AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore News: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆ; ಆರೋಪಿ ಅರೆಸ್ಟ್​

ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ಮೈಸೂರು(Mysore) ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಿನ್ನೆ(ಮೇ.24) ನಡೆದಿತ್ತು. ಬಳಿಕ ಆರೋಪಿ ಎಸ್ಕೇಪ್​ ಆಗಿದ್ದ. ಇದೀಗ ಪೊಲೀಸರು ಆತನನ್ನ ಬಂಧಿಸಿದ್ದಾರೆ.

Mysore News: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆ; ಆರೋಪಿ ಅರೆಸ್ಟ್​
ಮೃತ ಮಹಿಳೆ ಮಮತಾ, ಆರೋಪಿ ಮೋಹನ್​
ಕಿರಣ್ ಹನುಮಂತ್​ ಮಾದಾರ್
|

Updated on: May 26, 2023 | 7:45 AM

Share

ಮೈಸೂರು: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ಮೈಸೂರು(Mysore) ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಿನ್ನೆ(ಮೇ.24) ನಡೆದಿತ್ತು. ಬಳಿಕ ಆರೋಪಿ ಎಸ್ಕೇಪ್​ ಆಗಿದ್ದ. ಇದೀಗ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಹೌದು ಪಾಂಡವಪುರ (Pandavapura) ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಕೊಲೆಯಾದ ರ್ದುದೈವಿ. ಸಿದ್ದಲಿಂಗಪುರದಲ್ಲಿ ಆರೋಪಿ ಹಾಸನ ಮೂಲದ ಮೋಹನ್ ಹಾಗೂ ಮಮತಾ ಇಬ್ಬರು ಒಟ್ಟಾಗಿ ಬೇಕರಿ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಇನ್ನು ನಿನ್ನೆ ಸಂಜೆ ಇಬ್ಬರ ನಡುವೆ ಏಕಾಏಕಿ ಮಾತಿಗೆ ಮಾತು‌ ಬೆಳೆದು ಮಮತಾಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಮೇಟಗಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದರು.

ಇನ್ನು ಕೊಲೆಯಾದ ಮಹಿಳೆ ಮಮತಾ ಗಂಡನಿಂದ‌ ದೂರ ಇದ್ದಳು. ಈ ಹಿನ್ನಲೆ ಆಕೆಯ ಜೊತೆ ಸಂಬಂಧ ಬೆಳೆಸಿದ್ದ ಮೋಹನ. ಜೊತೆಗೆ ಇಬ್ಬರು ಸೇರಿ ಸಿದ್ದಲಿಂಗಪುರದಲ್ಲಿ ಬೇಕರಿಯನ್ನ ಶುರು ಮಾಡಿಕೊಂಡು ನಡೆಸುತ್ತಿದ್ದರು. ಆದೇನಾಯ್ತು ಗೊತ್ತಿಲ್ಲ, ಮೇ.24 ರ ಸಂಜೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಕೋಪದಿಂದ ಮೋಹನ್​ ಕಬ್ಬಿಣದ ರಾಡ್​ನಿಂದ ಬಲವಾಗಿ ತಲೆಗೆ ಹೊಡೆದೆ ಬಿಟ್ಟಿದ್ದಾನೆ. ನೆಲಕ್ಕೆ ಬಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದು, ಆರೋಪಿ ಮೋಹನ್​ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ದೂರು ದಾಖಲಿಸಿಕೊಂಡು, ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಜಮೀನಿಗೆ ಹೋದ ಮಹಿಳೆಯ ಬರ್ಬರ ಹತ್ಯೆ; ಅರ್ಧಂಬರ್ಧ ಮಣ್ಣು ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಯಿತು ಮಹಿಳೆ ಶವ

ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ, ಮನೆ ಎದುರೇ ಕೊಚ್ಚಿ ಕೊಲೆ

ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆಯಾಗಿರುವ ಅಘಾತಕಾರಿ ಘಟನೆ ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್​ ಕುಡಚಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಇದರಿಂದ ಧಾರವಾಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್​ ಕುಡಚಿ ತಮ್ಮ ಮನೆ ಮುಂದೆ ಕುಳಿತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮಹಮ್ಮದ್​ ಕುಡಚಿ ಮನೆ ಮುಂದೆ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ ಮನೆ ಎದುರೇ ಭೀಕರವಾಗಿ ಕೊಲೆ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ