AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru: ವೈಯಕ್ತಿಕ ದ್ವೇಷ; ಸ್ನೇಹಿತರೊಟ್ಟಿಗೆ ಸೇರಿ ಟೈಲ್ಸ್ ಅಂಗಡಿ ಮಾಲೀಕನನ್ನ ಕೊಲೆ ಮಾಡಿಸಿದ ಅಮ್ಮ ಮಗಳು

ತುಮಕೂರಿನಲ್ಲಿ ನಡೆದಿದ್ದ ಟೈಲ್ಸ್ ಅಂಗಡಿ ಮಾಲೀಕನ ಭೀಕರ ಕೊಲೆಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಸ್ನೇಹಿತರೊಟ್ಟಿಗೆ ಸೇರಿ ಅಮ್ಮ ಮಗಳೇ ಅಮಾನುಷವಾಗಿ ಕೊಲೆ ಮಾಡಿಸಿದ್ದು, ತನಿಖೆಯಲ್ಲಿ ಹೊರಬಿದ್ದಿದೆ.

Tumakuru: ವೈಯಕ್ತಿಕ ದ್ವೇಷ; ಸ್ನೇಹಿತರೊಟ್ಟಿಗೆ ಸೇರಿ ಟೈಲ್ಸ್ ಅಂಗಡಿ ಮಾಲೀಕನನ್ನ ಕೊಲೆ ಮಾಡಿಸಿದ ಅಮ್ಮ ಮಗಳು
ನಾಲ್ವರು ಆರೋಪಿಗಳು
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on:Jun 18, 2023 | 8:12 AM

Share

ತುಮಕೂರು: ಜಿಲ್ಲೆಯ ಯಲ್ಲಾಪುರದಲ್ಲಿ ಮೇ.20 ರಂದು ನಡೆದಿದ್ದ ಟೈಲ್ಸ್ ಅಂಗಡಿ ಮಾಲೀಕನ ಭೀಕರ ಕೊಲೆಯ ಆರೋಪಿಗಳನ್ನ ಇದೀಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ಸಂಜೆ 7.30 ರ ಸುಮಾರಿನಲ್ಲಿ ಯಲ್ಲಾಪುರದಲ್ಲಿರುವ ಅರಫಾ ಟೈಲ್ಸ್ ಅಂಗಡಿಯ ಮಾಲೀಕ ಇಸ್ಮಾಯಿಲ್ ಅಲಿಯಾಸ್ ಜಾಕೀರ್ ತನ್ನ ಅಂಗಡಿಯಲ್ಲಿರುವಾಗಲೇ ಇಬ್ಬರು ದುಶ್ಕರ್ಮಿಗಳು ಬೈಕ್​ನಲ್ಲಿ ಬಂದು, ಮಾರಕಾಸ್ತ್ರಗಳಿಂದ ಜಾಕೀರ್​ನನ್ನ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಈ ಘಟನೆ ಬಳಿಕ ಸ್ಥಳಕ್ಕೆ ದೌಡಾಯಿಸಿದ್ದ ತುಮಕೂರು(Tumakuru) ಗ್ರಾಮಾಂತರ ಪೊಲೀಸರು ಕೇಸ್​ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಇನ್ನು ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ರಾಹುಲ್ ಕುಮಾರ್, ಪೊಲೀಸರ ವಿಶೇಷ ತಂಡ ರಚಿಸಿ ಹಂತಕರಿಗೆ ಬಲೆ ಬೀಸಿದ್ದರು. ತನಿಖೆ ಯಶಸ್ವಿಯಾಗಿ ಕೊಲೆಗೆ ಸಂಬಂಧಿಸಿದ 4 ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವಿದ್ಯಾಧರ್, ರಬಿಯಾ, ಖುಬ್ರಾ, ಜೋಯೆಲ್ ಬಂಧಿತ ಆರೋಪಿಗಳು.

ಕೊಲೆಗೆ ಕಾರಣವೇನು?

ಕೊಲೆಯಾದ ಜಾಕೀರ್ ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲುವಿನಲ್ಲಿ ವಾಸವಿದ್ದು, ದೂರದ ಸಂಬಂಧಿಗಳಾದ ಖುಬ್ರಾ ಹಾಗೂ ಅಕೆಯ ಮಗಳಾದ ರಬಿಯಾ ಪರಿಚಯವಾಗಿತ್ತು. ಇವರ ಪರಿಚಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜಾಕೀರ್, ರಬಿಯಾಗೆ ಕೆಲ ಮಾಟಮಂತ್ರದ ವಿದ್ಯೆ ಕಲಿಸಿದ್ದನಂತೆ. ಈ ಜೊತೆಗೆ ರಬಿಯಾ ಮೇಲೆ ಜಾಕೀರ್ ಮೋಹಿಸಿದ್ದನಂತೆ. ಆದರೆ, ಈ ವಿದ್ಯೆ ಕಲಿತ ಬಳಿಕ ರಬಿಯಾ ಬೇರೊಬ್ಬ ಹುಡುಗನನ್ನ ಪ್ರೇಮಿಸುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ:ಹಳಿಯಾಳ: ಜಮೀನು ವಿವಾದ, ಫಾರೆಸ್ಟ್ ವಾಚ್​ಮ್ಯಾನ್​ನ ಕಾಲು ಕತ್ತರಿಸಿ ಭೀಕರ ಕೊಲೆ

ಈ ವಿಚಾರ ತಿಳಿದ ಬಳಿಕ ರಬಿಯಾ ಹಾಗೂ ಖುಬ್ರಾಳ ಜೊತೆ ಜಾಕೀರ್ ಗಲಾಟೆ ಮಾಡಿಕೊಂಡಿದ್ದನಂತೆ. ನಿಮ್ಮ ಮಾಟಮಂತ್ರ ಶಕ್ತಿ ಕುಗ್ಗಿಸುವಂತೆ ಮಾಡ್ತೀನಿ ಹಾಗೂ ಎಲ್ಲರಿಗಿಂತ ಚೆನ್ನಾಗಿ ಬದುಕುತ್ತೇನೆ ಎಂದು ಜಾಕೀರ್ ಕುಬ್ರಾ ಹಾಗೂ ರಬೀಯಾಗೆ ಚಾಲೆಂಜ್ ಹಾಕಿ, ಅಲ್ಲಿಂದ ಯಲ್ಲಾಪುರಕ್ಕೆ‌ ಬಂದು ಟೈಲ್ಸ್ ಅಂಗಡಿ ಶುರುಮಾಡಿದ್ದ ಎನ್ನಲಾಗಿದೆ. ಇನ್ನು ಇದರಿಂದ ಕುಪಿತಗೊಂಡ ಖುಬ್ರಾ ಹಾಗೂ ರಬಿಯಾ ಪರಿಚಯಸ್ಥನಾದ ವಿದ್ಯಾಧರ ಹಾಗೂ ಸಂಬಂಧಿಯಾದ ಜೋಯೆಲ್ ಸಹಾಯ ಪಡೆದು ಜಾಕೀರ್​ನನ್ನ ಕೊಲೆ ಮಾಡಿಸಿದ್ದಾರೆ. ಸದ್ಯ ತುಮಕೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಮಾಟಮಂತ್ರದ ಮೂಡನಂಬಿಕೆಗೆ ಬಿದ್ದ ತಾಯಿ, ಮಗಳು ಒಬ್ಬನ ಹೆಣ ಕೆಡವಿರೋದು ಮಾತ್ರ ಆತಂಕದ ವಿಚಾರವೇ ಸರಿ.

ವರದಿ: ಮಹೇಶ್ ಟಿವಿ9 ತುಮಕೂರು

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sun, 18 June 23

Follow Us
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್