AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore News: ಬೊಮ್ಮನಹಳ್ಳಿ; ಪೊಲೀಸರು ವಶಕ್ಕೆ ಪಡೆಯಲು ತೆರಳಿದಾಗ ನಾಲ್ಕನೇ ಮಹಡಿಯಿಂದ ನಗ್ನನಾಗಿ ಬಿದ್ದು ಆರೋಪಿ ಸಾವು

ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ವ್ಯಕ್ತಿ 4ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ (Bommanahalli) ಬೇಗೂರು ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.

Bangalore News: ಬೊಮ್ಮನಹಳ್ಳಿ; ಪೊಲೀಸರು ವಶಕ್ಕೆ ಪಡೆಯಲು ತೆರಳಿದಾಗ ನಾಲ್ಕನೇ ಮಹಡಿಯಿಂದ ನಗ್ನನಾಗಿ ಬಿದ್ದು ಆರೋಪಿ ಸಾವು
ಸಾಂದರ್ಭಿಕ ಚಿತ್ರ
Ganapathi Sharma
|

Updated on: May 24, 2023 | 9:25 PM

Share

ಬೆಂಗಳೂರು: ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ವ್ಯಕ್ತಿ 4ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ (Bommanahalli) ಬೇಗೂರು ರಸ್ತೆಯಲ್ಲಿ ಬುಧವಾರ ಸಂಭವಿಸಿದೆ. ಮಹಡಿಯಿಂದ ಬಿದ್ದು ಮೃತಪಟ್ಟ ವ್ಯಕ್ತಿಯನ್ನು ಮೊಹಮ್ಮದ್​ ಹುಸೇನ್(31) ಎಂದು ಗುರುತಿಸಲಾಗಿದೆ. ಈತನನ್ನು ಪ್ರಕರಣವೊಂದರ ಸಂಬಂಧ ವಶಕ್ಕೆ ಪಡೆಯಲು ಪೊಲೀಸರು (Bangalore Police) ತೆರಳಿದ್ದರು. 4ನೇ ಮಹಡಿಯಲ್ಲಿ ವಶಕ್ಕೆ ಪಡೆಯುತ್ತಿದ್ದ ವೇಳೆ ಬೆತ್ತಲೆಯಾಗಿ ಬಿದ್ದು ಹುಸೇನ್ ಮೃತಪಟ್ಟಿದ್ದಾನೆ.

ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಮೊಹಮ್ಮದ್​ ಹುಸೇನ್ ಕುಟುಂಬದವರು ಆರೋಪಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮಹಮ್ಮದ್ ಹುಸೇನ್ ಪೊಲೀಸ್ ವಶದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬೊಮ್ಮನಹಳ್ಳಿ ಪೊಲೀಸ್ ಸಿಬ್ಬಂದಿ ಮೇಲೆ ಆತನ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಮೇಲೆ ಐಪಿಸಿ ಸೆಕ್ಷನ್ 302 ಅಡಿ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Crime News: ಮೂಢನಂಬಿಕೆಯಿಂದ ಪ್ರಾಣವೇ ಹೋಯ್ತು: ಭೂತ ಓಡಿಸ್ತೀನಿ ಎಂದು ಥಳಿಸಿದ ತಾಂತ್ರಿಕ, ಬಾಲಕ ಸಾವು

ಘಟನೆ ಬಳಿಕ ಸೇಂಟ್ಸ್ ಜಾನ್ಸ್ ಆಸ್ಪತ್ರೆಗೆ ಹುಸೇನ್​​ನನ್ನು ಪೊಲೀಸರು ಕರೆತಂದಿದ್ದರು. ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಎಂದು ‘ಟಿವಿ9’ ಗೆ ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಲಂಚ ಪಡೆಯುತ್ತಿದ್ದ ಪಿಎಸ್​ಐ ಲೋಕಾಯುಕ್ತ ಬಲೆಗೆ

ಶಿವಾಜಿನಗರ ಮಹಿಳಾ ಠಾಣೆ ಪಿಎಸ್ಐ ಸವಿತಾ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಸವಿತಾರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ