಕ ರವರನ್ನೊಳಗೊಂಡ ತಂಡವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಬಾಳಿ ಬದುಕ ಬೇಕಿದ್ದ ತನುಜಾಳನ್ನ ಆಕೆಯ ಗಂಡನ ಮನೆಯ ಕುಟುಂಬದವರು ಹತ್ಯೆ ಮಾಡಿದ್ದಾರೆ.

ಒಟ್ಟಿನಲ್ಲಿ ತಮ್ಮನ ಹೆಂಡತಿ ಶೀಲ ಶಂಕಿಸಿ ಕುಟುಂಬಸ್ಥರೆ ಕೊಲೆ ಮಾಡಿ, ದಟ್ಟ ಕಾಡಿನಲ್ಲಿ ಶವ ಎಸೆದು ಹೋಗಿದ್ದರು. ಅನುಮಾನಸ್ಪದ ಶವದ ಜಾಡು ಹಿಡಿದ ಕುಮಟಾ ಪೊಲೀಸರು ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:07 am, Thu, 22 June 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್