Crime News: ಮೂಢನಂಬಿಕೆಯಿಂದ ಪ್ರಾಣವೇ ಹೋಯ್ತು: ಭೂತ ಓಡಿಸ್ತೀನಿ ಎಂದು ಥಳಿಸಿದ ತಾಂತ್ರಿಕ, ಬಾಲಕ ಸಾವು

ಮೂಢನಂಬಿಕೆಯಿಂದಾಗಿ ಮುಗ್ಧ ಜೀವ ಬಲಿಯಾಗಿದೆ. ತಾಂತ್ರಿಕರೊಬ್ಬರು ಭೂತ ಓಡಿಸ್ತೀನಿ ಎಂದು ಬಾಲಕನೊಬ್ಬನನ್ನು ಥಳಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ.

Crime News: ಮೂಢನಂಬಿಕೆಯಿಂದ ಪ್ರಾಣವೇ ಹೋಯ್ತು: ಭೂತ ಓಡಿಸ್ತೀನಿ ಎಂದು ಥಳಿಸಿದ ತಾಂತ್ರಿಕ, ಬಾಲಕ ಸಾವು
ಮೂಢನಂಬಿಕೆImage Credit source: East India Story
Follow us
ನಯನಾ ರಾಜೀವ್
|

Updated on: May 24, 2023 | 10:43 AM

ಮೂಢನಂಬಿಕೆಯಿಂದಾಗಿ ಮುಗ್ಧ ಜೀವ ಬಲಿಯಾಗಿದೆ. ತಾಂತ್ರಿಕರೊಬ್ಬರು ಭೂತ ಓಡಿಸ್ತೀನಿ ಎಂದು ಬಾಲಕನೊಬ್ಬನನ್ನು ಥಳಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಕವಠೆ ಮಹಾಕಾಲ್‌ನಲ್ಲಿ ಭೂತೋಚ್ಚಾಟನೆಯ ಹೆಸರಿನಲ್ಲಿ 14 ವರ್ಷದ ಬಾಲಕನನ್ನು ತಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ್ದು, ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ. ಘಟನೆಯನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು.

ದೂರಿನ ಪ್ರಕಾರ ಜಿಲ್ಲೆಯ ಕವಠೆ ಮಹಾಂಕಲ್ ನಿವಾಸಿ ಆರ್ಯನ್ ದೀಪಕ್ ಲಾಂಜೆ ಎಂಬುವವರಿಗೆ ಹಲವು ದಿನಗಳಿಂದ ಜ್ವರವಿತ್ತು. ಸಾಕಷ್ಟು ಚಿಕಿತ್ಸೆ ನೀಡಿದರೂ ಪರಿಹಾರ ಸಿಗಲಿಲ್ಲ. ನಂತರ ಲಾಂಗ್ಡೆಯವರ ಕುಟುಂಬವು ಕರ್ನಾಟಕದಲ್ಲಿರುವ ಶಿರಗೂರಿನಲ್ಲಿ ತಾಂತ್ರಿಕ ಅಪ್ಪಾಸಾಹೇಬ್ ಕಾಂಬಳೆ ಅವರ ಬಳಿಗೆ ಕರೆದೊಯ್ದರು.

ಭೂತೋಚ್ಛಾಟನೆ ಮಾಡುತ್ತೇನೆ ಎಂದು ಬಾಲಕನಿಗೆ ಥಳಿಸಿದ್ದಾರೆ, ಇದರಿಂದ ಬಾಲಕನಿಗೆ ತೀವ್ರ ಗಾಯಗಳಾಗಿತ್ತು, ನಂತರ ಕುಟುಂಬವು ಅವರನ್ನು ಶಿರಗೂರಿನಿಂದ ಸುಮಾರು 40 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Belagavi News: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?

ಈ ಘಟನೆಯ ನಂತರ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ಈ ವಿಷಯ ತಿಳಿದ ಅವರು ಮೃತರ ಕುಟುಂಬಸ್ಥರನ್ನು ಹಾಗೂ ಅಂದಿನ ಸಹಾಯಕ ಪೊಲೀಸ್ ನಿರೀಕ್ಷಕ ಜಿತೇಂದ್ರ ಶಹಾನೆ ಅವರನ್ನು ಕವಠೆ ಮಹಾಂಕಲ್ ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ದೂರು ದಾಖಲಿಸಿದ್ದಾರೆ.

ಈಗ ಕರ್ನಾಟಕ ಪೊಲೀಸರು ತನಿಖೆ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಮೂಢನಂಬಿಕೆ ವಿರೋಧಿ ಕಾನೂನು ಇಲ್ಲ, ಇಂತಹ ಪರಿಸ್ಥಿತಿಯಲ್ಲಿ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ತಾಂತ್ರಿಕನ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್