Hagaribommanahalli Election Results: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್‌ನ ನೇಮರಾಜ ನಾಯ್ಕ್ ಗೆಲುವು
Hagaribommanahalli Assembly Election Results 2023 Live Counting Updates: ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಲ್‌ಬಿಪಿ ಭೀಮಾ ನಾಯ್ಕ್ ಮತ್ತೊಂದು ಅವಧಿಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಬಿ ರಾಮಣ್ಣ ಅವರನ್ನು ಕಣಕ್ಕಿಳಿಸಿದ್ದು, ಆಪ್ ಹನುಮಂತಪ್ಪ ಅವರ ಹೆಸರನ್ನು ಸೂಚಿಸಿದೆ.
Hagaribommanahalli Assembly Election Results 2023: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಹಗರಿಬೊಮ್ಮನಹಳ್ಳಿ (Hagaribommanahalli )ಯಲ್ಲಿ ಜನತಾದಳ (ಜಾತ್ಯಾತೀತ) ಅಭ್ಯರ್ಥಿ ನೇಮರಾಜ ನಾಯ್ಕ್ ಗೆಲುವಿನ ನಗೆ ಬೀರಿದ್ದಾರೆ. ಈ ಕ್ಷೇತ್ರವು ಪರಿಶಿಷ್ಟ ಜಾತಿ (SC) ವರ್ಗದ ಅಭ್ಯರ್ಥಿಗಳಿಗೆ ಮೀಸಲಾಗಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಲ್‌ಬಿಪಿ ಭೀಮಾ ನಾಯ್ಕ್ ಮತ್ತೊಂದು ಅವಧಿಗೆ ಸ್ಪರ್ಧಿಸಿದ್ದಾರೆ.2013 ರಲ್ಲಿ, ಆಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಭೀಮಾ ನಾಯ್ಕ್ ಅವರು ನೇಮರಾಜ ನಾಯ್ಕ್ ಅವರನ್ನು 125 ಮತಗಳ ಕಡಿಮೆ ಅಂತರದಿಂದ ಸೋಲಿಸಿದರು. ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ.
2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವು ಅಂದಾಜು 22.41% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು 15.19% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಕ್ಷೇತ್ರದಲ್ಲಿ ಒಟ್ಟು 2,17,545 ಅರ್ಹ ಮತದಾರರಿದ್ದರು, ಅದರಲ್ಲಿ 1,09,522 ಪುರುಷರು ಮತ್ತು 1,08,002 ಮಹಿಳೆಯರು ಮತ್ತು 21 ನೋಂದಾಯಿತ ಮತದಾರರು ತೃತೀಯಲಿಂಗಿಗಳಾಗಿದ್ದರು.
ಹಗರಿಬೊಮ್ಮನಹಳ್ಳಿ (ಎಸ್‌ಸಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ರಾಮಣ್ಣ, ಕಾಂಗ್ರೆಸ್ ನಿಂದ ಎಲ್‌ಬಿಪಿ ಭೀಮಾ ನಾಯ್ಕ್, ಜೆಡಿಎಸ್ ನಿಂದ ನೇಮಿರಾಜ್ ನಾಯ್ಕ್ ಕಣದಲ್ಲಿದ್ದರು.2018ರಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿತ್ತು.2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಭೀಮಾ ನಾಯ್ಕ್ ಎಲ್‌ಬಿಪಿ ಕ್ಷೇತ್ರವನ್ನು ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಕೆ.ನೇಮರಾಜ್ ನಾಯ್ಕ ಎರಡನೇ ಸ್ಥಾನ ಪಡೆದಿದ್ದರು.
Published On - 2:12 am, Sat, 13 May 23