Mysore News: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆ

ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಕೊಲೆಯಾದ ರ್ದುದೈವಿ.

Mysore News: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆ
ಪ್ರಾತಿನಿಧಿಕ ಚಿತ್ರ
Follow us
|

Updated on: May 25, 2023 | 6:55 AM

ಮೈಸೂರು: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ಮೈಸೂರು(Mysore) ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ಪಾಂಡವಪುರ (Pandavapura) ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಕೊಲೆಯಾದ ರ್ದುದೈವಿ. ಸಿದ್ದಲಿಂಗಪುರದಲ್ಲಿ ಆರೋಪಿ ಹಾಸನ ಮೂಲದ ಮೋಹನ್ ಹಾಗೂ ಮಮತಾ ಇಬ್ಬರು ಒಟ್ಟಾಗಿ ಬೇಕರಿ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇನ್ನು ನಿನ್ನೆ(ಮೇ.24) ಸಂಜೆ ಇಬ್ಬರ ನಡುವೆ ಏಕಾಏಕಿ ಮಾತಿಗೆ ಮಾತು‌ ಬೆಳೆದು ಕೊಲೆ ಮಮತಾಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಟಗಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಕೊಲೆಗೆ ನಿಖರ ಕಾರಣ ತಿಳಿಯಲಿದೆ.

ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ: ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಹಲ್ಲೆಗೈದ ಆರೋಪ

ಹಾಸನ: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ ಆರೋಪ ಮಾಡಲಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲೇಶಗೌಡ, ಶಶಿಕುಮಾರ, ಗೌರೀಶ್, ಸೊಸೆ ತೀರ್ಥ ಮೇಲೆ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ವೆ ನಂಬರ್​ 211/1ರಲ್ಲಿರುವ 14 ಗುಂಟೆ ಜಮೀನು ದಾಯಾದಿಗಳ ಮಧ್ಯೆ ಕಲಹ ಕಾರಣವಾಗಿದೆ.

30 ವರ್ಷಗಳಿಂದ ಮಲ್ಲೇಶ್‌ಗೌಡ ಕುಟುಂಬ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಮಳೆ ಬಿದ್ದಿದರಿಂದ ಮಲ್ಲೇಶ್‌ಗೌಡ ಉಳುಮೆ ಮಾಡುತ್ತಿದ್ದು, ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಮಲ್ಲೇಶ್‌ಗೌಡನ ಸಹೋದರನ ಮಕ್ಕಳು ಈ ಜಮೀನು ನಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್​ ಮತ್ತು ಲೋಕೇಶ್​ ವಿರುದ್ಧ ಹಲ್ಲೆ ಆರೋಪದಡಿ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಜಮೀನು ವಿವಾದ ಹಿನ್ನೆಲೆ ಮಹಿಳೆಯ ಹತ್ಯೆ | ಆಕಸ್ಮಿಕ ಬೆಂಕಿ ತಗುಲಿ 2  ಎಕರೆ ಅಡಿಕೆ ತೋಟ ನಾಶ

ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ 4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು

ಬೆಂಗಳೂರು: ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ 4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೊಮ್ಮನಹಳ್ಳಿಯ ಬೇಗೂರು ರಸ್ತೆಯಲ್ಲಿ ನಡೆದಿದೆ. ಮೊಹಮ್ಮದ್​ ಹುಸೇನ್(31) ಮೃತ ವ್ಯಕ್ತಿ. ಪ್ರಕರಣ ಸಂಬಂಧ ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು. 4ನೇ ಮಹಡಿಯಿಂದ ಬೆತ್ತಲೆಯಾಗಿ ಬಿದ್ದು ಮೃತಪಟ್ಟಿದ್ದು,​ ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ